20 ವರ್ಷಗಳ ನಂತರ ಸತ್ಯಕ್ಕೆ ಗೆಲುವು: ಸ್ವಾಮಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 14: ಸುಮಾರು 20 ವರ್ಷಗಳ ಕಾನೂನು ಸಮರದಲ್ಲಿ ಕೊನೆಗೂ ಸತ್ಯಕ್ಕೆ ಗೆಲುವಾಗಿದೆ. ಇನ್ನೂ ಅನೇಕ ಮುಖಂಡರು ಜೈಲು ಸೇರಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಸ್ವಾಮಿ ನೀಡಿರುವ ಪ್ರತಿಕ್ರಿಯೆಗಳ ರೌಂಡಪ್ ಇಲ್ಲಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 1991 ರಿಂದ 1996 ರ ತನಕ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಅವರು 1996ರಿಂದ 2014ರ ತನಕ ಕಾನೂನು ಸಮರ ನಡೆಸುತ್ತಲೇ ಕಳೆದ ವರ್ಷ ಕಾಲವಾದರು. [ಅಂತಿಮವಾಗಿ ಧರ್ಮಕ್ಕೆ ಗೆಲುವಾಗಲಿದೆ: ಶಶಿಕಲಾ]

DA Case : Subramanian Swamy reaction After 20 years I won

ಆದರೆ, ಉಳಿದ ಆರೋಪಿಗಳಾದ ವಿಕೆ ಶಶಿಕಲಾ ನಟರಾಜನ್, ಇಳವರಸಿ ಹಾಗೂ ವಿಎನ್ ಸುಧಾಕರನ್ ಅವರಿಗೆ ಫೆಬ್ರವರಿ 14ರಂದು ಸುಪ್ರೀಂಕೋರ್ಟಿನಿಂದ ಕಹಿ ಸುದ್ದಿ ಬಂದಿದೆ. ಎಲ್ಲಾ ಆರೋಪಿಗಳಿಗೆ ನಾಲು ವರ್ಷ ಶಿಕ್ಷೆ ಘೋಷಿಸಲಾಗಿದೆ.

1996ರಲ್ಲಿ ಜನತಾ ಪಾರ್ಟಿ ನಾಯಕರಾಗಿದ್ದ(ಈಗ ಬಿಜೆಪಿ ಸೇರಿರುವ) ಡಾ. ಸುಬ್ರಮಣ್ಯಂ ಸ್ವಾಮಿ ಅವರು ಜಯಲಲಿತಾ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾನದಲ್ಲಿ 66.65 ಕೋಟಿ ರು ಆಸ್ತಿಯನ್ನು ಅಕ್ರಮವಾಗಿ ಗಳಿಕೆ(1991 ರಿಂದ 1996ರ ಅವಧಿ) ಮಾಡಿರುವ ಆರೋಪ ಹೊರೆಸಿ ಕೇಸ್ ದಾಖಲಿಸಿದರು.

ಸ್ವಾಮಿ ಅವರು ಟ್ವೀಟ್ ಮಾಡಿದ್ದು ಹೀಗೆ: [ಅಕ್ರಮ ಆಸ್ತಿ ಪ್ರಕರಣ : ಟೈಮ್ ಲೈನ್]

ಭ್ರಷ್ಟಚಾರ ನಿಗ್ರಹ ಕಾಯ್ದೆ 1988ರ ಅನ್ವಯ ಸೆಕ್ಷನ್ 120-B IPC, 13(2) ಜೊತೆಗೆ 13(1)ಇ ಅಡಿಯಲ್ಲಿ ಪ್ರಕರಣ ದಾಖಲು. ಮದ್ರಾಸ್ ಹೈಕೋರ್ಟ್, ಕರ್ನಾಟಕ ಹೈಕೋರ್ಟ್, ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದಿಂದ ಎಲ್ಲರೂ ತಪ್ಪಿತಸ್ಥರು ಎಂದು ತೀರ್ಪು. ಈ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್.[ ಶಿಕ್ಷೆ ಪ್ರಕಟಿಸಿದ ನ್ಯಾಯಮೂರ್ತಿಗಳು ಹೇಳಿದ್ದೇನು]

ಶಿಕ್ಷೆಯಿಂದ ಶಶಿಕಲಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಸುಬ್ರಮಣಿಯನ್ ಸ್ವಾಮಿ, ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ, ಶಶಿಕಲಾಗೆ ಸಿಎಂ ಆಗುವ ಒಂದು ಅವಕಾಶ ನೀಡಬಹುದಿತ್ತು ಎಂದಿದ್ದಾರೆ. ಮೇಲ್ಕಂಡ ಟ್ವೀಟ್ ನಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಇನ್ನೂ ಅನೇಕ ನಾಯಕರ ಬಗ್ಗೆ ಪ್ರಸ್ತಾಪಿಸಿದ್ದು, ಎಲ್ಲವೂ ಸಂಕ್ಷಿಪ್ತ ನಾಮಗಳನ್ನು ಬಳಸಲಾಗಿದೆ. ಇದು ಅರ್ಥವಾಗಬೇಕಾದರೆ ಈ ಲಿಂಕ್ ಕ್ಲಿಕ್ ಮಾಡಿ ಓದಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I was expecting the conviction. I don't think she can escape the 4 years sentence: Subramanian Swamy on SC's verdict on #VKSasikala DA case After 20 years I won. Now turn of TDK Buddhu PC BC & Tata to join in jail
Please Wait while comments are loading...