Bengaluru Second Airport: ಟ್ರಾಫಿಕ್, ದೂರ, ಮೆಟ್ರೋ ಸಂಪರ್ಕ ವಿಳಂಬ: ಬೆಂಗಳೂರಿಗೆ ಹೊಸ ಏರ್‌ಪೋರ್ಟ್ ಯಾಕೆ ಬೇಕು?
ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹಿಂದಿನ ಆರ್ಥಿಕ ವರ್ಷದಲ್ಲಿ (2025-26) 400ಮಿಲಿಯನ್ ಪ್ರಯಾಣಿಕರ ಸಂಚಾರಕ್ಕೆ ಸಾಕ್ಷಿಯಾಗಿದೆ. ಹೆಚ್ಚುತ್ತಿರುವ ವಿಮಾನ ಪ್ರಯಾಣಿಕರ ಒತ್ತಡದೊಂದಿಗೆ ಇನ್ನಿತರ ಸಮಸ್ಯೆಗಳು ಹೆಚ್ಚುತ್ತಿವೆ. ಭವಿಷ್ಯದ ದೃಷ್ಟಿಯಿಂದ ಇಂದಿನ ಸನ್ನಿವೇಶದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಎರಡನೇ ವಿಮಾನ ನಿಲ್ದಾಣದ (Bengaluru Second International Airport) ಅಗತ್ಯತೆಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಬಗ್ಗೆ ಸಚಿವರು, ನಗರ ಯೋಜಕರು/ತಜ್ಞರು ಹೇಳುವುದೇನು?.
ದೇಶದ ಸಿಲಿಕಾನ್ ವ್ಯಾಲಿಯಾಗಿರುವ ಬೆಂಗಳೂರು ಬೆಳೆಯುತ್ತಲೇ ಇದೆ. ಮಹಾನಗರದಲ್ಲಿ ವಿಮಾನಯಾನಕ್ಕೆ ಬೇಡಿಕೆಯು ನಿರಂತರವಾಗಿ ಹೆಚ್ಚಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಪ್ರಮುಖ ಹೆಬ್ಬಾಗಿಲಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಬೆಂಗಳೂರಿನ ಮುಂದಿನ ಒಂದು-ಎರಡು ದಶಕದ ಪರಿಸ್ಥಿತಿ ನೋಡಿಕೊಂಡರೆ ಮತ್ತೊಂದು ವಿಮಾನದ ಅಗತ್ಯತೆ ತಿಳಿಯಲಿದೆ ಎಂದು 'ಡಿಎಚ್' ವರದಿ ಮಾಡಿದೆ.

ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಸಾಧ್ಯವಾಗಿಲ್ಲ
ಬೆಂಗಳೂರು ಏರ್‍ಪೋರ್ಟ್ ಸ್ಥಾಪನೆಯಾಗಿ ಸುಮಾರು ಎರಡು ದಶಕ ಸಮೀಪಿಸಿದರೂ ಸಹಿತ ಮೆಟ್ರೋ ಸಂಪರ್ಕ ಸಾಧ್ಯವಾಗಿಲ್ಲ. ನಗರಭಾಗದಿಂದ ದೂರುವಿರುವ ಕೆಂಪೇಗೌಡ ಏರ್‍ಪೊರ್ಟ್‌ಗೆ ತೆರಳಲು ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ಸಾಗಬೇಕು. ಬೇರೆಡೆಯಿಂದ ಬರುವ ವಾಹನಗಳು ಹೆಬ್ಬಾಳ ಜಂಕ್ಷನ್‌ಗೆ ಬಂದು ಸೇರುತ್ತಿದ್ದಂತೆ ಬೃಹತ್ ಟ್ರಾಫಿಕ್ ಉಂಟಾಗುತ್ತಿದೆ. ಹೀಗಾಗಿಯೇ ನಗರ ರೈಲು ಯೋಜನೆ, ಮೆಟ್ರೋ ಕಾರ್ಯಕ್ಕೆ ವೇಗ ನೀಡಲಾಗುತ್ತಿದೆ. ಆದರೆ ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ.
ನಗರದಿಂದ ದೂರವಿರುವ ಕೆಐಎ, ಸಮಸ್ಯೆಗಳು ಹಲವು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಹೆಚ್ಚಿನ ಶುಲ್ಕಗಳು, ಇತ್ತೀಚೆಗೆ ರನ್ ವೇ ವಿಸ್ತರಣೆ, ನಗರ ಕೇಂದ್ರದಿಂದ ದೂರವಿರುವುದು ಹಾಗೂ ಗರಿಷ್ಠ ಸಮಯದಲ್ಲಿ ಸಾಮರ್ಥ್ಯದ ಮೇಲೆ ಬೀಳುವ ಒತ್ತಡದ ಬಗ್ಗೆ ಹಲವು ಪಾಲುದಾರರು ಮತ್ತು ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಮಾನ ನಿಲ್ದಾಣದ ಅಭಿವೃದ್ಧಿಯು ಅದರ ಆರಂಭಿಕ ಯೋಜಿತ ಗಾತ್ರವನ್ನು ಮೀರಿ ಬೆಳೆದಿದೆ. ಇದು ಪ್ರಯಾಣಿಕರಿಗೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಅನಿರೀಕ್ಷಿತ ಸಮಸ್ಯೆಗಳನ್ನು ಸೃಷ್ಟಿಸಿದೆ.
ಕೆಐಎ ತೆರಳಲು ಪರ್ಯಾಯ ಮಾರ್ಗವಿಲ್ಲ
ಹಾಲಿ ಏರ್ ಪೋರ್ಟ್ ಹೋಗಲು ಪರ್ಯಾಯ ಮಾರ್ಗವಿಲ್ಲ. ಬೇಗೂರು, ಬೂದಿಗೆರೆ ರಸ್ತೆ ಸುಧಾರಿಸಿಲ್ಲ. ಹೆಬ್ಬಾಳ ಮೂಲಕವೇ ದಟ್ಟಣೆಯಲ್ಲಿ ಗಂಟೆಗಳ ಕಾಲ ಪ್ರಯಾಣ ಮಾಡಿ ಏರ್ ಪೋರ್ಟ್ ತಲುಪಬೇಕಾಗುತ್ತದೆ. ಇನ್ನೂ ಸೌಟ್‌ಲೈಟ್ ಟೌನ್ ರಿಂಗ್ ರಸ್ತೆ, ORR ರಸ್ತೆ ಯೋಜನೆಗಳು ಪ್ರಗತಿಯಲ್ಲಿವೆ. ಮೇಲ್ಸೇತುವೆಗಳು ಡಬಲ್ ಡೆಕ್ಕರ್ ಆದರೆ ಈ ಭಾಗದಲ್ಲಿ ಇನ್ನಷ್ಟು ಅನುಕೂಲ ಆಗಲಿದೆ. ಎಲ್ಲ ಯೋಜನೆಗಳು ಜಾರಿ ಆಗುವಷ್ಟರಲ್ಲಿ ಏರ್‍ಪೋರ್ಟ್ ಮೇಲಿನ ಒತ್ತಡ ಗಂಭೀರ ಸ್ವರೂಪದಲ್ಲಿ ಹೆಚ್ಚಲಿದೆ.
ಹಳೇ ತಪ್ಪುಗಳಿಂದ ಪಾಠ ಕಲಿಯಬೇಕಿದೆ!
ಕೆಐಎನಲ್ಲಿ ಎರಡೂ ಟರ್ಮಿನಲ್‌ಗಳಿವೆ. ಪ್ರಸ್ತಾವಿತ ಟರ್ಮಿನಲ್ 3 ಕ್ಕೆ ಒಂದೇ ಮೆಟ್ರೋ ನಿಲ್ದಾಣವನ್ನು ಕಲ್ಪಿಸಲು ಪ್ಲ್ಯಾನ್ ಮಾಡಲಾಗಿದೆ. ಸಾರ್ವಜನಿಕ ಸಾರಿಗೆ ಹಾಗೂ ಮೆಟ್ರೋ ನಿಲ್ದಾಣಕ್ಕೆ ಸಾಕಷ್ಟು ದೂರ ಇದೆ. ಇದು ಪ್ರಯಾಣಿಕರಿಗೆ ಸಂಚಾರ ಅಡಚನೆ ಉಂಟು ಮಾಡುತ್ತದೆ. ಇಂದಿಗೂ ಸಹ ವಿಮಾನ ಪ್ರಯಾಣಿಕರು ಟ್ಯಾಕ್ಸಿ, ಖಾಸಗಿ ವಾಹನಗಳ ಮೇಲೆ ಹೆಚ್ಚು ಅವಲಂಬಿಸಬೇಕಿದೆ. ಮೊದಲ ಏರ್‍ಪೋರ್ಟ್‌ನಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿಯಬೇಕಿದೆ. ಹಾಲಿ ಏರ್‍ಪೋರ್ಟ್ ದೂರದಲ್ಲಿ ಪ್ರತ್ಯೇಕ ದ್ವೀಪದಂತೆ ಭಾಸವಾಗುತ್ತದೆ. ನವಿ ಮುಂಬೈ ನಿಲ್ದಾಣವು ದೂರದೃಷ್ಟಿಯೊಂದಿಗೆ ನಿರ್ಮಿಸಲಾಗಿದೆ ಎಂದು ಬಿಎಸ್‌ಎಂಐಎಲ್ಇ ನಗರ ತಜ್ಞ ಆರ್. ಕೆಮಿಶ್ರಾ ಅವರು ಉಲ್ಲೇಖಿಸಿದ್ದಾರೆ.

ಸಚಿವ ಎಂಬಿ ಪಾಟೀಲರು ಹೇಳುವುದೇನು?
ಸಚಿವ ಎಂಬಿ ಪಾಟೀಲ್ ಅವರು ಪ್ರತಿಕ್ರಿಯಿಸಿ, 2008ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ (ಕೆಐಎ) ಉದ್ಘಾಟನೆಗೊಳ್ಳುವ ಮುನ್ನ ಎಚ್‌ಎಎಲ್ ಏರ್ ಪೋರ್ಟ್‌ನಲ್ಲಿ ನಿರ್ವಹಿಸಲಾಗುತ್ತಿತ್ತು. ನಗರ ಬೆಳವಣಿಗೆ, ವಿಮಾನ ನಿಲ್ದಾಣಕ್ಕೆ ಸಂಬಂಧ ಇಲ್ಲ. ಆದರೆ ಆದ ತಪ್ಪುಗಳಿಂದ ಕಲಿತು ಹೆಜ್ಜೆ ಇಡಬೇಕೆಂದು ನಗರ ಯೋಜಕರು ಭಾವಿಸಿದ್ದಾರೆ. ಐಟಿ ಜಾಲ ವಿಸ್ತರಣೆ, ಕೆಐಎ ಕಾರಣದಿಂದಾಗಿ ಬೆಂಗಳೂರು ಉತ್ತರದ ಕಡೆ ಬೆಳೆಯಿತು. ಇದರಿಂದ ರಿಯಲ್ ಎಸ್ಟೇಟ್, ಉದ್ಯಮಗಳು ನೆಲೆಯೂರಿದವು. ಕೈಗಾರಿಕೆ, ಮೂಲಸೌಕರ್ಯದ ಮೇಲಿನ ಹೂಡಿಕೆ ಹೆಚ್ಚಾಯಿತು ಎಂದರು.
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಹೇಗಿರಬೇಕು?
ಈ ಮೇಲಿನ ಎಲ್ಲ ಕಾರಣಗಳಿಂದ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಮುನ್ನೆಲೆಗೆ ಬರುತ್ತಿದೆ. ಅಸ್ತಿತ್ವದಲ್ಲಿರುವ ವಾಯು ದಟ್ಟಣೆಯನ್ನು ಕಡಿಮೆ ಮಾಡಲು, ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಲು ಮತ್ತು ಕರ್ನಾಟಕ ಹಾಗೂ ಸುತ್ತಮುತ್ತಲಿನ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ, ರಿಯಲ್ ಎಸ್ಟೇಟ್ ಬೆಳವಣಿಗೆ ನೋಡಿಕೊಂಡು ಎಲ್ಲ ವಿಧದಲ್ಲೂ ಏರ್‍ಪೋರ್ಟ್ ತಲುಪಲು ಸಾಧ್ಯವಾಗುವಂತೆ, ವ್ಯವಸ್ಥಿತ ಕಲ್ಪನೆಯೊಂದಿಗೆ ಜಾರಿಯಾಗಬೇಕಿದೆ.
ಎರಡನೇ ವಿಮಾನ ನಿಲ್ದಾಣವು ಕಾರ್ಯತಂತ್ರವಾಗಿ ಸೂಕ್ತ ಸ್ಥಳದಲ್ಲಿರಬೇಕು. ಕಾರ್ಯಾಚರಣೆಯಲ್ಲಿ ವೆಚ್ಚ-ಪರಿಣಾಮಕಾರಿಯಾಗಿರಬೇಕು ಮತ್ತು ಎಲ್ಲರಿಗೂ ಸುಲಲಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಪ್ರಬಲ ಬಹುಮಾದರಿ ಸಂಪರ್ಕವನ್ನು ಹೊಂದಿರಬೇಕು. ಬೆಂಗಳೂರಿನ ವಿಮಾನಯಾನ ಭವಿಷ್ಯದ ದೃಷ್ಟಿಯಿಂದ ಸ್ಪಷ್ಟವಾಗಿರಬೇಕು. ದಶಕಗಳ ಕಾಲ ಜನರ ಬೇಡಿಕೆ ಪೂರೈಸುವಂತಿರಬೇಕು.
ಅಗತ್ಯ ಮೂಲಸೌಕರ್ಯವನ್ನು ಹೊಂದುವುದು. ಸಾರ್ವಜನಿಕ ಅನುಕೂಲ, ಆರ್ಥಿಕ ಕಾರ್ಯಸಾಧ್ಯತೆ ಮತ್ತು ಸುಸ್ಥಿರ ಬೆಳವಣಿಗೆಗೆ ಆದ್ಯತೆ ನೀಡುವ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದೆಲ್ಲ ಒಳಗೊಂಡ ಸುವ್ಯವಸ್ಥಿತ ಏರ್‍ಪೋರ್ಟ್ ಸೂಕ್ತ ಜಾಗದಲ್ಲಿ ನಿರ್ಮಿಸುವ ಅಗತ್ಯತೆ ಇದೆ. ಸದ್ಯ ಏರ್‍ಪೋರ್ಟ್ ಸ್ಥಳ ಆಯ್ಕೆ ಅಂತಿಮ ಹಂತದಲ್ಲಿದೆ. ಜಾಗ, ಯೋಜನೆ, ಅನುಮೋದನೆ ಕುರಿತು ಅಧಿಕೃತ ಮಾಹಿತಿ ಶೀಘ್ರವೇ ಬಹಿರಂಗೊಳ್ಳಲಿವೆ.














Click it and Unblock the Notifications