ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆದಾಯ ಕಡಿಮೆ, ಎಸಿ ಬಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕುರಿತು ಬಿಎಂಟಿಸಿ ಚಿಂತನೆ

|
Google Oneindia Kannada News

ಬೆಂಗಳೂರು,ಜನವರಿ 28: ಹೆಚ್ಚು ಎಸಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿರುವುದರಿಂದ ಆದಾಯಕ್ಕೆ ಕುತ್ತುಂಟಾಗಿದೆ. ಹೀಗಾಗಿ ಎಸಿ ಬಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕುರಿತು ಬಿಎಂಟಿಸಿ ಚಿಂತನೆ ನಡೆಸಿದೆ.

ಕೊರೊನಾ ಲಾಕ್‌ಡೌನ್‌ಗೂ ಮೊದಲು760 ಬಿಎಂಟಿಸಿ ಎಸಿ ಬಸ್‌ಗಳು ಸಂಚರಿಸುತ್ತಿದ್ದವು ಈಗ ಕೇವಲ 150 ಬಸ್‌ಗಳು ಮಾತ್ರ ಸಂಚರಿಸುತ್ತಿವೆ.ದೈನಂದಿನ ಆದಾಯ 3.5ಕೋಟಿಯಿಂದ 2.5ಕೋಟಿಗೆ ಇಳಿಕೆಯಾಗಿದೆ. 2019ರ ಆದಾಯಕ್ಕಿಂತ ಶೇ.30ರಷ್ಟು ಕುಸಿತ ಕಂಡಿದೆ.

ಕೆಂಪೇಗೌಡ ಏರ್‌ಪೋರ್ಟ್ ಬಸ್: ಇ-ಬುಕಿಂಗ್‌ಗೆ ಪ್ರಯಾಣಿಕರ ನಿರಾಸಕ್ತಿ ಕೆಂಪೇಗೌಡ ಏರ್‌ಪೋರ್ಟ್ ಬಸ್: ಇ-ಬುಕಿಂಗ್‌ಗೆ ಪ್ರಯಾಣಿಕರ ನಿರಾಸಕ್ತಿ

ಡೀಸೆಲ್ ಬೆಲೆ ಏರಿಕೆಯಿಂದಾಗಿ ಕಾರ್ಯಾಚರಣೆಯ ವೆಚ್ಚಗಳು ಏರಿದ ನಂತರ ಸಾಂಕ್ರಾಮಿಕ ರೋಗಕ್ಕೂ ಮುನ್ನವೇ ವೋಲ್ವೋ ಬಸ್‌ಗಳ ಆದಾಯ ಕುಸಿದಿತ್ತು.

Low Revenuw,BMTC Treads Cautiously On AC Bus Services

ಈಗ ಬಿಎಂಟಿಸಿ ಹವಾನಿಯಂತ್ರಿತ ಬಸ್‌ ಓಡಿಸಲು ಪ್ರತಿ ಕಿ.ಮೀಗೆ 80 ರೂ ಖರ್ಚಾಗುತ್ತದೆ, ಆದರೆ ಪ್ರತಿ ಕಿ.ಮೀಗೆ 60ರೂ ಸಿಗುತ್ತದೆ.ಕೆಂಪೇಗೌಡ ಏರ್‌ಪೋರ್ಟ್ ಗೆ ಹೋಗುವಾಗ ಪ್ರತಿ ಕಿ.ಮೀಗೆ 70ರೂ ಸಿಗುತ್ತದೆ.

ಈ ಬಸ್‌ಗಳು ಪ್ರತಿ ತಿಂಗಳು 5 ಕೋಟಿ ರೂ ಆದಾಯವನ್ನು ತಂದುಕೊಡುತ್ತಿತ್ತು ಆದರೆ ಅದು ಒಂದು ಲಕ್ಷಕ್ಕೆ ಇಳಿಕೆಯಾಗಿದೆ.ಬಿಎಂಟಿಸಿಯ 6600 ಬಸ್‌ಗಳಿವೆ, ಅದರಲ್ಲಿ 862 ವೋಲ್ವೋ ಬಸ್‌ಗಳಾಗಿವೆ. ಏರ್‌ಪೋರ್ಟ್ ರಸ್ತೆಯಲ್ಲಿ 120 ಬಸ್‌ಗಳು ಸಂಚರಿಸುತ್ತವೆ.

ಕೇವಲ ನಾನ್ ಎಸಿ ಬಸ್‌ಗಳಲ್ಲಿ ಮಾತ್ರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ, ಎಸಿ ಬಸ್‌ಗಳಲ್ಲಿ ಟಿಕೆಟ್ ದರವನ್ನು ಇಳಿಕೆ ಮಾಡಿದರೂ ಕೂಡ ಯಾರೂ ಎಸಿ ಬಸ್‌ಗಳನ್ನು ಹತ್ತಲು ಮನಸ್ಸು ಮಾಡುತ್ತಿಲ್ಲ.

English summary
High operation costs and low revenues have forced the BMTC to scale down AC bus services in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X