LIVE: ಶರಣಾಗತಿಗೆ ಕಾಲಾವಕಾಶ ಕೋರಿದ ಶಶಿಕಲಾ ನಟರಾಜನ್

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 14: ತಮಿಳುನಾಡಿನ ಮುಖ್ಯಮಂತ್ರಿಯಾಗಲು ಕಾತುರದಿಂದ ಕಾದಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ರಾಜಕೀಯ ಭವಿಷ್ಯ ಮಂಗಳವಾರ ನಿರ್ಧಾರವಾಗಿದೆ. ಸುಪ್ರೀಂಕೋರ್ಟಿನ ತೀರ್ಪಿನ ನಂತರ ಶಶಿಕಲಾ ರಾಜಕೀಯ ಭವಿಷ್ಯ ಮಂಕಾಗಿದೆ. ಎರಡು ಪ್ರತ್ಯೇಕಗಳಿಗೆ ಸಂಬಂಧಿಸಿದಂತೆ ಶಶಿಕಲಾ ನಟರಾಜನ್ ಅವರು ಅಪರಾಧಿ ಎಂದು ಘೋಷಿಸಲಾಗಿದೆ. ಲೈವ್ ಅಪ್ಡೇಟ್ಸ್ ನೋಡಿ...

ಶಶಿಕಲಾ ಹಾಗೂ ಕುಟುಂಬದ ಮೇಲಿರುವ ಹಗರಣಗಳು

ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಕೇಸ್: ಟೈಮ್ ಲೈನ್

ಜೆ ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಹಾಗೂ ಸುಧಾಕರನ್ ಅವರನ್ನು ಅಪರಾಧಿ ಎಂದು ಕೆಳಹಂತದ ನ್ಯಾಯಲಯ ಘೋಷಿಸಿದೆ. ಈ ಬಗ್ಗೆ ಹೈಕೋರ್ಟಿನಲ್ಲಿ ಅಪೀಲ್ ಹಾಕಿದ ಬಳಿಕ ಎಲ್ಲರಿಗೂ ನೆಮ್ಮದಿ ಸಿಕ್ಕಿತ್ತು. ಈಗ ಪ್ರಕರಣ ಸುಪ್ರೀಂಕೋರ್ಟಿನ ತೀರ್ಪು ಎಲ್ಲರೂ ಎದುರು ನೋಡುತ್ತಿದ್ದರು.

LIVE: Chennai: Security deployment outside Poes Garden

12.00: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳ ನಂತರ ನ್ಯಾಯ ಗೆದ್ದಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ [ಪೂರ್ಣವಿವರ ಇಲ್ಲಿ ಓದಿ]
11.45: ನ್ಯಾ. ಅಮಿತಾವ್ ರಾಯ್ ಹಾಗೂ ನ್ಯಾ. ಪಿನಾಕಿ ಚಂದ್ರ ಘೋಶ್ ನೀಡಿರುವ ತೀರ್ಪಿನ ಪ್ರತಿ ಡೌನ್ ಲೋಡ್ ಮಾಡಿಕೊಳ್ಳಿ

11.30: ನಟ ಕಮಲ್ ಹಾಸನ್ ಅವರಿಂದ ಟ್ವೀಟ್


11.25: ರೆಸಾರ್ಟ್ ಸುತ್ತುವರೆದ ಪೊಲೀಸ್ ಸರ್ಪಗಾವಲು

11.15: ಬಹುಮತ ಹೊಂದಿರುವ ನಾಯಕರಿಗೆ ಅಧಿಕಾರ ಸಿಗಲಿ, ತೀರ್ಪನ್ನು ಸ್ವಾಗತಿಸಿದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ.

11.10: ಪ್ರಮುಖ ಆರೋಪಿ ಜೆ ಜಯಲಲಿತಾ ಮೃತರಾಗಿರುವುದರಿಂದ ಅವರ ಮೇಲಿನ ಆರೋಪ ಕೈಬಿಟ್ಟ ದ್ವಿಸದಸ್ಯ ಪೀಠ.ಜೆ ಜಯಲಲಿತಾ ಅವರಿಂದ 100 ಕೋಟಿ ರು ದಂಡ ವಸೂಲಿ ಮಾಡಲಾಗುವುದು.

11.06: ಪನ್ನೀರ್ ಸೆಲ್ವಂ ಬಣದಿಂದ ಹಬ್ಬದಾಚರಣೆ


11.05: ಗೋಲ್ಡನ್ ಬೇ ರೆಸಾರ್ಟ್ ನಲ್ಲಿರುವ ಶಶಿಕಲಾ ನಟರಾಜನ್ ರನ್ನು ಬಂಧಿಸಲು ಹೊರಟ ಚೆನ್ನೈ ಪೊಲೀಸರು.
* ತಕ್ಷಣವೇ ಶರಣಾಗುವಂತೆ ಸುಪ್ರೀಂಕೋರ್ಟ್ ಆದೇಶ.

11.00: ಶಶಿಕಲಾಗೆ ಮುಳುವಾದ ತೀರ್ಪು ರೀಕಾಲ್:
ಸೆಪ್ಟೆಂಬರ್ 27, 2014:
ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್‌ ಮೈಕಲ್‌ ಕುನ್ಹಾ ಅವರು ಜಯಲಲಿತಾ, ಶಶಿಕಲಾ, ಇಳವರಸಿ, ಸುಧಾಕರನ್ ಅವರ ವಿರುದ್ದ ಮಾಡಲಾಗಿರುವ ಆರೋಪ ಭ್ರಷ್ಟಾಚಾರ ತಡೆ ಖಾಯ್ದೆ ಸೆಕ್ಷನ್‌ 13(1)ಇ ಅಡಿ ಸಾಬೀತಾಗಿದೆ ಎಂದು ತೀರ್ಪು ಘೋಷಿಸಿ, ಎಲ್ಲರಿಗೂ ನಾಲ್ಕು ವರ್ಷ ಶಿಕ್ಷೆ ಹಾಗೂ ಜಯಲಲಿತಾಗೆ 100 ಕೋಟಿ ರು ದಂಡ ಹಾಗೂ ಇತರೆ ಆರೋಪಿಗಳಿಗೆ 10 ಕೋಟಿ ರು ದಂಡ ವಿಧಿಸಲಾಗಿತ್ತು. ಈ ತೀರ್ಪನ್ನು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ಮಂಗಳವಾರ(ಫೆ.14) ಎತ್ತಿ ಹಿಡಿದಿದೆ.

SC judge

10.45: ಪರಪ್ಪನ ಅಗ್ರಹಾರ ಜೈಲು ಸೇರಲಿರುವ ಶಶಿಕಲಾ ಹಾಗೂ ಇನ್ನಿತರ ಆರೋಪಿಗಳು

10.40: ಶಶಿಕಲಾ ನಟರಾಜನ್ ಅಪರಾಧಿ, ನಾಲ್ಕುವರ್ಷಗಳ ಶಿಕ್ಷೆ ಪ್ರಕಟಿಸಿದ ದ್ವಿಸದಸ್ಯಪೀಠ (ನ್ಯಾ. ಪಿನಾಕಿ ಚಂದ್ರ ಘೋಶ್ ಹಾಗೂ ನ್ಯಾ ಅಮಿತಾವ್ ರಾಯ್)
* ಕೆಳಹಂತದ ನ್ಯಾಯಾಲಯ (ಸಿಬಿಐ ವಿಶೇಷ ನ್ಯಾಯಾಲಯ) ವನ್ನು ಎತ್ತಿ ಹಿಡಿದ ದ್ವಿಸದಸ್ಯ ಪೀಠ
* ಒಟ್ಟು 10 ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸುವಂತಿಲ್ಲ, ಯಾವುದೇ ಚುನಾಯಿತ ಹುದ್ದೆ ಅಲಂಕರಿಸುವಂತಿಲ್ಲ.
* ಶಶಿಕಲಾ ನಟರಾಜನ್ ಈಗಾಗಲೇ ಸುಮಾರು 6 ತಿಂಗಳು ಜೈಲು ಶಿಕ್ಷೆ ಪೂರೈಸಿದ್ದು, ಉಳಿದ 3 ವರ್ಷ 6 ತಿಂಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಬೇಕಿದೆ.


10.35: ಸುಪ್ರೀಂಕೋರ್ಟ್ ಹಾಲ್ ನಂ 6ಕ್ಕೆ ಆಗಮಿಸಿದ ನ್ಯಾಯಮೂರ್ತಿಗಳು

ಜಯಲಲಿತಾ ಪ್ರಕರಣದ ಕೇಸ್ ಪಟ್ಟಿ:

Jayalalithaa Case fie

10.00: ತಮಿಳುನಾಡಿನಾದ್ಯಂತ 25 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ, ಜತೆಗೆ ಅರೆಸೇನಾ ಪಡೆ, ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಬಳಕೆ.
9.55: ಡಿಎಂಕೆ ಕರುಣಾನಿಧಿ ಹಾಗೂ ಸ್ಟಾಲಿನ್ ಮನೆಗೂ ಬಿಗಿ ಭದ್ರತೆ
9.45: ಚೆನ್ನೈನಲ್ಲಿ 150ಕ್ಕೂ ಅಧಿಕ ರೌಡಿ ಶೀಟರ್ ಗಳ ಬಂಧನ.
9.35: ರೆಸಾರ್ಟ್ ಬಿಟ್ಟು ಹೊರಟ ಎಐಎಡಿಎಂಕೆ ಮುಖಂಡ ತಂಬಿದೊರೈ, ಪನ್ನೀರ್ ಸೆಲ್ವಂ ಹಾಗೂ ದೀಪಾ ಜಯಕುಮಾರ್ ಭೇಟಿ ಸಾಧ್ಯತೆ.
9.30 : ಚೆನ್ನೈನ ಆಯಕಟ್ಟು ಪ್ರದೇಶಗಳಲ್ಲಿ ಬಿಗಿ ಭದ್ರತೆ, ಸುಮಾರು 15000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ.
9.15: ಶಶಿಕಲಾ ತೀರ್ಪಿನ ಮೇಲೆ ತಮಿಳುನಾಡಿನ ರಾಜಕೀಯ ಭವಿಷ್ಯವೂ ಅಡಗಿದೆ.


9.00 : ಪೋಯಸ್ ಗಾರ್ಡನ್ ನಲ್ಲಿ ಕಣ್ಣೀರಿಟ್ಟು ಪನ್ನೀರ್ ಸೆಲ್ವಂರನ್ನು ಶಪಿಸಿದ ಶಶಿಕಲಾ ನಟರಾಜನ್.

ಕರ್ನಾಟಕದ ಪರ ವಕೀಲ ದುಷ್ಯಂತ್ ದಾವೆ ಅವರು ತೀರ್ಪು ಪ್ರಕಟಿಸುವಂತೆ ದ್ವಿಸದಸ್ಯತ್ವ ಪೀಠಕ್ಕೆ ಮನವಿ ಮಾಡಿದ್ದರು. ಒಂದು ವೇಳೆ ಇಬ್ಬರು ನ್ಯಾಯಮೂರ್ತಿಗಳ ನಡುವೆ ತೀರ್ಪಿನಲ್ಲಿ ಭಿನ್ನಾಭಿಪ್ರಾಯ ಉಂಟಾದರೆ, ಈ ಪ್ರಕರಣ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಬರಲಿದ್ದು, ಹೊಸದಾಗಿ ತ್ರಿಸದಸ್ಯ ಪೀಠವನ್ನು ರಚಿಸಲಾಗುತ್ತದೆ.[ಶಶಿಕಲಾ ಬತ್ತಳಿಕೆಯಲ್ಲಿ ಇನ್ನೂ ಏನೇನು ಬಾಣಗಳಿವೆ?]

ತ್ರಿಸದಸ್ಯ ಪೀಠ ಜಾರಿಗೊಂಡರೆ ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿ ಹಿಡಿದ್ದಂತಾಗುತ್ತದೆ. ಶಶಿಕಲಾ ಸೇರಿದಂತೆ ಎಲ್ಲರೂ ಬಚಾವ್ ಆಗುತ್ತಾರೆ. ಶಶಿಕಲಾ ಸಿಎಂ ಪಟ್ಟಕ್ಕೇರಬಹುದು.[ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ]

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major blow for Sasikala the order of the trial court convicting her has been upheld.A division bench comprising Justices P C Ghose and Amitava Roy on Tuesday delivered. The order of conviction was passed by PC Ghose.

The disproportionate assets case has been on for the past two decades.
Please Wait while comments are loading...