ಬೇಸಿಗೆ ವಿಮಾನ ವೇಳಾಪಟ್ಟಿ: ಕೆಐಎಯಿಂದ ಹೊಸ ಮಾರ್ಗಗಳಿಗೆ ವಿಮಾನ
ಬೆಂಗಳೂರು, ಮಾರ್ಚ್ 28: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೇಸಿಗೆ ವಿಮಾನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ವಾರದಲ್ಲಿ ಮೂರು ಬಾರಿ ಸೌದಿ ಅರೇಬಿಯಾದ ಬಡ್ಜೆಟ್ ಕ್ಯಾರಿಯರ್ ಫೈನಾನ್ಸ್ ಸಂಸ್ಥೆ ಬೆಂಗಳೂರಿನಿಂದ ಜೆಡ್ಡಾಗೆ ವಿಮಾನ ಹಾರಾಟ ನಡೆಸಲಿದೆ. ಕೆಐಎಬಿಯಿಂದ ಎ-350 ಸೇವೆಯನ್ನು ಪ್ರಾರಭಿಸಲಿರುವ ಮೊದಲ ವಿಮಾನಯಾನ ಸಂಸ್ಥೆ ಇದಾಗಿದೆ.
ಮಾ.31ರಿಂದ ನಾಲ್ಕು ನೂತನ ಸ್ವದೇಶಿ ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ಆರಂಭಿಸಲಿದೆ. ಆಗ್ರಾ, ನಾಸಿಕ್, ಗ್ವಾಲಿಯರ್ ಮತ್ತು ಜಾಮ್‌ನಗರ ಮಾರ್ಗಗಳಲ್ಲಿ ವಿಮಾನ ಹಾರಾಟ ಆರಂಭವಾಗಲಿದ್ದು ತಡೆರಹಿತ ವಿಮಾನ ಹಾರಾಟ ಸೌಲಭ್ಯ ಸಿಗಲಿದೆ.

ಮೇ 1ರಿಂದ ಸ್ಪೈಸ್ ಜೆಟ್ ಸಿಂಗಾಪುರ ಮತ್ತು ಅಬುಧಾಬಿಗೆ ಹೆಚ್ಚುವರಿ ಹಾರಾಟ ಮತ್ತು ಮೇ17ರಿಂದ ಬೆಂಗಳೂರು ಮತ್ತು ಸಿಂಗಾಪುರದ ನಡುವೆ ಐಷಾರಾಮಿ ಎ350-900 ವಿಮಾನ ಹಾರಾಟವನ್ನು ಸಿಂಗಾಪುರ ಏರ್‌ಲೈನ್ಸ್ ಆರಂಭಿಸಿದೆ.












Click it and Unblock the Notifications