ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗಿಂತ ಪಿಜಿ ಮಾಲೀಕರೇ ಶ್ರೀಮಂತರು! ಬೆಂಗಳೂರಿನ ಟಾಪ್ 5 ಉದ್ಯೋಗಗಳ ಲಿಸ್ಟ್ Viral

ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ಮೊದಲು ನೆನಪಾಗುವುದು ಐಟಿ ಕಂಪನಿಗಳು, ಟ್ರಾಫಿಕ್ ಮತ್ತು ಕೈತುಂಬಾ ಸಂಬಳ ಪಡೆಯುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು. ಆದರೆ, ಇಲ್ಲೊಬ್ಬರು ಕಂಟೆಂಟ್ ಕ್ರಿಯೇಟರ್ ನೀಡಿರುವ ಪಟ್ಟಿ ನೋಡಿದರೆ ಬೆಂಗಳೂರಿನಲ್ಲಿ ಟೆಕ್ಕಿಗಳಿಗಿಂತ ಬೇರೆಯವರೇ ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಎಐ ಮತ್ತು ತಂತ್ರಜ್ಞಾನದ ಬಗ್ಗೆ ಕಂಟೆಂಟ್ ರಚಿಸುವ ಸಾಕ್ಷಿ ಎಂಬುವವರು, ಬೆಂಗಳೂರಿನಲ್ಲಿ ಅತಿ ಹೆಚ್ಚು ಹಣ ಗಳಿಸುವವರ ವಿಶಿಷ್ಟ ಪಟ್ಟಿಯೊಂದನ್ನು ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

PG Owners Earn More Than Techies Bengaluru Content Creator s Viral Highest Paying Careers List

ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗಿಂತ ಬೆಂಗಳೂರು ಪಿಜಿ ಮಾಲೀಕರು ರಿಚ್‌

ಸಾಕ್ಷಿ ಅವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಪಿಜಿ ಮಾಲೀಕರು. ಅವರ ಲೆಕ್ಕಾಚಾರದ ಪ್ರಕಾರ, ಒಬ್ಬ ವ್ಯಕ್ತಿ ಸುಮಾರು 40,000 ರೂಪಾಯಿಗೆ ಫ್ಲ್ಯಾಟ್ ಬಾಡಿಗೆಗೆ ಪಡೆಯುತ್ತಾನೆ. ಆ ಫ್ಲ್ಯಾಟ್‌ನ ಒಂದೊಂದು ಕೋಣೆಯಲ್ಲಿ ಮೂವರನ್ನು ಇರಿಸಿ, ಪ್ರತಿಯೊಬ್ಬರಿಂದ 10,000 ದಿಂದ 15,000 ರೂಪಾಯಿಯವರೆಗೆ ಬಾಡಿಗೆ ವಸೂಲಿ ಮಾಡುತ್ತಾನೆ. ಇದರಿಂದ ಆತ ಸುಲಭವಾಗಿ ತಿಂಗಳಿಗೆ 1 ರಿಂದ 1.5 ಲಕ್ಷ ರೂಪಾಯಿ ಆದಾಯ ಗಳಿಸುತ್ತಾನೆ.

ಇತ್ತ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸ್ವಲ್ಪ ಸಂಬಳ ಹೆಚ್ಚಳಕ್ಕಾಗಿ ರಾತ್ರಿ 2 ಗಂಟೆಯವರೆಗೂ ಎಚ್ಚರಿದ್ದು ಡಿಎಸ್‌ಎ ಪ್ರಶ್ನೆಗಳನ್ನ ಬಿಡಿಸುತ್ತಾ ಕಷ್ಟಪಡುತ್ತಾರೆ. ಆದರೆ ಪಿಜಿ ಮಾಲೀಕರು ಯಾವುದೇ ಶ್ರಮವಿಲ್ಲದೆ ಲಕ್ಷಾಂತರ ರೂಪಾಯಿ ಜೇಬಿಗೆ ಇಳಿಸಿಕೊಳ್ಳುತ್ತಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಬಾಡಿಗೆದಾರರಿಗೆ ಬ್ರೋಕರ್ ಹಾಗೂ ಮನೆ ಮಾಲೀಕರ ಕಾಟ

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಸಿಗರೇಟ್ ಅಂಗಡಿ ಮಾಲೀಕರು, ಮೂರನೇ ಸ್ಥಾನದಲ್ಲಿ ಮನೆ ಮಾಲೀಕರು, ನಾಲ್ಕನೇ ಸ್ಥಾನದಲ್ಲಿ ವಾಟರ್ ಟ್ಯಾಂಕರ್ ಮಾಲೀಕರು ಹಾಗೂ ಐದನೇ ಸ್ಥಾನದಲ್ಲಿ ಪ್ರಾಪರ್ಟಿ ಬ್ರೋಕರ್‌ಗಳು ಇದ್ದಾರೆ.

ಬ್ರೋಕರ್‌ಗಳ ಕಾರ್ಯವೈಖರಿಯನ್ನು ಲೇವಡಿ ಮಾಡಿರುವ ಸಾಕ್ಷಿ, "ಬ್ರೋಕರ್‌ಗಳು ಮೂರು ಕೆಟ್ಟ ಫ್ಲ್ಯಾಟ್‌ಗಳನ್ನ ತೋರಿಸುತ್ತಾರೆ. ಒಂದರಲ್ಲಿ ನೀರು ಸೋರುತ್ತಿರುತ್ತದೆ, ಇನ್ನೊಂದರಲ್ಲಿ ಇಲಿಗಳಿರುತ್ತವೆ. ಮೂರನೆಯದು ಮೆಟ್ರೋಗೆ ವಾಕಿಂಗ್ ಡಿಸ್ಟೆನ್ಸ್ ಎಂದು ಹೇಳಿರುತ್ತಾರೆ, ಆದರೆ ವಾಸ್ತವದಲ್ಲಿ ಅದು 5 ಕಿ.ಮೀ ದೂರವಿರುತ್ತದೆ. ಬೇರೆ ದಾರಿಯಿಲ್ಲದೆ ನೀವು ಆ ಮನೆಯನ್ನೇ ಒಪ್ಪಿಕೊಳ್ಳುತ್ತೀರಿ. ಆಗ ನಿಮ್ಮಿಂದ ಹಾಗೂ ಮನೆ ಮಾಲೀಕರಿಂದ ಇಬ್ಬರಿಂದಲೂ ತಲಾ ಒಂದು ತಿಂಗಳ ಬಾಡಿಗೆಯನ್ನು ಬ್ರೋಕರ್ ಕಮಿಷನ್ ಆಗಿ ಪಡೆಯುತ್ತಾನೆ" ಎಂದು ವಿವರಿಸಿದ್ದಾರೆ.

ವೈರಲ್ ಪೋಸ್ಟ್‌ಗೆ ಬೆಂಗಳೂರು ಟೆಕ್ಕಿಗಳ ಪ್ರತಿಕ್ರಿಯೆ

ಈ ಪೋಸ್ಟ್ ಈಗ ಬೆಂಗಳೂರಿನ ನಿವಾಸಿಗಳು, ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳ ನಡುವೆ ಚರ್ಚೆ ಹುಟ್ಟುಹಾಕಿದ್ದು, ಬಹುತೇಕರು ಇದೇ ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು "ಇದು ಅಕ್ಷರಶಃ ಸತ್ಯ" ಎಂದಿದ್ದಾರೆ. ಮತ್ತೊಬ್ಬರು, "ಸಾಫ್ಟ್‌ವೇರ್ ಎಂಜಿನಿಯರ್‌ಗಳು ತಮ್ಮ ಕೆಲಸ ಉಳಿಸಿಕೊಳ್ಳಲು ಯುರೋಪ್ ಮತ್ತು ಅಮೆರಿಕದ ಗುಣಮಟ್ಟದ ಕೆಲಸವನ್ನು ನೀಡಬೇಕಾಗುತ್ತದೆ. ಆದರೆ, ಅವರಿಗೆ ಇಲ್ಲಿ ಸಿಗುತ್ತಿರುವ ಸೇವೆಗಳ ಗುಣಮಟ್ಟ ಮಾತ್ರ ತೀರಾ ಕಳಪೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಮಯದಲ್ಲಿ ವರ್ಕ್ ಫ್ರಮ್ ಹೋಮ್ ಸಾಧ್ಯವಾಯಿತು, ಈಗ ಎಐ ಟ್ರೆಂಡ್ ನಡೆಯುತ್ತಿದೆ, ಆದರೂ ಜನರು ಈ ಬಾಡಿಗೆ ಮತ್ತು ಬ್ರೋಕರ್ ಮಾಫಿಯಾದಿಂದ ಕಷ್ಟಪಡುತ್ತಿದ್ದಾರೆ ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ. ಐಟಿ ಕಂಪನಿಗಳು ಕೇವಲ ಬೆಂಗಳೂರಿನಲ್ಲಿಯೇ ಕೇಂದ್ರೀಕೃತವಾಗಿರುವ ಕಾರಣ, ಬೇರೆ ನಗರಗಳ ಯುವಕರು ಅನಿವಾರ್ಯವಾಗಿ ಇಲ್ಲಿಗೆ ಬಂದು ಇಂತಹ ಸುಲಿಗೆಗೆ ಒಳಗಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+