• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಡಿಯೂರಪ್ಪ ನಾಳೆ ದೆಹಲಿಗೆ, ನಾಡಿದ್ದು ಸಂಪುಟ ವಿಸ್ತರಣೆ

|

ಬೆಂಗಳೂರು, ಡಿಸೆಂಬರ್ 10: ಬರುವ ಗುರುವಾರ( ಡಿಸೆಂಬರ್ 12)ರಂದು ಸಂಪುಟ ವಿಸ್ತರಣೆ ಖಚಿತ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಂದು ಬೆಳಗ್ಗೆ ರಾಜ್ಯ ಸಂಪುಟ ವಿಸ್ತರಣೆ ನಡೆಯಲಿದ್ದು, ಮಧ್ಯಾಹ್ನ ಮೂರು ಗಂಟೆಗೆ ಮಹತ್ವದ ಸಭೆ ನಡೆಯಲಿದೆ.

ನೂತನವಾಗಿ ಗೆದ್ದಿರುವ ಎಲ್ಲಾ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಗೆದ್ದ ಅನರ್ಹರಿಗೆ ಸಚಿವ ಸ್ಥಾನ ಗ್ಯಾರಂಟಿ, ಸೋತವರಿಗೆ?

ಗೆದ್ದ ಅನರ್ಹರಿಗೆ ಸಚಿವ ಸ್ಥಾನ ಗ್ಯಾರಂಟಿ, ಸೋತವರಿಗೆ?

ಗೆದ್ದ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಕೊಡುವುದು ಗ್ಯಾರಂಟಿ ಆದರೆ ಅನರ್ಹ ಶಾಸಕರಿಗೆ ಯಾವುದೇ ಸ್ಥಾನಮಾನವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಗೆದ್ದ ಬಿಜೆಪಿ ಎಲ್ಲ ಶಾಸಕರಿಗೂ ಕೊಟ್ಟ ಭರವಸೆ ಈಡೇರಿಸುತ್ತೇನೆ.ಎಲ್ಲರೂ ಮಂತ್ರಿ ಆಗ್ತಾರೆ.ಅವರ ರಾಜೀನಾಮೆ ಇಂದಲೇ ಸರ್ಕಾರ ಬಂದಿದೆ.

ಎರಡು ದಿನದಲ್ಲಿ ಸಂಪುಟ ವಿಸ್ತರಣೆ

ಎರಡು ದಿನದಲ್ಲಿ ಸಂಪುಟ ವಿಸ್ತರಣೆ

ಒಂದೆರೆಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಸೋತ ಅನರ್ಹ ಶಾಸಕರಿಗೆ ಸ್ಥಾನಮಾನ ಕೊಡುವ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.

ಎಂಟಿಬಿ ನಿವಾಸಕ್ಕೆ ಯಡಿಯೂರಪ್ಪ ಭೇಟಿ ಸಾಧ್ಯತೆ

ಎಂಟಿಬಿ ನಿವಾಸಕ್ಕೆ ಯಡಿಯೂರಪ್ಪ ಭೇಟಿ ಸಾಧ್ಯತೆ

ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರ ಮನೆಗೆ ಭೇಟಿ ನೀಡು ಸಾಧ್ಯತೆ ಇದೆ. ಮನೆಗೆ ಭೇಟಿ ನೀಡುತ್ತೇನೆ ಎಂದು ಎಂಟಿಬಿಗೆ ಯಡಿಯೂರಪ್ಪ ತಿಳಿಸಿದ್ದಾರೆ. ಬೆಳಗ್ಗೆ ಸಿಎಂ ಭೇಟಿಯಾಗಿ ಎಂಟಿಬಿ ನಾಗರಾಜ್ ಮಾತುಕತೆ ನಡೆಸಿದ್ದರು.

ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಜನ್ಮ ದಿನ

ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಜನ್ಮ ದಿನ

ನಿಜಲಿಂಗಪ್ಪ ಮನೆಯನ್ನ ಸರ್ಕಾರ ಖರೀದಿಸಿ ಸ್ಮಾರಕ ಮಾಡಲಾಗುವುದು ಎಂದರು. ಖರೀದಿ ಸೇರಿದಂತೆ ಸ್ಮಾರಕ ಮಾಡುವ ಜವಾಬ್ದಾರಿಯನ್ನು ಬಸವರಾಜ್ ಬೊಮ್ಮಯಿಗೆ ವಹಿಸಿದ್ದೇನೆ. ನಿಜಲಿಂಗಪ್ಪ ಗುಣಗಳು ಆದರ್ಶ ಗಳನ್ನ ನಾವು ಪಾಲಿಸಬೇಕು. ಅವರು ರಾಜ್ಯಕ್ಕೆ ಕೊಟ್ಟ ಕೊಡುಗೆ ಅವಿಸ್ಮರಣೀಯ ಎಂದಿದ್ದಾರೆ.

English summary
State Cabinet expansion is sure to be available on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X