• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್

By Mahesh
|

ಬೆಂಗಳೂರು, ಅ.7: ತಮಿಳುನಾಡಿನ ಜನತೆ ಪಾಲಿಗೆ 'ಅಮ್ಮ' ಎನಿಸಿರುವ ಜೆ. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದು ಸಾಬೀತಾಗಿ ಅಪರಾಧಿ ಎನಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ನಂತರ ಅಧಿಕಾರ ಪಡೆದಿದ್ದು, ಅನಾರೋಗ್ಯ ಪೀಡಿತರಾಗಿ ಅಪೋಲೋ ಆಸ್ಪತ್ರೆ ಸೇರಿ ಇಹಲೋಕ ವ್ಯಾಪಾರ ಮುಗಿಸಿದ್ದು ತಿಳಿದಿರಬಹುದು. ಈಗ ಪ್ರಕರಣ ಉಳಿದ ಆರೋಪಿಗಳಿಗೂ ನಾಲ್ಕು ವರ್ಷ ಜೈಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ಪ್ರಕಟಿಸಿದೆ.

ಈಗ ಈ ಪ್ರಕರಣದ ಸಹ ಆರೋಪಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಆವರನ್ನು ಈ ಪ್ರಕರಣ ಕಾಡುತ್ತಿದೆ. ಸುಪ್ರೀಂಕೋರ್ಟಿನಲ್ಲಿ ಮುಂದಿನ ವಿಚಾರಣೆ, ತೀರ್ಪು ನಿರೀಕ್ಷೆಯಿದೆ. ಇಷ್ಟಕ್ಕೂ ಈ ಕೇಸ್ ಆರಂಭವಾಗಿದ್ದು ಯಾವಾಗ? ಅಲ್ಲಿಂದ ಇಲ್ಲಿ ತನಕದ ಕಾನೂನು ಸಮರದಲ್ಲಿ ನಡೆದ ಪ್ರಮುಖ ಘಟನಾವಳಿಗಳೇನು? ಎಂಬುದರ ಬಗ್ಗೆ ಟೈಮ್ ಲೈನ್ ಇಲ್ಲಿದೆ.

ಭ್ರಷ್ಟಾಚಾರ ಆರೋಪ ಹೊತ್ತಿದ್ದ ಜಯಲಲಿತಾ ಅವರ ವಿರುದ್ಧ ಆರೋಪ ಹೊರೆಸಿದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕಾನೂನು ಹೋರಾಟ ನಡೆಸಲು 1996ರಲ್ಲಿ ವಿಶೇಷ ಕೋರ್ಟ್ ಆರಂಭಿಸಿತು.

1991 ರಿಂದ 1996 ರ ತನಕ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಅವರು 96ರಿಂದ 2014ರ ತನಕ ಕಾನೂನು ಸಮರ ನಡೆಸುತ್ತಾ ಬಂದಿದ್ದಾರೆ. ಅಲ್ಲಿಂದ ಇಂದಿನ ತನಕ ನಡೆದ ಪ್ರಮುಖ ಘಟನೆಗಳ ವಿವರ ಹೀಗಿದೆ:

* 1996: ಜನತಾ ಪಾರ್ಟಿ ನಾಯಕರಾಗಿದ್ದ(ಈಗ ಬಿಜೆಪಿ ಸೇರಿರುವ) ಡಾ. ಸುಬ್ರಮಣ್ಯಂ ಸ್ವಾಮಿ ಅವರು ಜಯಲಲಿತಾ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾನದಲ್ಲಿ 66.65 ಕೋಟಿ ರು ಆಸ್ತಿಯನ್ನು ಅಕ್ರಮವಾಗಿ ಗಳಿಕೆ(1991 ರಿಂದ 1996ರ ಅವಧಿ) ಮಾಡಿರುವ ಆರೋಪ ಹೊರೆಸಿ ಕೇಸ್ ದಾಖಲಿಸಿದರು.

* ಡಿ.7, 1996: ಜಯಲಲಿತಾ ಹಾಗೂ ಶಶಿಕಲಾ ಸೇರಿ ಇನ್ನಿಬ್ಬರ ಮೇಲೆ ಅಕ್ರಮ ಆಸ್ತಿ ಗಳಿಕೆ ಹಾಗೂ ಇನ್ನಿತರ ಆರೋಪ ಹೊರೆಸಲಾಯಿತು.

* 1997: ಜಯಲಲಿತಾ ಹಾಗೂ ಇನ್ನಿತರ ಮೂವರು ಆರೋಪಿಗಳ ವಿರುದ್ಧ ವಿಚಾರಣೆಗಾಗಿ ಚೆನ್ನೈನಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆರಂಭ.

* ಜೂ.4, 1997: ಭ್ರಷ್ಟಚಾರ ನಿಗ್ರಹ ಕಾಯ್ದೆ 1988ರ ಅನ್ವಯ ಸೆಕ್ಷನ್ 120-B IPC, 13(2) ಜೊತೆಗೆ 13(1)ಇ ಅಡಿಯಲ್ಲಿ ಜಯಾ ಹಾಗೂ ಇತರೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿ ಕೋರ್ಟಿಗೆ ಸಲ್ಲಿಕೆ.

* ಅಕ್ಟೋಬರ್ 1, 1997: ಗವರ್ನರ್ ಎಂ.ಫಾತೀಮಾ ಬೀವಿ ಅವರು ಜಯಾ ವಿರುದ್ಧ ತನಿಖೆಗೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಜಯಲಲಿತಾ ಸಲ್ಲಿಸಿದ್ದ ಅರ್ಜಿ ಸೇರಿದಂತೆ ಮೂರು ಅರ್ಜಿಗಳನ್ನು ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತು.

+ 2000ರ ತನಕ ಸುಮಾರು 250 ಸಾಕ್ಷಿಗಳ ವಿಚಾರಣೆ ನಡೆಸಲಾಯಿತು 10 ಸಾಕ್ಷಿಗಳ ವಿಚಾರಣೆ ಬಾಕಿ ಇದೆ ಎಂದು ಕೋರ್ಟಿಗೆ ವರದಿ ಸಲ್ಲಿಸಲಾಯಿತು.

+ 2001ರಲ್ಲಿ ಮೇ ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆದು ಎಐಎಡಿಎಂಕೆ ಭರ್ಜರಿ ವಿಜಯ ದಾಖಲಿಸಿ ಜಯಲಲಿತಾ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

+ ತಾನ್ಸಿ(Tamil Nadu Small Industries Corporation) ಭೂ ಹಗರಣದಲ್ಲಿ ಜಯಾ ವಿರುದ್ಧ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ನಂತರ ಇದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ ಜಯ ಪಡೆದುಕೊಂಡರು.

* ಸೆಪ್ಟೆಂಬರ್ 21, 2001: ಮುಖ್ಯಮಂತ್ರಿ ಸ್ಥಾನವನ್ನು ತೊರೆದ ಜಯಲಲಿತಾ ಅವರು ಪನ್ನೀರ್ ಸೆಲ್ವಂ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದರಿ.

* ಫೆಬ್ರವರಿ 21, 2002: ಉಪಚುನಾವಣೆಯಲ್ಲಿ ಆಂಡಿಪಟ್ಟಿ ಕ್ಷೇತ್ರದಿಂದ ಜಯಲಲಿತಾ ಅವರು ಅಸೆಂಬ್ಲಿಗೆ ಪುನರಾಯ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.

+ ಎಐಎಡಿಎಂಕೆ ಅಧಿಕಾರಕ್ಕೆ ಬರುತ್ತಿದ್ದಂತೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ ಸಾಕ್ಷಿಗಳು.

+ ಕೇಸಿನಿಂದ ಹಿಂದೆ ಸರಿದ ಮೂವರು ಸರ್ಕಾರಿ ಅಭಿಯೋಜಕರು.

* 2003: ತಮಿಳುನಾಡಿನಲ್ಲಿ ಜಯಲಲಿತಾ ಅವರ ಸರ್ಕಾರವಿದೆ. ಹೀಗಾಗಿ ಸಿಎಂ ಜಯಾ ಅವರ ವಿರುದ್ಧದ ಪ್ರಕರಣ ವಿಚಾರಣೆ ನಿಷ್ಪಕ್ಷಪಾತದಿಂದ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸುವಂತೆ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ ಅನ್ಬಳಗನ್ ಅವರು ಸುಪ್ರೀಂಕೋರ್ಟ್ ನಲ್ಲಿ ಮನವಿ ಸಲ್ಲಿಕೆ.

* ನವೆಂಬರ್ 18, 2003: ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ವರ್ಗಾಯಿಸುವಂತೆ ಸುಪ್ರೀಂಕೋರ್ಟಿನಿಂದ ಸೂಚನೆ.

* ಫೆಬ್ರವರಿ 19, 2005: ನಿವೃತ್ತ ಅಡ್ವೋಕೇಟ್ ಜನರಲ್ ಬಿ.ವಿ ಆಚಾರ್ಯ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕ(ಎಸ್ ಪಿಪಿ) ರಾಗಿ ಕರ್ನಾಟಕ ಸರ್ಕಾರ ನೇಮಿಸಿತು.

* ಅಕ್ಟೋಬರ್/ ನವೆಂಬರ್ 2011: ವಿಶೇಷ ನ್ಯಾಯಾಲಯದಲ್ಲಿ ಸುಮಾರು 1,339 ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ ಜಯಲಲಿತಾ.

* ಆಗಸ್ಟ್ 12, 2011: ವಿಶೇಷ ಸರ್ಕಾರ ಅಭಿಯೋಜಕರಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದು ರಾಜೀನಾಮೆ ಸಲ್ಲಿಸಿದ ಬಿ.ವಿ ಆಚಾರ್ಯ. ಅವರ ರಾಜೀನಾಮೆ ಒಪ್ಪಿಕೊಂಡ ಕರ್ನಾಟಕ ಸರ್ಕಾರ.

* ಫೆಬ್ರವರಿ 2, 2013: ಕರ್ನಾಟಕ ಸರ್ಕಾರದಿಂದ ವಿಶೇಷ ಸರ್ಕಾರ ಅಭಿಯೋಜಕರಾಗಿ ಜಿ. ಭವಾನಿ ಸಿಂಗ್ ನೇಮಕ.

* ಆಗಸ್ಟ್ 26, 2013: ಜಿ ಭವಾನಿ ಸಿಂಗ್ ಅವರನ್ನು ಎಸ್ ಪಿಪಿಯಾಗಿ ಮುಂದುವರೆಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರದಿಂದ ನೋಟಿಸ್ ಜಾರಿ. ಕರ್ನಾಟಕ ಹೈಕೋಟಿನ ಮುಖ್ಯ ನ್ಯಾಯಮೂರ್ತಿಗಳ ಸಲಹೆಯನ್ನು ಸರ್ಕಾರ ಪಡೆದುಕೊಂಡಿರಲಿಲ್ಲ ಎಂಬುದು ಗಮನಾರ್ಹ.

* ಸೆಪ್ಟೆಂಬರ್ 30, 2013: ಕರ್ನಾಟಕ ಸರ್ಕಾರ ನೀಡಿದ್ದ ನೋಟಿಸ್ ಅನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಎಸ್ ಪಿಪಿಯಾಗಿ ಮುಂದುವರೆಯುವಂತೆ ಭವಾನಿ ಸಿಂಗ್ ಗೆ ಸೂಚನೆ.

* ಡಿಸೆಂಬರ್ 12, 2013 : 1997ರಲ್ಲಿ ಜಯಾ ಅವರ ಬಳಿ ಇದ್ದ ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿ ಆರ್ ಬಿಐ ಕೋಶಾಗಾರದಲ್ಲಿರಿಸಲಾಗಿತ್ತು. ಈ ಎಲ್ಲಾ ಆಸ್ತಿಗಳನ್ನು ಬಹಿರಂಗವಾಗಿ ಕೋರ್ಟ್ ಮುಂದಿಡಬೇಕು ಎಂದು ಡಿಎಂಕೆ ಮುಖಂಡ ಅನ್ಬಳಗನ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್.

* ಫೆಬ್ರವರಿ 28, 2014: ಚಿನ್ನ, ಬೆಳ್ಳಿ ಮುಂತಾದ ಪದಾರ್ಥಗಳನ್ನು ಕೋರ್ಟಿನ ಮುಂದೆ ಹಾಜರು ಪಡಿಸುವಂತೆ ಕೋರುವ ಮೂಲಕ ಎಸ್ ಪಿಪಿ ಅವರು ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ಮನವಿಯನ್ನು ತಿರಸ್ಕರಿಸಿದ ಬೆಂಗಳೂರಿನ ವಿಶೇಷ ನ್ಯಾಯಾಲಯ.

* ಮಾರ್ಚ್ 14/15, 2014: ಅನಾರೋಗ್ಯದ ನೆಪವೊಡ್ಡಿ ಅಂತಿಮ ವಾದ ವಿವಾದ ಕಲಾಪದಲ್ಲಿ ಹಾಜರಾಗದ ಎಸ್ ಪಿಪಿ ಭವಾನಿ ಸಿಂಗ್ ಅವರ ಒಂದು ದಿನದ ಸಂಬಳವನ್ನು ದಂಡರೂಪದಲ್ಲಿ ಪಡೆದುಕೊಳ್ಳುವಂತೆ ವಿಶೇಷ ನ್ಯಾಯಾಲಯದಿಂದ ನಿರ್ದೇಶನ.

* ಮಾರ್ಚ್ 18, 2014: ವಿಶೇಷ ನ್ಯಾಯಾಲಯ ವಿಧಿಸಿದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಭವಾನಿ ಸಿಂಗ್.

* ಮಾರ್ಚ್ 21, 2014: ಭವಾನಿ ಸಿಂಗ್ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ವಿಶೇಷ ನ್ಯಾಯಾಲಯ ವಿಧಿಸಿದ ಆದೇಶವನ್ನು ಎತ್ತಿ ಹಿಡಿಯಿತು.

* ಆಗಸ್ಟ್ 28, 2014: ಪ್ರಕರಣದ ತೀರ್ಪನ್ನು ಸೆ.20ಕ್ಕೆ ಕಾಯ್ದಿರಿಸಿದ ವಿಶೇಷ ನ್ಯಾಯಾಲಯ. ತೀರ್ಪಿನ ದಿನ ಎಲ್ಲಾ ಆರೋಪಿಗಳು ಹಾಜರಿರುವಂತೆ ಕೋರ್ಟಿನಿಂದ ಸೂಚನೆ.

* ಸೆಪ್ಟೆಂಬರ್ 16, 2014: ಅಕ್ರಮ ಆಸ್ತಿ ಪ್ರಕರಣದ ತೀರ್ಪನ್ನು ಸೆ.27ಕ್ಕೆ ಮುಂದೂಡಿಕೆ.

* ಸೆಪ್ಟೆಂಬರ್ 27, 2014: ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್‌ ಮೈಕಲ್‌ ಕುನ್ಹಾ ಅವರು ಜಯಲಲಿತಾ, ಶಶಿಕಲಾ, ಇಳವರಸಿ, ದಿನಕರನ್ ಅವರ ವಿರುದ್ದ ಮಾಡಲಾಗಿರುವ ಆರೋಪ ಭ್ರಷ್ಟಾಚಾರ ತಡೆ ಖಾಯ್ದೆ ಸೆಕ್ಷನ್‌ 13(1)ಇ ಅಡಿ ಸಾಬೀತಾಗಿದೆ ಎಂದು ತೀರ್ಪು ಘೋಷಿಸಿದರು.

* ಸೆ. 29ರಂದು ಹೈಕೋರ್ಟ್ ರಜಾ ಕಾಲದ ಪೀಠದ ಮುಂದೆ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಧೀಶರಾದ ಜೆ.ರತ್ನಕಲಾ ಅವರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕರ ನೇಮಕಾತಿ ಗೊಂದಲದ ಹಿನ್ನಲೆಯಲ್ಲಿ ಅ.6ಕ್ಕೆ ಮುಂದೂಡಿದ್ದರು. [ಅ.7ರಂದು ಜಾಮೀನು ಅರ್ಜಿ ವಿಚಾರಣೆ]

* ಆಕ್ಟೋಬರ್ 7, 2014: ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ನ್ಯಾ. ಚಂದ್ರಶೇಖರ್ ಅವರಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ತಿರಸ್ಕರಿಸಿದೆ. [ವಿವರ ಇಲ್ಲಿ ಓದಿ]

* ಅಕ್ಟೋಬರ್ 9, 2014: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟಿನಿಂದ ಜಾಮೀನು ಪಡೆಯಲು ವಿಫಲರಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಅರ್ಜಿ ಹಾಕಿದರು. ರಾಮ್ ಜೇಠ್ಮಲಾನಿ ಅವರು ಸುಪ್ರೀಂನಲ್ಲಿ ಜಯಾ ಪರ ವಾದಿಸುತ್ತಿಲ್ಲ ಎಂಬ ಸುದ್ದಿಯೂ ಹೊರಬಂದಿತು. [ವಿವರ ಇಲ್ಲಿದೆ]

*ಅಕ್ಟೋಬರ್ 13, 2014: ಸುಪ್ರೀಂಕೋರ್ಟಿನಲ್ಲಿ ಮುಖ್ಯನ್ಯಾ. ದತ್ತು ಅವರಿದ್ದ ನ್ಯಾಯಪೀಠ ಜಯಾ ಅವರ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ಮುಂದೂಡಿದೆ. ನ್ಯಾ. ಹರೀಶ್ ಸಾಳ್ವೆ ಅನುಪಸ್ಥಿತಿಯಲ್ಲಿ ಜಯಾ ಪರ ಫಾಲಿ ನಾರಿಮನ್ ಅರ್ಜಿ ಹಾಕಿದ್ದು ವಿಶೇಷವಾಗಿತ್ತು.[ಸುದ್ದಿ ಇಲ್ಲಿದೆ]

* ಜನವರಿ 5, 2015: ಸುಪ್ರೀಂಕೋರ್ಟ್ ಆದೇಶದ ಅನ್ವಯ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರ ಏಕಸದಸ್ಯ ಪೀಠ ಜ.5ರಂದು ವಿಚಾರಣೆ ಆರಂಭಿಸಿತು. ವಿಚಾರಣೆಯನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಬೇಕು ಎಂಬ ಜಯಲಲಿತಾ ಪರ ವಕೀಲರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಮೇ.11, 2015: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 18 ವರ್ಷಗಳ ಕಾಲ ಕಾನೂನು ಸಮರ ಅಂತಿಮ ಫಲಿತಾಂಶ ಹೊರ ಬಂದಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳನ್ನು ನಿರ್ದೋಷಿಗಳು ಎಂದು ಹೈಕೋರ್ಟ್ ಜಡ್ಜ್ ಕುಮಾರಸ್ವಾಮಿ ಎಂದು ಎರಡು ಸಾಲಿನ ಆದೇಶ ನೀಡಿದ್ದಾರೆ. [ವರದಿ ಇಲ್ಲಿ ಓದಿ]

* ತಮಿಳುನಾಡಿನ ಸಿಎಂ ಜಯಲಲಿತಾಗೆ ಜಾಮೀನು ನೀಡಿದ್ದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ ಕರ್ನಾಟಕ.

* ಜಸ್ಟೀಸ್ ಪಿಸಿ ಘೋಶ್ ಹಾಗೂ ಅಮಿತಾವ್ ರಾಯ್ ಅವರಿದ್ದ ನ್ಯಾಯಪೀಠದಿಂದ ವಿಚಾರಣೆ.

2016:

* ಜೂನ್ 26ರಂದು ವಿಚಾರಣೆ ಹಾಗೂ ತೀರ್ಪು ಪ್ರಕಟಿಸುವುದಾಗಿ ಹೇಳಿದ ಸುಪ್ರೀಂಕೋರ್ಟ್

* ತ್ವರಿತಗತಿಯಲ್ಲಿ ತೀರ್ಪು ಪ್ರಕಟಿಸುವಂತೆ ಕರ್ನಾಟಕ ಸರ್ಕಾರದಿಂದ ಕೋರಿಕೆ.

* ದಸರಾ ರಜೆ ಅವಧಿ ಕೋರ್ಟ್ ನಲ್ಲಿ ತೀರ್ಪು ನೀಡಲು ನಕಾರ, ಕಾಲಾವಾಕಾಶ ಕೋರಿಕೆ.

* ಜಯಲಲಿತಾ ಅವರಿಗೆ ಅನಾರೋಗ್ಯ, ಡಿಸೆಂಬರ್ ನಲ್ಲಿ ನಿಧನ, ಎಐಎಡಿಎಂಕೆ ಪ್ರಧಾನಕಾರ್ಯದರ್ಶಿಯಾದ ಶಶಿಕಲಾ ನಟರಾಜನ್.

2017:

* ಮೂರು ತಿಂಗಳ ವಿಳಂಬವಾಗಿದ್ದು, ತೀರ್ಪು ಪ್ರಕಟಿಸುವಂತೆ ಕರ್ನಾಟಕದಿಂದ ಮತ್ತೆ ಕೋರಿಕೆ.

* ಫೆಬ್ರವರಿ ಎರಡನೇ ವಾರದಲ್ಲಿ ತೀರ್ಪು ಪ್ರಕಟ.

ಫೆಬ್ರವರಿ 14ರಂದು ನ್ಯಾ. ಅಮಿತಾವ್ ರಾವ್ ಹಾಗೂ ನ್ಯಾ ಪಿನಾಕಿ ಚಂದ್ರ ಘೋಶ್ ಅವರಿಂದ ಮಹತ್ವದ ತೀರ್ಪು. ಶಶಿಕಲಾ ನಟರಾಜನ್ ಸೇರಿದಂತೆ ಇತರೆ ಆರೋಪಿಗಳಿಗೆ ನಾಲ್ಕು ವರ್ಷಗಳ ಶಿಕ್ಷೆ ಪ್ರಕಟ[ಪರಪ್ಪನ ಅಗ್ರಹಾರ ಜೈಲು ಸೇರಲಿರುವ ಶಶಿಕಲಾ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
When the trial court in Bengaluru convicted Jayalalithaa, it had also said that due to the long pendency of the case, she had the benefit of becoming chief minister twice. Will the same apply to Sasikala who was the second accused in the case?. Here is the chronology of events from 1996-2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more