A-B & E-Khata: ಎ- ಖಾತಾ, ಬಿ - ಖಾತಾ ಮತ್ತು ಇ ಖಾತಾದಲ್ಲಿ ಮಹತ್ವದ ಬದಲಾವಣೆ, ಹೊಸ ಅಪ್ಡೇಟ್ಸ್‌ ಇಲ್ಲಿದೆ

A-Khata, B-Khata and E-Khata: ಕರ್ನಾಟಕ ಸರ್ಕಾರವು ಎ ಖಾತಾ, ಬಿ ಖಾತಾ ಹಾಗೂ ಇ ಖಾತಾ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಈ ಮೂಲಕ ಬೆಂಗಳೂರಿನ ಆಸ್ತಿದಾರರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಬಂಪರ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಆಸ್ತಿಗಳಿಗೆ ಸಂಬಂಧಿಸಿದ ಖಾತಾಗಳ ವಿಚಾರದಲ್ಲಿ ಆಗಿರುವ ಬದಲಾವಣೆಗಳು ಅಂದಾಜು 7 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಲಾಭವಾಗಲಿದೆ. ಎ ಖಾತಾ - ಬಿ ಖಾತಾ ಹಾಗೂ ಇ ಖಾತಾ ವಿಚಾರದಲ್ಲಿ ಆಗಿರುವ ಬದಲಾವಣೆಗಳು ಏನು ಎನ್ನುವ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ಬೆಂಗಳೂರಿನ ಆಸ್ತಿದಾರರಿಗೆ 6ನೇ ಗ್ಯಾರಂಟಿ - ಭೂ ಗ್ಯಾರಂಟಿ ಎಂದು ಘೋಷಿಸಿದೆ. ನಮ್ಮ ಬೆಂಗಳೂರಿನ 7 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರ ಹಿತದೃಷ್ಟಿಯಿಂದ 'ಬಿ' ಖಾತಾದಿಂದ 'ಎ' ಖಾತಾ ಪರಿವರ್ತನೆಗಾಗಿ 'ನನ್ನ ಇ-ಖಾತಾ' ಅಭಿಯಾನವನ್ನು ಮೇ 16ರಿಂದ ಆರಂಭಿಸುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Bengaluru Property

A-Khata, B-Khata and E-Khata: ಇ ಖಾತಾಗಾಗಿ ಅಭಿಯಾನ

ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಆಸ್ತಿಗಳ ಸುರಕ್ಷತೆ ಹಾಗೂ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಆಗುವ ಮೋಸವನ್ನು ತಪ್ಪಿಸುವ ಉದ್ದೇಶದಿಂದ ಪರಿಚಯಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಇಂದಿಗೂ ಹಲವು ಆಸ್ತಿದಾರರಿಗೆ ಇ ಖಾತಾ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ, ಮೇ 16ರಿಂದ "ನನ್ನ ಇ ಖಾತಾ" ಅಭಿಯಾನವನ್ನು ಕರ್ನಾಟಕ ಸರ್ಕಾರ ಪ್ರಾರಂಭಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಅಭಿಯಾನ ನಡೆಯಲಿದೆ. ಮೂರು ತಿಂಗಳ ಕಾಲ ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ನಡೆಸಲಾಗುವುದು. ಒಂದು ಪಾಲಿಕೆಗೆ ಹತ್ತು ಸ್ಥಳಗಳಂತೆ ಒಟ್ಟು 50 ಜಾಗಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ.

1. ಇ ಖಾತಾ ವಿತರಿಸಲು ಜಿಬಿಎ ವ್ಯಾಪ್ತಿಯ 50 ಕಡೆಗಳಲ್ಲಿ ಪ್ರತಿ ಶನಿವಾರ ವಿಶೇಷ ಶಿಬಿರಗಳು ನಡೆಯಲಿವೆ.

2. ನಿಮ್ಮ ಆಸ್ತಿಯನ್ನು ಅಧಿಕೃತ ವ್ಯವಸ್ಥೆಯ ಅಡಿಯಲ್ಲಿ ತರುವುದಕ್ಕೆ ಅವಕಾಶ ಇರಲಿದೆ. ಇ ಖಾತಾ ಪಡೆಯಿರಿ ನಿಮ್ಮ ಆಸ್ತಿಯನ್ನು ಭದ್ರಪಡಿಸಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

A-Khata, B-Khata and E-Khata: ಎ ಖಾತಾದಲ್ಲಿ ಹೊಸ ಅಪ್ಡೇಟ್ಸ್‌

ಇನ್ನು ಎ ಖಾತಾದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಆಸ್ತಿದಾರರ ಬಳಿ ಎ ಖಾತಾ ಇದ್ದರೆ, ಕಟ್ಟಡ ನಕ್ಷೆ ಅನುಮೋದನೆ ಪಡೆಯುವುದು ಇನ್ನು ಮುಂದಿನ ದಿನಗಳಲ್ಲಿ ಸುಲಭವಾಗಲಿದೆ.

ಎ ಖಾತಾ ಆಸ್ತಿದಾರರಿಗೆ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಳ್ಳುವುದು ಸುಲಭವಾಗಲಿದೆ.

ಸರಿಯಾದ ಆಸ್ತಿ ದಾಖಲೆಗಳಿದ್ದರೆ ನಿಮ್ಮ ಆಸ್ತಿ ಇನ್ನಷ್ಟು ಸುರಕ್ಷಿತವಾಗಿ ಇರಲಿದೆ.

ಬಿ - ಖಾತಾದಿಂದ ಎ - ಖಾತಾದಲ್ಲಿನ ಬದಲಾವಣೆ

ಇನ್ನು ಬಿ ಖಾತಾದಿಂದ ಎ ಖಾತಾಗೆ ಆಸ್ತಿಗಳ ಪರಿವರ್ತನೆಯಲ್ಲಿನ ಗೈಡ್‌ಲೈನ್ಸ್‌ ವ್ಯಾಲ್ಯೂ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಬೆಂಗಳೂರಿನ ಆಸ್ತಿದಾರರು 100 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಿ, ನಿಗದಿತ ಶೇ. 5ರಷ್ಟು ಆಸ್ತಿಯ ಗೈಡ್‌ಲೈನ್ಸ್‌ ವ್ಯಾಲ್ಯೂಗೆ ಬದಲಿಗೆ ಕೇವಲ ಶೇ. 2ರಷ್ಟು ಮಾರ್ಗಸೂಚಿ ದರ ಪಾವತಿಸಿ ತಮ್ಮ ಆಸ್ತಿಯನ್ನು ಪರಿವರ್ತಿಸಿಕೊಳ್ಳಬಹುದು. ಆದರೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಕೇವಲ 2ರಷ್ಟು ಮಾರ್ಗಸೂಚಿ ದರ ಪಾವತಿಸುವ ಅವಕಾಶವು ಇನ್ನು 100 ದಿನಗಳು ಮಾತ್ರ ಇರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+