5 ಸಾವಿರ ಮತದಾರರನ್ನು ಸನ್ಮಾನಿಸಿದ ನೋಬೆಲ್ ಕಾಲೇಜು

ಬೆಂಗಳೂರು, ಏ.20: ಮತದಾರರನ್ನು ಪ್ರೇರೇಪಿಸಲು ಹಮ್ಮಿಕೊಂಡಿದ್ದ ವೋಟ್ ಇಂಡಿಯಾ ವೋಟ್ ಕಾರ್ಯಕ್ರಮದಲ್ಲಿ 5 ಸಾವಿರ ಮತದಾರರಿಗೆ ಪದಕ ನೀಡಿ ಸನ್ಮಾನಿಸಲಾಯಿತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 1 ರಂದು ಉದ್ಘಾಟನೆಗೊಂಡ ಈ ಕಾರ್ಯಕ್ರಮ ಪ್ರಜೆಗಳಲ್ಲಿ ಮತದಾನದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದ್ದು ಚುನಾವಣೆಯ ದಿನ ಮತ ಚಲಾಯಿಸದವರಿಗೆ ಪದಕ ನೀಡಿ ಸನ್ಮಾನಿಸಲಾಯಿತು.

ಸುಮಾರು 40 ಮತಗಟ್ಟೆಯಲ್ಲಿ 5ಸಾವಿರ ಮತದಾರರಿಗೆ ಪದಕ ಹಾಕಲಾಯಿತು. ಜೊತೆಗೆ ಯುವ ಮತದಾರನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನದ ರಶೀದಿ ನೀಡಲಾಯಿತು. ಪ್ರಜಾಭುತ್ವದ ನಿಜವಾದ ಪ್ರಭುಗಳು ಪ್ರಜೆಗಳು ಎಂಬನ್ನು ಮನದಟ್ಟು ಮಾಡಲು ಮತದಾರರಿಗೆ ಕಿರೀಟ ಹಾಕಿ ಸನ್ಮಾನಿಸಲಾಯಿತು.

Noble college falicitates 5000 voters

ಶಿಕ್ಷಣ ಎಂಬುದು ಕೇವಲ ಪುಸ್ತಕದ ಜ್ಞಾನವಲ್ಲ. ಜೀವನಕ್ಕೆ ಬೇಕಾದ ಮೌಲ್ಯವನ್ನು ಹೇಳಿಕೊಡುವುದಾಗಿದೆ. ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ನಮ್ಮ ಸಂಸ್ಥೆ ಈ ರೀತಿಯ ಹಲವಾರು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ದೇವತಾ ಹೇಳಿದರು.

ಬಹಳಷ್ಟು ಯುವ ಮತದಾರರಿಗೆ ಈ ಒಂದು ಯೋಜನೆ ಪ್ರೋತ್ಸಾಹದಾಯಕವಾಗಿದ್ದು ರೂಪಸ್ ಎಂಬ ದ್ವಿತೀಯ ಪಿಯು ಅಲ್ಲಿ ಶೇಕಡಾ 90 ಪಡೆದ ವಿದ್ಯಾರ್ಥಿನಿ ಮಾತನಾಡಿ, '' ಇಂದು ನಾನು ಎರಡು ಕಾರಣಕ್ಕೆ ಕುಶಿಯಾಗಿದೆ.

Noble college falicitates 5000 voters

ಇಂದು ಮೊದಲ ಬಾರಿ ಮತ ಚಲಾಯಿಸಿದೆ ಹಾಗು ನೋಬಲ್ ಕಾಲೇಜು ಇಂದ ವಿದ್ಯಾರ್ಥಿ ವೇತನ ದೊರೆತಿದೆ. ಎರಡು ತಿಂಗಳ ಹಿಂದೆ ತಂದೆಯನ್ನು ಕಳೆದುಕೊಂಡ ನನಗೆ ಈ ವಿದ್ಯಾರ್ಥಿ ವೇತನದಿಂದ ಶಿಕ್ಷಣ ಮುಂದುವರೆಸಬಹುದೆಂಬ ನಂಬಿಕೆ ಮೂಡಿದೆ'' ಎಂದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+