Get Updates
Get notified of breaking news, exclusive insights, and must-see stories!

Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ಡಿಸೆಂಬರ್ 28 ಮತ್ತು 29ರಂದು ವಿದ್ಯುತ್ ವ್ಯತ್ಯಯ

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕರೆಂಟ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಡಿಸೆಂಬರ್ 28 ಮತ್ತು 29ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎಂದು ತಿಳಿಯಿರಿ.

ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಬೆಂಗಳೂರಿನ ಹಲವೆಡೆ ಭಾನುವಾರ, ಸೋಮವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗಾದ್ರೆ ಎಲ್ಲೆಲ್ಲಿ ಯಾವಾಗ ಹಾಗೂ ಸಮಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ

Power Cut in Bengaluru s These Areas From December on 28 and 29 Know details

ಎಷ್ಟು ಗಂಟೆ ಪವರ್ ಕಟ್‌?: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆ.ವಿ ವಿಡಿಯಾ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಡಿಸೆಂಬರ್ 28 ಮತ್ತು 29ರಂದು ಬೆಳಗ್ಗೆ 9ರಿಂದ 12 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್‌ಮೆಂಟ್, 8ನೇ ಮೈಲಿ ರಸ್ತೆ, ರಾಮಯ್ಯ ಲೇಔಟ್, ನಾರಾಯಣ ಲೇಔಟ್, ವಿಡಿಯಾ ಸ್ಕೂಲ್, ಕುವೆಂಪು ನಗರ, ವಿಡಿಯಾ ಬಸ್ ಸ್ಟಾಪ್, ರಿಲಯನ್ಸ್ ಫ್ರೆಶ್, ಮುನಿಕೊಂಡಪ್ಪ ಲೇಔಟ್, ಅಶೋಕ್ ನಗರ, ವಿದ್ಯಾ ನಗರ, ಡಿಫೆನ್ಸ್ ಕಾಲೋನಿ, ಹಾವನೂರು, ಮಂಜುನಾಥ್ ನಗರ, ಮಹಾಲಕ್ಷ್ಮಿ ನಗರ, ಕಾಟರಾಯ ನಗರ, ವಿಜಯಲಕ್ಷ್ಮಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಅಂದಾನಪ್ಪ ಲೇಔಟ್, ಬಿಟಿಎಸ್ ಲೇಔಟ್, ಸಿದ್ದೇಶ್ವರ ಲೇಔಟ್, ಸಾಸುವೆಘಟ್ಟ, ಸೋಲದೇವನಹಳ್ಳಿಯ ಭಾಗಶಃ, ತರಬನಹಳ್ಳಿ ಮುಖ್ಯ ರಸ್ತೆ, ಹೆಸರಘಟ್ಟ ಮುಖ್ಯ ರಸ್ತೆ, ಭಾಗಶಃ ವಿಶ್ವೇಶರಯ್ಯ ಲೇಔಟ್, ರಾಯಲ್ ಎನ್‌ಕ್ಲೇವ್, ಬೈರವೇಶ್ವರ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದೆ. ಅಲ್ಲದೆ ಯಾವೆಲ್ಲಾ ಭಾಗಗಳಲ್ಲಿ ಕರೆಂಟ್ ಆಗಲಿದೆಯೋ ಆ ಪ್ರದೇಶಗಳ ನಿವಾಸಿಗಳು ಮುಂಚಿತವಾಗಿ ಚಾರ್ಜಿಂಗ್ ಸಾಧನಗಳನ್ನು ಜಾರ್ಜ್‌ ಮಾಡಿಟ್ಟುಕೊಳ್ಳುವುದು ಉತ್ತಮ.

ಇಂದು ಎಲ್ಲೆಲ್ಲಿ ಕರೆಂಟ್‌ ಕಟ್‌?: ಸೋಲದೇವನಹಳ್ಳಿ ಉಪಕೇಂದ್ರದಲ್ಲಿ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಈ ಕೆಳಗೆ ನೀಡಲಾಗಿರವ ಪ್ರದೇಶಗಳಲ್ಲಿ ಡಿಸೆಂಬರ್‌ 27ರ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್‌, ಸಾಸುವೆಘಟ್ಟ, ಬಜ್ಜಪ್ಪ ಲೇಔಟ್‌, ಶಿವಕುಮಾರಸ್ವಾಮೀಜಿ ಲೇಔಟ್‌, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟಗೆರೆ ಬಸವಣ್ಣ ದೇವಸ್ಥಾನ, ಹೊಸಹಳ್ಳಿ ಪಾಳ್ಯ, ಕೆಎಂಎಫ್ ಪಶುಸಂಗೋಪನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಅಲ್ಲದೆ, ಸೋಮಶೀತಿಹಳ್ಳಿ, ಗಾಣಿಗರಹಳ್ಳಿ, ಹುರುಳಿಚಿಕ್ಕನಹಳ್ಳಿ, ಕೆ.ಟಿ.ಪುರ, ಮಠಕೂರ್, ಐವರಕೊಂಡಪುರ, ಸೀತಕೆಂಪನಹಳ್ಳಿ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಕುರುಬರಹಳ್ಳಿ, ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯರಸ್ತೆ, ಅಚ್ಯುತ್ ನಗರ, ಸೋಲದೇವನಹಳ್ಳಿ, ಸಾಸುವೆಘಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಂತರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+