BMTC ಸಿಬ್ಬಂದಿ ಖಾತೆಗೆ ವೇತನ ಬಾಕಿ ಜಮೆ: ಸರ್ಕಾರದಿಂದ 137 ಕೋಟಿ ರೂ ಬಿಡುಗಡೆ

ಬೆಂಗಳೂರು: ರಾಜ್ಯ ಸಾರಿಗೆ ನೌಕರರು ವೇತನ ಪರಿಷ್ಕರಣೆ, ಪೂರ್ಣ ಹಿಂಬಾಕಿ ವಿತರಣೆಗೆ ಆಗ್ರಹಿಸಿ ಇದೇ ಮೇ 20ರಂದು ರಾಜ್ಯವ್ಯಾಪಿ ಮುಷ್ಕರ ಹಮ್ಮಿಕೊಂಡಿದ್ದಾರೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ನಾಲ್ಕು ನಿಗಮಗಳಿಗೆ ಅನ್ವಯವಾಗುವಂತೆ ಶೇ.12.5 ವೇತನ‌ ಪರಿಷ್ಕರಣೆ ಮಾಡಿ ಇತ್ತೀಚೆಗೆ ಆದೇಶಿಸತ್ತು. ಶನಿವಾರ (ಮೇ 16) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ನೌಕರರ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ಬಿಡುಗಡೆ ಮಾಡಿದ್ದು, ಅರ್ಹರ ಖಾತೆಗೆ ಹಣ ಜಮೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರಕ್ಕೆ ನಾಲ್ಕು ದಿನಗಳ ಮೊದಲು ಬಿಎಂಟಿಸಿ ನೌಕರರ ಪಾಲಿನ ಹಣ ಬಿಡುಗಡೆ ಆಗಲಿದೆ. ಸರ್ಕಾರದ ಆದೇಶದಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿ/ನೌಕರರಿಗೆ ದಿನಾಂಕ 01.01.2021 ರಿಂದ 28.02.2023 ರವರೆಗೆ ಒಟ್ಟು 26 ತಿಂಗಳ 2020ರ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ರೂ.1271.92 ಕೋಟಿಗಳನ್ನು ಪಾವತಿಸಲು ಅನುಮೋದನೆ ನೀಡಿತ್ತು.

BMTC Employees

ಸರ್ಕಾರವು ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿ/ನೌಕರರ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತದಲ್ಲಿ ಪ್ರಸ್ತುತ ರೂ.450.00 ಕೋಟಿಗಳನ್ನು ಬಿಡುಗಡೆಗೊಳಿಸಿದೆ. ಅದರ ಹಂಚಿಕೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 137.24 ಕೋಟಿ ರೂಪಾಯಿ ಮಂಜೂರಾಗಿವೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾನುವಾರ ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ಕಡಿತ, ಯಾರಿಗೆಲ್ಲ ತೊಂದರೆ
ಭಾನುವಾರ ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ಕಡಿತ, ಯಾರಿಗೆಲ್ಲ ತೊಂದರೆ

ಈ ಅನುದಾನದಡಿ ದಿನಾಂಕ 01.01.2021 ರಿಂದ 30.11.2021 ರವರೆಗೆ ಅಂದರೆ ಒಟ್ಟು 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ಪಾವತಿಸುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಬಿಎಂಟಿಸಿ ಸಂಸ್ಥೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರಿಗೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಇಂದು (ಮೇ16, 2026) ರಂದು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.

ನಿವೃತ್ತರಿಗೆ ಮೇ 21, ವರ್ಗಾವಣೆ ನೌಕರರಿಗೆ ಮೇ 22ಕ್ಕೆ ಹಣ

ಇನ್ನೂ 01.01.2021 ರಿಂದ 30.11.2021 ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಸೇವಾ ವಿಮುಕ್ತರಾದ (ನಿವೃತ್ತಿ/ಸ್ವಯಂ ನಿವೃತ್ತಿ/ವಜಾ/ಮರಣ/ರಾಜೀನಾಮೆ ಸೇರಿದಂತೆ) ಅರ್ಹ ಅಧಿಕಾರಿ/ನೌಕರರಿಗೆ ಹಿಂಬಾಕಿ ಮೊತ್ತವನ್ನು 21.05.2026 ರಂದು ಪಾವತಿಸಲಾಗುವುದು.

ಇದೇ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಅಂತರ ನಿಗಮ/ಸಂಸ್ಥೆಗಳಿಗೆ ವರ್ಗಾವಣೆಗೊಂಡ ಅಧಿಕಾರಿ/ನೌಕರರ ಹಿಂಬಾಕಿ ಮೊತ್ತವನ್ನು ಮೇ 22.05.2026 ರಂದು ಸಂಬಂಧಿತ ನಿಗಮ/ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಂಸ್ಥೆಯ ಅಧಿಕಾರಿ ಹಾಗೂ ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಆದೇಶದಂತೆ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತಿಳಿಸಿದೆ.

ಶೇ. 12.5 ವೇತನ‌ ಪರಿಷ್ಕರಣೆ

ರಾಜ್ಯ ಸರ್ಕಾರ ಇತ್ತಿಚೆಗೆ ಸಾರಿಗೆ ನೌಕರರಿಗೆ ದಿನಾಂಕ 01/04/2025 ರಿಂದ ಜಾರಿಗೆ ಬರುವಂತೆ ಶೇ. 12.5 ರಷ್ಟು ವೇತನ‌ ಪರಿಷ್ಕರಣೆ ಮಾಡಿ ಸರ್ಕಾರವು ಆದೇಶ ಹೊರಡಿಸಿತ್ತು. ಇದರಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು 72.80 ಕೋಟಿ ರೂ, ಪ್ರತಿ ವರ್ಷ 873.64 ಕೋಟಿ ರೂ ಹೆಚ್ಚುವರಿ ವೆಚ್ಚವಾಗಲಿದೆ. ನಾಲ್ಕು ಸಾರಿಗೆ ಸಂಸ್ಥೆಗಳ 1 ಲಕ್ಷದ 5 ಸಾವಿರ ಸಿಬ್ಬಂದಿ ಈ ವೇತನ ಹೆಚ್ಚಳ ಅನ್ವಯವಾಗಲಿದೆ.

E-Khata Campaign: ಇ-ಖಾತಾ ಸೇವೆಯ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಮೊದಲ ದಿನ 1,242 ಅರ್ಜಿ ವಿಲೇವಾರಿ
E-Khata Campaign: ಇ-ಖಾತಾ ಸೇವೆಯ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಮೊದಲ ದಿನ 1,242 ಅರ್ಜಿ ವಿಲೇವಾರಿ

ಪೂರ್ಣ ಹಿಂಬಾಕಿ ಮೊತ್ತ ಶೀಘ್ರ

ಈಗಾಗಲೇ 2023ರ ಮಾರ್ಚ್‌ ನ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ 1271.92 ಕೋಟಿ ರೂ. ಮೊದಲ ಕಂತಿನ ಹಣ 450 ಕೋಟಿ ರೂ. ಸರ್ಕಾರವು ಬಿಡುಗಡೆ ಮಾಡಿದೆ. ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ. ದಿನಾಂಕ 1-04-2025 ರಿಂದ 30-06-2026 ರವರೆಗಿನ ವೇತನ‌ ಪರಿಷ್ಕರಣೆ ಹೆಚ್ಚಳದ ಹಿಂಬಾಕಿ ಮೊತ್ತ ಮುಂದಿನ‌ ದಿನಗಳಲ್ಲಿ ಪಾವತಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+