ಪತ್ನಿಕೊಂದು, ಸಾಕುನಾಯಿ ಜೊತೆ ಮಹಡಿಯಿಂದ ಹಾರಿ ಪತಿ ಆತ್ಮಹತ್ಯೆ

ಬೆಂಗಳೂರು, ಏ.3: ಮನೆಯಲ್ಲಿ ನಿತ್ಯ ಜಗಳ, ವೈಯಕ್ತಿಕ ಕಾರಣಗಳಿಂದಾಗಿ ಮನನೊಂದು ಪತ್ನಿಯನ್ನು ಕಟ್ಟಡದ 6ನೇ ಮಹಡಿಯಿಂದ ತಳ್ಳಿ ಪತಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸದಾಶಿವ ನಗರದಲ್ಲಿ ಈ ಘಟನೆ ನಡೆದಿದೆ. ಅಲ್ಲಿಯ 8ನೇ ಮುಖ್ಯರಸ್ತೆಯ ಸೈಕಾನ್ ಪೊಲಾರಿಸ್ ಅಪಾರ್ಟ್‌ಮೆಂಟ್ ನಿವಾಸಿಗಳಾದ ಅತುಲ್ ಉಪಾಧ್ಯಾಯ(55) ಹಾಗೂ ಮಮತಾ ಉಪಾಧ್ಯಾಯ(45) ಮೃತರು.

ಮಂಗಳವಾರ ಬೆಳಗ್ಗೆ 10ರ ಸುಮಾರಿಗೆ ಫ್ಲ್ಯಾಟ್‌ನಲ್ಲಿ ಪತ್ನಿಗೆ ಡಂಬಲ್ಸ್‌ನಿಂದ ಹಲ್ಲೆ ನಡೆಸಿ ಕೊಂದ ಅತುಲ್, ನಂತರ ಆರನೇ ಮಹಡಿಗೆ ತೆರಳಿದ್ದಾರೆ. ಅಲ್ಲಿ ತಮ್ಮ ಸಾಕು ನಾಯಿಯನ್ನು ಮಹಡಿಯಿಂದ ತಳ್ಳಿ, ನಂತರ ತಾವೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮತ್ತು ಕೊಲೆ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Man kills wife, throws dog off 6th floor, jumps to death

ಮುಂಬೈ ಮೂಲದ ಅತುಲ್ ಅವರು ಎರಡು ದಶಕಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದರು. ಆರು ವರ್ಷಗಳಿಂದ ಸದಾಶಿವನಗರದ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯ ಫ್ಲ್ಯಾಟ್‌ನಲ್ಲಿ ಪತ್ನಿ ಹಾಗೂ ಸೋದರನ ಪುತ್ರನ ಜೊತೆ ವಾಸವಾಗಿದ್ದರು.

ಮೃತರ ಮನೆಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ಕ್ಯಾನ್ಸರ್ ಕಾಯಿಲೆಯೊಂದು ಮಾರಕ ರೋಗವಾಗಿದೆ ಎಂದು ಅತುಲ್ ಉಲ್ಲೇಖಿಸಿರುವುದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+