Get Updates
Get notified of breaking news, exclusive insights, and must-see stories!

ಜಯಾ ಸುಪ್ರೀಂಗೆ ಮೊರೆ, ಸೋಲೊಪ್ಪಿಕೊಂಡ ರಾಮ್?

ನವದೆಹಲಿ, ಅ.9: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟಿನಿಂದ ಜಾಮೀನು ಪಡೆಯಲು ವಿಫಲರಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಗುರುವಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಅರ್ಜಿ ಹಾಕಿದ್ದಾರೆ. ಶಿಕ್ಷೆ ಆದೇಶವನ್ನು ಅಮಾನತ್ತಿಲಿಡುವಂತೆಯೂ ಅರ್ಜಿ ಹಾಕಲಾಗಿದೆ.ಆದರೆ, ಈ ಬಾರಿ ಜಯಾ ಪರ ವಾದಿಸಲು ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಬದಲಿಗೆ ಸಾಳ್ವೆ ಬರಲಿದ್ದಾರೆ ಎಂಬ ಸುದ್ದಿ ಬಂದಿದೆ.

ಯಾಕೋ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರಿಗೂ 'ಬೇಲ್' ಕೇಸು ಗಳಿಗೂ ಆಗಿ ಬರುತ್ತಿಲ್ಲ. ಎಂಥೆಂಥಾ ಕೇಸುಗಳನ್ನು ಗೆದ್ದಿರುವ ರಾಮ್ ಅವರಿಗೆ ಇತ್ತೀಚೆಗೆ ಜಾಮೀನು ಕೇಸುಗಳು ಸೋಲಿನ ಕಹಿ ತಿನಿಸುತ್ತಿವೆ. ಜಗನ್ ಮೋಹನ್ ರೆಡ್ಡಿ ಕೇಸ್, ಅಸಾರಾಮ್ ಬಾಪು ಕೇಸ್ ಇರಬಹುದು ಇತ್ತೀಚಿನ ಜಯಾ ಕೇಸ್ ಇರಬಹುದು ರಾಮನಿಗೆ ಭಾರಿ ಹಿನ್ನಡೆ ಉಂಟು ಮಾಡಿದೆ.

ಜೇಠ್ಮಲಾನಿ ಕೇಸಿನಿಂದ ಹಿಂದಕ್ಕೆ?: ಸೊಲೊಪ್ಪಿಕೊಳ್ಳದ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ನೈತಿಕತೆ ಮುಂದಿಟ್ಟುಕೊಂಡು ಜಯಾ ಕೇಸಿನಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ. ಸುಪ್ರೀಂಕೋರ್ಟಿನಲ್ಲಿ ಜಯಾ ಪರ ಈ ಹಿಂದೆ ವಾದಿಸಿದ್ದ ಸಾಳ್ವೆ ಅವರನ್ನೇ ಮತ್ತೆ ಕರೆ ತರಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. [ನಾನೇನು ತಪ್ಪು ಮಾಡಿಲ್ಲ: ಭವಾನಿ]

Ram Jethmalani

ಕಾನೂನಿನ ಮೂಲಕ ವಿಶ್ವ ಶಾಂತಿ ಎಂಬರ್ಥ ನೀಡುವ ಸಂಸ್ಥೆ ನೀಡಿದ್ದ ಮಾನವ ಹಕ್ಕುಗಳನ್ನು ಕಾಯ್ದ ನ್ಯಾಯವಾದಿ ಎಂಬ ಪ್ರಶಸ್ತಿ ಧರಿಸಿರುವ ಜೇಠ್ಮಲಾನಿ ಅವರಿಗೆ ಜಯಲಲಿತಾ ಕೇಸಿನಲ್ಲಿ ತೀವ್ರ ಮುಖಭಂಗವಾಗಿದೆ.

ಮಾನವ ಹಕ್ಕುಗಳ ಉಲ್ಲಂಘನೆ : ನ್ಯಾಯಾಧೀಶ ಎ.ವಿ ಚಂದ್ರಶೇಖರ ಅವರು ಭ್ರಷ್ಟಾಚಾರ ಎಂಬುದು ಗಂಭೀರ ಪ್ರಕರಣ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕಾರಣಕ್ಕೆ ಕೇಸು ರದ್ದು ಮಾಡದೆ, ಜಾಮೀನು ನಿರಾಕರಿಸಿದ್ದರು. ಫಿಲಿಫೈನ್ಸ್ ನ ಸಂತ್ರಸ್ತರ ಪರ ವಾದಿಸಿ ಮಾನವ ಹಕ್ಕುಗಳನ್ನು ಕಾಯ್ದಿದ್ದ ಜೇಠ್ಮಲಾನಿ ಅವರು ಅವರ ಮುಖಕ್ಕೆ ಹೊಡೆದಂತೆ ಜಯಾ ಕೇಸಿನಲ್ಲಿ ಇದೇ ಅಂಶದ ಕಾರಣಕ್ಕೆ ಶಿಕ್ಷೆ ಆದೇಶ ರದ್ದು ಹಾಗೂ ಜಾಮೀನು ನಿರಾಕರಿಸಲಾಗಿದೆ. ಇದರಿಂದ 90 ವರ್ಷ ವಯಸ್ಸಿನ ಜೇಠ್ಮಲಾನಿ ನೊಂದಿದ್ದು, ವೈಫಲ್ಯವನ್ನು ಒಪ್ಪಿಕೊಂಡು ಸುಪ್ರೀಂಕೋರ್ಟಿನಲ್ಲಿ ವಾದಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

2011ರಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿವಿಲ್ ಕೋರ್ಟಿನಲ್ಲಿ ನಡೆದಿದ್ದ ವಿಚಾರಣೆಗೆ ಖುದ್ದು ಹಾಜರಾಗಲು ವಿನಾಯತಿ ಕೋರಿ ಜಯಲಲಿತಾ ಅವರು ಅರ್ಜಿ ಹಾಕಿದ್ದರು. ಆಗ ನ್ಯಾಯವಾಗಿ ಹರೀಶ್ ಸಾಳ್ವೆ ಅವರು ಜಯಾ ಪರ ವಾದಿಸಿದ್ದರು.

ಅದರೆ, ನ್ಯಾ ತಲ್ವೆರ್ ಭಂದರ್ ಹಾಗೂ ದೀಪಕ್ ವರ್ಮಾ ಅವರು ವಾದವನ್ನು ಪುರಸ್ಕರಿಸಿರಲಿಲ್ಲ. ನಂತರ ಪ್ರಕರಣ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದು ಜಯಾ ಅವರು ಲಿಖಿತ ಉತ್ತರಗಳನ್ನು ನೀಡಿದ್ದು, ಸೆ.27ರಂದು ಅಪರಾಧಿಯಾಗಿ ಜೈಲು ಸೇರಿದ್ದು ಇತ್ತೀಚಿನ ಕಥೆ. ಈಗ ಜಯಾ ಪರ ರಾಮ್ ಅಥವಾ ಸಾಳ್ವೆ ಇಬ್ಬರಲ್ಲಿ ಯಾರು ವಾದಿಸುತ್ತಾರೆ? ಎಂಬುದು ಕುತೂಹಲಕಾರಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+