ಕೆಂಪೇಗೌಡ ಏರ್‌ಪೋರ್ಟ್ ಬಳಿ ರೈಲ್ವೆ ಹಾಲ್ಟ್ ಸ್ಟೇಷನ್, ಉಪಯೋಗವೇನು?

ಬೆಂಗಳೂರು, ಆಗಸ್ಟ್ 21: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲ್ವೆ ಹಾಲ್ಟ್ ಸ್ಟೇಷನ್ ಶೀಘ್ರವೇ ನಿರ್ಮಾಣವಾಗಲಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ಬರುವ ಪ್ರಯಾಣಿಕರು ಹಾಗೂ ಉದ್ಯೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಬಳ್ಳಾರಿ ರಸ್ತೆ ಟ್ರಂಪೆಟ್ ಫ್ಲೈಓವರ್ ಬಳಿ ರೈಲ್ವೆ ಹಾಲ್ಟ್ ಸ್ಟೇಷನ್ ನಿರ್ಮಿಸಲಾಗುತ್ತಿದೆ.

ಯಲಹಂಕ ಮಾರ್ಗವಾಗಿ ಚಿಕ್ಕಬಳ್ಳಾಪುರ ಕಡೆಗೆ ತೆರಳುವ ರೈಲ್ವೆ ಹಳಿ ಕೆಐಎ ಆವರಣಕ್ಕೆ ಹೊಂದಿಕೊಂಡಂತೆ ಹಾದು ಹೋಗುತ್ತದೆ. ಉದ್ದೇಶಿತ ಹಾಲ್ಟ್, ಕೆಐಎ ಟರ್ಮಿನಲ್ ನಿಂದ ಸುಮಾರು ಐದು ಕಿ.ಮೀ ದೂರದಲ್ಲಿ ಇರುತ್ತದೆ.

Railway Halt Station Near Kempegowda Airport

ವರ್ಷಾಂತ್ಯಕ್ಕೆ ಹಾಲ್ಟ್ ಸ್ಟೇಷನ್ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ನಿಲ್ದಾಣದ ಉದ್ಯೋಗಿಗಳು ಮತ್ತು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಪ್ರಯಾಣಿಕಸುವ ಅವಕಾಶ ಮಾಡಿಕೊಡಲಾಗುತ್ತದೆ.

ಉದ್ದೇಶಿತ ಹಾಲ್ಟ್ ಸ್ಟೇಷನ್‌ನಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯಗಳಿರಲಿವೆ. ಕೆಐಎಗೆ ಮೆಟ್ರೋ ರೈಲು ಸಂಪರ್ಕಿಸುವ ಸಬ್ ಅರ್ಬನ್ ರೈಲು ಸಂಚಾರವು ಕೆಐಎ ಮತ್ತು ನಗರದ ನಡುವೆ ಸಂಚರಿಸುವವರಿಗೆ ಸಾಕಷ್ಟು ಅನುಕೂಲವಾಗಲಿದೆ.

ಹಾಲ್ಟ್ ಸ್ಟೇಷನ್ ತಾತ್ಕಾಲಿಕ ಪರಿಹಾರವಷ್ಟೇ, ಈ ಮಾರ್ಗದಲ್ಲಿ ಒಂದೇ ಹಳಿ ಇರುವುದರಿಂದ ಹೆಚ್ಚು ರೈಲುಗಳ ಸಂಚಾರ ಸಾಧ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+