ನಾಳೆ ಮಿಂಚಿನ ನೋಂದಣಿ: ಪಟ್ಟಿಗೆ ಹೆಸರು ಸೇರಿಸಲು ಮರೆಯಬೇಡಿ

ಬೆಂಗಳೂರು, ಏಪ್ರಿಲ್ 07:ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಏ.14 ಕೊನೆಯ ದಿನಾಂಕವಾಗಿದ್ದು, ಭಾರತದ ಚುನಾವಣಾ ಆಯೋಗ ಏ.8ರಂದು ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಂಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಭಾನುವಾರ ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲ ಮತೆಗಟ್ಟೆಗಳಲ್ಲಿ ಈ ಅಭಿಯಾನ ಕಾರ್ಯ ಹಮ್ಮಿಕೊಂಡಿದೆ. 2018ರ ಜನವರಿ 1ಕ್ಕೆ 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಹರಿರುತ್ತಾರೆ.

ಧಾಖಲಾತಿಗಳಾದ ಶಾಲಾ, ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಜತೆಗೆ ವಾಸಸ್ಥಳ ದಾಖಲಾತಿಗಳಾದ ಪಡಿತರ ಚೀಟಿ, ವಿದ್ಯುತ್ ಬಿಲ್, ಮನೆ ಬಾಡಿಗೆಗೆ ಕರಾರು ಪತ್ರ, ಬ್ಯಾಂಕ್ ಪಾಸ್ ಬುಕ್, ಚಾಲನಾ ಪರವಾನಗಿ ಪತ್ರ ಮತ್ತಿತರೆ ದಾಖಲೆ ಒದಗಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಬಹುದಾಗಿದೆ.

Karnataka CEO to conduct special drive for voters on Sunday

ನೋಂದಣಿ ಸಮಯದಲ್ಲಿ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ನೀಡಬೇಕು. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವವರು ನಮೂನೆ -6, ಅನಿವಾಸಿ ಭಾರತೀಯ ಮತದಾರರು ನಮೂನೆ 6ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ನಮೂನೆ 7, ಮತದಾರರ ಪಟ್ಟಿಯಲ್ಲಿ ದೋಷವಿದ್ದರೆ ಸರಿಪಡಿಸಿಕೊಳ್ಳಲು ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+