Get Updates
Get notified of breaking news, exclusive insights, and must-see stories!

ಬೆಂಗಳೂರು: ಮಳೆ ಅನಾಹುತದ ಹಿಂದಿನ ನಿಜವಾದ ಕಾರಣಗಳು

ಬೆಂಗಳೂರು, ಸೆಪ್ಟೆಂಬರ್ 07: ರಾಜಧಾನಿ ಬೆಂಗಳೂರಿನಲ್ಲಿ ಕೆಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಮಹಾ ಮಳೆ ಅವಾತರವನ್ನು ಸೃಷ್ಟಿಸುತ್ತಿದೆ. ಬೆಂಗಳೂರು ಮಹಾಮಳೆ ಎದುರಿಸುವ ಶಕ್ತಿಯಿಲ್ಲವೇ? ಮಹಾಮಳೆಗೆ ಬೆಂಗಳೂರು ಸಾಕಷ್ಟು ಹಾನಿಯಾಗುತ್ತಿರುವುದೇಕೆ? ಮೈಸೂರು ಅರಸರು , ಕೆಂಪೇಗೌಡರು ಕಟ್ಟಿಬೆಳೆಸಿದ ಬೆಂಗಳೂರಿನಲ್ಲಿ ಅನಾಹುತವೇ? ನಿಜಕ್ಕೂ ಮಳೆ ಅನಾಹತಕ್ಕೆ ಕಾರಣಗಳೇನು ಎಂಬುದರ ಬಗ್ಗೆ 'ಒನ್‌ಇಂಡಿಯಾ ಕನ್ನಡ' ವಿಶೇಷ ವರದಿ ಇಲ್ಲಿದೆ.

ಮಹಾಮಳೆಯ ಅವಾಂತರಕ್ಕೆ ಬೆಂಗಳೂರು ತತ್ತರಿಸಿರಿಸಿ ಹೋಗುತ್ತಿದೆ. ಇದಕ್ಕೆಲ್ಲಾ ಸರ್ಕಾರದ ಬೇಜವಾಬ್ದಾರಿತನವೋ ಅಧಿಕಾರಿಗಳ ನಿರ್ಲಕ್ಷ್ಯವೋ ಕಾರಣವಾಗುತ್ತಿದೆ. ರಾಜ್ಯ ಸರ್ಕಾರದಿಂದ 20 ಸಾವಿರ ಕೋಟಿ ಅನುದಾನ ಇರೋ ಬೆಂಗಳೂರಿನಲ್ಲಿ ಯಾಕಿಷ್ಟು ತೊಂದರೆಯಾಗುತ್ತಿದೆ. ಬಿಬಿಎಂಪಿ ಬಜೆಟ್ ನಲ್ಲಿ ಹತ್ತಿರ ಹತ್ತಿರ 11 ಸಾವಿರ ಕೋಟಿಯಿದೆ. ಕೇಂದ್ರ, ರಾಜ್ಯ ಸರ್ಕಾರದ ಅನುದಾನ ಕಡಿಮೆ ಅಂದರೂ 10 ಸಾವಿರ ಕೋಟಿ ಸಿಗುತ್ತದೆ. ಸಾವಿರಾರು ಕೋಟಿ ಅನುದಾನ ಬಂದರೂ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ.

Recommended Video

      Bengaluru Rains: ಮುಖ್ಯಮಂತ್ರಿಗಳು ಪರಿಹಾರ ಕೊಡ್ತೀವಿ ಅಂತ ಹೇಳಿ ಹೋದ್ರು | *Karnataka | OneIndia Kannada

      ಬೆಂಗಳೂರಿನಲ್ಲಿ ಶತಮಾನಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಸಿಲಿಕಾನ್ ವ್ಯಾಲಿ ಅಂತ ಕರೆಸಿಕೊಳ್ಳೋ ಬೆಂಗಳೂರಿನಲ್ಲಿ ಯಾಕಿಷ್ಟು ಸಮಸ್ಯೆಯಾಗುತ್ತಿದೆ. ವ್ಯವಸ್ಥಿತವಾಗಿ ಕೆಂಪೇಗೌಡರು, ಮೈಸೂರು ಅರಸರು ಅಡಿಪಾಯ ಹಾಕಿದ್ದರು ಸಮಸ್ಯೆ ಉದ್ಬವ ಯಾಕೆ ಎಂದು ನೋಡಿದರೇ ಅಕ್ರಮವಾಗಿ ತಲೆ ಎತ್ತಿದೆ ಲೇಔಟ್‌ಗಳು, ರಾಜಕಾಲುವೆ ಒತ್ತುವರಿ , ಕೆರೆಗಳನ್ನು ನುಗ್ಗಿರೋದು ಎದ್ದು ಕಾಣುತ್ತದೆ.

       ಸಿಲಿಕಾನ್‌ ಸಿಟಿ ಸಮಸ್ಯೆಗೆ ಕಾರಣವೇನು..?

      ಸಿಲಿಕಾನ್‌ ಸಿಟಿ ಸಮಸ್ಯೆಗೆ ಕಾರಣವೇನು..?

      - ರಾಜಕಾಲುವೆ ಒತ್ತುವರಿಯಾಗಿರೋದು
      - ರಾಜಕಾಲುವೆ ಗಾತ್ರ ಚಿಕ್ಕದು ಮಾಡಿರೋದು
      - ಕೆರೆಗಳನ್ನ ಒತ್ತುವರಿ ಮಾಡಿ ಲೇಔಟ್ ಮಾಡಿರೋದು
      - ನಗರೀಕರಣ ಹೆಚ್ಚಾಗ್ತಿರೋದೂ ಸಮಸ್ಯೆಗೆ ಕಾರಣ
      - ಕೈಗಾರಿಕೆಗಳಿಂದ ಮಾಲಿನ್ಯ ಹೆಚ್ಚಾಗಿ ಮಳೆ ಹೆಚ್ಚಾಗ್ತಿದೆ
      - ಕೇವಲ ಸೀಮಿತ ಪ್ರದೇಶಗಳಲ್ಲಿ ಮಾತ್ರ ಪ್ರವಾಹ ಕಾಣಿಸಿಕೊಳ್ತಿದೆ
      - ನೈಸರ್ಗಿಕ ಹಳ್ಳಗಳನ್ನು ಮುಚ್ಚಿರುವುದು.
      - ಕೆರೆ ಹಾಗೂ ಕಾಲುವೆಗಳಲ್ಲಿ ಹೂಳು ತುಂಬಿರುವುದು
      - ಭೂಮಿಯೊಳಗೆ ನೀರು ಇಂಗುವ ಪ್ರಮಾಣ ಕುಸಿತವಾಗಿರುವುದು

       ಅಷ್ಟ ದಿಗ್ಪಾಲಕರ ದಿನ್ಯ ಮೌನ

      ಅಷ್ಟ ದಿಗ್ಪಾಲಕರ ದಿನ್ಯ ಮೌನ

      - ಬೆಂಗಳೂರಿನವರು ಅಲ್ಲದವರು ಬೆಂಗಳೂರು ಉಸ್ತುವಾರಿ ಇರುವುದು.
      - ಕಳೆದ ಎರಡು ವರ್ಷದಿಂದ ಬಿಬಿಎಂಪಿ ಚುನಾವಣೆ ನಡೆಯದಿರೋದು.
      - ಚುನಾಯಿತ ಕಾರ್ಪೋರೇಟರ್ ಇದ್ದರೆ ಸಮಸ್ಯೆಗಳು ತಕ್ಕ ಮಟ್ಟಿಗೆ ಬಗೆಹರಿಯುತ್ತಿದ್ದವು.
      - ಸಿಎಂ ಬಳಿ ಬೆಂಗಳೂರು ಉಸ್ತುವಾರಿ ಇರುವುದರಿಂದ ಇತರೆ ಬೆಂಗಳೂರು ಸಚಿವರ ನಿರ್ಲಕ್ಷ್ಯ.
      - 8 ಜನ ಬೆಂಗಳೂರಿನಲ್ಲಿ ಸಚಿವರಿದ್ರೂ ಒಬ್ಬರಿಗೂ ಬೇಡವಾದ ಬೆಂಗಳೂರಿನ ಸಮಸ್ಯೆ.
      - ತಮ್ಮ ಕ್ಷೇತ್ರಗಳಿಗಷ್ಟೇ ಸಮಯವನ್ನು ನೀಡುತ್ತಿರೋ ಸಚಿವರು
      - ಉಸ್ತುವಾರಿ ಕೊಟ್ರೆ ಜವಾಬ್ದಾರಿ ಹೊರೋಣ ಅಂತಿರೋ ಅಷ್ಟ ದಿಗ್ಪಾಲಕರು
      - ಕರೋನಾ ಸಮಯದಲ್ಲಿ ತೋರಿದ್ದ ಉತ್ಸಾಹ ಸಮಸ್ಯೆ ಟೈಮಲ್ಲಿ ತೋರಿಸದ ಉತ್ಸಾಹ
      - ಅಷ್ಟ ದಿಗ್ಪಾಲಕರೇ ಸಿಎಂಗೆ ಮುಳುವಾದ್ರಾ?

       ಭಾರಿ ಪ್ರಮಾಣದಲ್ಲಿ ಮಳೆಯಿಂದ ನಷ್ಟ

      ಭಾರಿ ಪ್ರಮಾಣದಲ್ಲಿ ಮಳೆಯಿಂದ ನಷ್ಟ

      - ಮಹದೇವಪುರ ವಲಯದಲ್ಲಿ ಹೆಚ್ಚಿನ ಮಳೆ
      - ಬೊಮ್ಮನಹಳ್ಳಿ, ಬೆಂಗಳೂರು ಪೂರ್ವದಲ್ಲಿ ಭಾರಿ ಅನಾಹುತ
      - ಈ ಬಾರಿ ದಾಖಲೆಯ 709 ಮಿಮೀ ಮಳೆ
      - ವಾಡಿಕೆಗಿಂತ ಎರಡೂವರೆ ಪಟ್ಟು ಹೆಚ್ಚು ಮಳೆ
      - 1998ರಲ್ಲಿ ಮಳೆಗಾಲದಲ್ಲಿ 725 ಮಿಮೀ ಮಳೆಯಾಗಿತ್ತು
      - 2017ರಲ್ಲಿ ಬೊಮ್ಮನಹಲ್ಳಿ 846 ಮಿಮೀ ಮಳೆಯಾಗಿತ್ತು
      - ಪ್ರಸ್ತುತ ವರ್ಷದಲ್ಲಿ 703 ಮಿಮೀ ಮಳೆಯಾಗಿದೆ
      - ಮಹದೇವಪುರ ವಲಯ 28 ಪ್ರದೇಶದಲ್ಲಿ ಮಳೆ ನೀರು ನುಗ್ಗಿದೆ
      - ಬೊಮ್ಮನಹಲ್ಳಿಯಲ್ಲಿ 9 ಕಡೆ ಪ್ರದೇಶಗಳಲ್ಲಿ ನೀರು ನುಗ್ಗಿದೆ
      - ಪೂರ್ವ ವಲಯದಲ್ಲಿ 24 ಕಡೆ ಮಳೆ ನೀರು ನುಗ್ಗಿದೆ
      - ದೊಮ್ಮಲೂರು ಭಾಗದಲ್ಲಿ ಮಳೆ ನೀರಿನ ತೊಂದರೆಯಾಗಿದೆ
      - ಈಜಿಪುರದಲ್ಲಿ 16 , ಕೋರಮಂಗಲ 26 ಕಡೆ ಮನೆಯೊಳಗೆ ನೀರು ನುಗ್ಗಿದೆ
      - HAL ಬಳಿ ಅಪಾರ್ಟ್ ಮೆಂಟ್ ಒಳಗೆ ನೀರು ನುಗ್ಗಿದೆ

       ಕಳೆದ 10 ವರ್ಷ ಆಗಸ್ಟ್ ನಲ್ಲಿ ಬಿದ್ದ ಮಳೆ ಪ್ರಮಾಣ

      ಕಳೆದ 10 ವರ್ಷ ಆಗಸ್ಟ್ ನಲ್ಲಿ ಬಿದ್ದ ಮಳೆ ಪ್ರಮಾಣ

      - ಮಳೆ ನೀರು ತೆಗೆಯೋಕೆ 63 ಪಂಪ್ ಗಳಲ್ಲಿ43 ಪಂಪ್ ಬಳಕೆ
      - SDRF, NDRF ಮೂಲಕ ಬೋಟ್ ಬಳಕೆ
      - 2013 ರ ಆಗಸ್ಟ್ ನಲ್ಲಿ 94.3 ಮಿಮೀ ಮಳೆ
      - 2014 ಆಗಸ್ಟ್ ನಲ್ಲಿ 102.4 ಮಿಮೀ ಮಳೆ
      - 2015 ರ ಆಗಸ್ಟ್ ನಲ್ಲಿ 110 ಮಿಮೀ ಮಳೆ
      - 2016 ರ ಆಗಸ್ಟ್ ನಲ್ಲಿ 82.8 ಮಿಮೀ ಮಳೆ
      - 2017 ರ ಆಗಸ್ಟ್ ನಲ್ಲಿ 351.8 ಮಿಮೀ ಮಳೆ
      - 2018 ರ ಆಗಸ್ಟ್ ನಲ್ಲಿ 158.3 ಮಿಮೀ ಮಳೆ
      - 2019 ರ ಆಗಸ್ಟ್ ನಲ್ಲಿ 146.8 ಮಿಮೀ ಮಳೆ
      - 2020 ರ ಆಗಸ್ಟ್ ನಲ್ಲಿ 75.9 ಮಿಮೀ ಮಳೆ
      - 2021 ರ ಆಗಸ್ಟ್ ನಲ್ಲಿ 98.5 ಮಿಮೀ ಮಳೆ
      - 2022ರ ಆಗಸ್ಟ್ ನಲ್ಲಿ 377 ಮಿಮೀ ಮಳೆ

       ಕಾಣದಂತೆ ಮರೆಯಾಗಿರುವ ಕೆರೆಗಳು

      ಕಾಣದಂತೆ ಮರೆಯಾಗಿರುವ ಕೆರೆಗಳು

      - ಬೆಂಗಳೂರಿನಲ್ಲಿ ಇದ್ದ ಒಟ್ಟು ಕೆರೆ 837
      - ಪ್ರಸ್ತುತ ಇರುವ ಕೆರೆಗಳು 219
      - ಒಟ್ಟು ಕೆರೆಗಳ ವಿಸ್ತೀರ್ಣ 27,900 ಎಕರೆ
      - ಕೆರೆಜಾಗದಲ್ಲಿ 1,14,988 ಕಟ್ಟಡ ನಿರ್ಮಾಣ
      - ರಾಜಕಾಲುವೆಯಲ್ಲಿ 1,34,786 ಕಟ್ಟಡ ನಿರ್ಮಾಣ
      - ಶೂಲೆ ಕೆರೆ - ಫುಟ್ ಬಾಲ್ ಸ್ಟೇಡಿಯಂ
      - ಅಕ್ಕಿ ತಿಮ್ಮನ ಹಳ್ಳಿ ಕೆರೆ - ಹಾಕಿ ಸ್ಟೇಡಿಯಂ
      - ಸಂಪಂಗಿ ಕೆರೆ - ಕಂಠೀರವ ಸ್ಟೋಟ್ಸ್ ಕಾಪ್ಲೆಕ್ಸ್
      - ಧರ್ಮಾಂಬುಧಿ ಕೆರೆ - ಕೆಂಪೇಗೌಡ ಬಸ್ ನಿಲ್ದಾಣ
      - ಚಲ್ಲಘಟ್ಟ ಕೆರೆ - ಕರ್ನಾಟಕ ಗೋಲ್ಫ್ ಅಸೋಸಿಯೇಷನ್
      - ಕೋರಮಂಗಲದ ಕೆರೆ - ನ್ಯಾಷನಲ್ ಗೇಮ್ಸ್ ಕಾಂಪ್ಲೆಕ್ಸ್
      - ಸಿದ್ಧಿಕಟ್ಟೆ ಕೆರೆ - ಕೆ.ಆರ್. ಮಾರ್ಕೇಟ್
      - ಕಾರಂಜಿ ಕೆರೆ - ಗಾಂಧಿ ಬಜಾರ್ ಏರಿಯಾ
      - ಕೆಂಪಾಬುಧಿ ಕೆರೆ - ಒಳಚರಂಡಿ ಸಂಗ್ರಹ ಟ್ಯಾಂಕ್
      - ನಾಗಶೆಟ್ಟಿಹಳ್ಳಿ ಕೆರೆ - ಸ್ಪೇಸ್ ಡಿಪಾರ್ಟ್ ಮೆಂಟ್
      - ಕಾಡುಗೊಂಡನ ಹಳ್ಳಿ ಕೆರೆ - ಅಂಬೇಡ್ಕರ್ ಮೆಡಿಕಲ್ ಕಾಲೇಜ್
      - ದೊಮ್ಮಲೂರು ಕೆರೆ - ಬಿಡಿಎ ಲೇಔಟ್
      - ಮಿಲ್ಲರ್ಸ್ ಕೆರೆ - ಗುರು ನಾನಕ್ ಭವನ್, ಬ್ಯಾಡ್ಮಿಟನ್ ಸ್ಟೇಡಿಯಂ
      - ಸುಭಾಷ್ ನಗರ ಕೆರೆ - ರೆಸಿಡೆನ್ಸಿಯಲ್ ಲೇಔಟ್
      - ಕುರುಬರ ಹಳ್ಳಿ ಕೆರೆ - ರೆಸಿಡೆನ್ಸಿಯಲ್ ಲೇಔಟ್
      - ಕೋಡಿ ಹಳ್ಳಿ ಕೆರೆ - ರೆಸಿಡೆನ್ಸಿಯಲ್ ಲೇಔಟ್
      - ಸೀನಿವಾಗಿಲು ಕೆರೆ - ರೆಸಿಡೆನ್ಸಿಯಲ್ ಲೇಔಟ್
      - ಮಾರೇನಹಳ್ಳಿ ಕೆರೆ - ರೆಸಿಡೆನ್ಸಿಯಲ್ ಲೇಔಟ್
      - ಶಿವನಹಳ್ಳಿ ಕೆರೆ - ಆಟದ ಮೈದಾನ, ಬಸ್ ನಿಲ್ದಾಣ
      - ಚೆನ್ನಮ್ಮನ ಕೆರೆ - ಸ್ಮಶಾನ
      - ಪುಟ್ಟೇನ ಹಳ್ಳಿ ಕೆರೆ - JP ನಗರ 6ನೇ ಹಂತ
      - ಜಕ್ಕರಾಯನ ಕೆರೆ - ಆಟದ ಮೈದಾನ

      ಬೆಂಗಳೂರಿನಲ್ಲಿ ಮಳೆ ಸಾಕಷ್ಟು ಹಾನಿಯುಂಟು ಮಾಡುತ್ತಿದೆ. ಬೆಂಗಳೂರು ಮಿತಿಯನ್ನು ಮೀರಿ ಬೆಳೆದು ನಿಂತಿದೆ. ಬೆಂಗೂರಿನ ಬ್ರಾಂಡ್ ಉಳಿಯಬೇಕೆಂದರ ಸರ್ಕಾರ ಮತ್ತು ಬಿಬಿಎಂಪಿ ಯುದ್ದೋಪಾದಿಯಲ್ಲಿ ಕೆಲಸವನ್ನು ನಿರ್ವಹಿಸಿ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಸಮಸ್ಯೆಯಾಗದಂತೆ ಯೋಜನೆಗಳನ್ನು ರೂಪಿಸಬೇಕಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+