ಮಾರ್ಕ್ -3 ಇವಿಎಂಗಳ ಪ್ರಾಥಮಿಕ ಹಂತದ ಪರಿಶೀಲನೆ ಯಶಸ್ವಿ

ಬೆಂಗಳೂರು, ಏಪ್ರಿಲ್ 25: ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಮಾರ್ಕ್ 3 ತಂತ್ರಜ್ಞಾನದ ಇವಿಎಂ ಯಂತ್ರಗಳನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಳಕೆ ಮಾಡಲಾಗುತ್ತಿದೆ.

ಈ ಸಂಬಂಧ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಕ್ 3 ಇವಿಎಂ ಮತಯಂತ್ರಗಳ ಪ್ರಥಮ ಹಂತ ಪರಿಶೀಲನೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.ರಾಜಕೀಯ ಪಕ್ಷಗಳಿಗೆ ಅಣಕು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಮಾರ್ಕ್ 3 ಇವಿಎಂ ಮತಯಂತ್ರಗಳು ಆಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಇವುಗಳ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಗಳನ್ನು ಬಿಎಎಲ್ ಸಂಸ್ಥೆ ಸಿದ್ಧಪಡಿಸಿ ನೀಡುವ ತಂತ್ರಾಂಶವನ್ನು ಮಾತ್ರ ಸ್ವೀಕರಿಸುತ್ತಿದೆ. ಇನ್ನುಳಿದಂತೆ ಯಾವುದೇ ತಂತ್ರಾಂಶವನ್ನು ಇದಕ್ಕೆ ಅಳವಡಿಸಲು ಸಾಧ್ಯವಾಗುವುದಿಲ್ಲ ಎಂದರು.

Mark 3 EVMs testing successful

ಎಂ-3 ಕಂಟ್ರೋಲ್ ಯೂನಿಟ್ ಗಳಲ್ಲಿ 24 ಬ್ಯಾಲೆಟ್ ಯೂನಿಟ್ ಗಳನ್ನು ಜೋಡಣೆ ಮಾಡಬಹುದಾಗಿದೆ. ಒಟ್ಟಾರೆಯಾಗಿ 384 ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಬಹುದಾಗಿದೆ. ಎಂ-2 ಯಂತ್ರದಲ್ಲಿ 64 ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಲು ಅವಕಾಶವಿತ್ತು. 4 ಬ್ಯಾಲೆಟ್ ಯೂನಿಟ್ ಗಳನ್ನು ಜೋಡಣೆ ಮಾಡಬಹುದಾಗಿತ್ತು ಎಂದು ವಿವರಿಸಿದರು.

ಬೆಂಗಳೂರಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಕ್ 3 ಇವಿಎಂ ಮತಯಂತ್ರಗಳ ಬಳಕೆಯಾಗುತ್ತಿದ್ದು ಇದಕ್ಕಾಗಿ 92141 ಬ್ಯಾಲೆಟ್ ಯುನಿಟ್, 82580 ಕಂಟ್ರೋಲ್ ಯೂನಿಟ್ ಹಾಗೂ 84145 ವಿವಿಪ್ಯಾಟ್ ಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+