ಎಲ್ಲಾ ಕೆಲಸದಲ್ಲಿಯೂ ಗೆಲುವು,ವಿದೇಶ ಪ್ರಯಾಣ ಭಾಗ್ಯ, ಆಸೆಗಳು ಈಡೇರುವ ದಿನ: 12 ರಾಶಿಗಳ ನಿತ್ಯ ಭವಿಷ್ಯ
Horoscope May 17: ಭಾನುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಭಾನುವಾರ ರಾಹುಕಾಲವು ಸಂಜೆ 4:30 ರಿಂದ ಸಂಜೆ 6:00 ರವರೆಗೆ ಇರುತ್ತದೆ. ಮೇ 17 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ದೀರ್ಘಕಾಲೀನ ಶ್ರಮದ ಪ್ರತಿಫಲ ಸಿಗುವುದು. ಕೆಲಸದಲ್ಲಿನ ನಿಮ್ಮ ಶಿಸ್ತು ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗುತ್ತದೆ. ಇಂದು ಹೊಸ ಜವಾಬ್ದಾರಿಗಳು ಹೆಗಲೇರುವುದು. ಅವಿವಾಹಿತರಿಗೆ ವಿವಾಹವಾಗುವ ಭಾಗ್ಯವಿದೆ.

ವೃಷಭ ರಾಶಿ:
ಹೊಸ ಅವಕಾಶಗಳು ಒದಗಿ ಬರುವುದು. ವೃತ್ತಿಜೀವನದಲ್ಲಿ ಹೊಸ ಹೆಜ್ಜೆ ಇಡಬೇಕೆಂಬ ನಿಮ್ಮ ಬಯಕೆ ಬಲವಾಗಿರುತ್ತದೆ. ಹೊಸ ಯೋಜನೆಗಳು ನಿಮ್ಮ ಕೌಶಲ್ಯಗಳನ್ನು ಸಾಬೀತುಪಡಿಸಲು ಸಹಾಯ ಮಾಡುತ್ತದೆ. ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕಾಗುತ್ತದೆ.
ಮಿಥುನ ರಾಶಿ:
ಈ ರಾಶಿಯವರಿಗೆ ಇದು ತುಂಬಾ ಶುಭ ಸಮಯ. ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ವಿದೇಶ ಪ್ರಯಾಣ ಯೋಗವಿದೆ.
ಕರ್ಕಾಟಕ ರಾಶಿ:
ಆರ್ಥಿಕ ಸ್ಥಿರತೆ ಇರುವುದು. ಹಿಂದೆ ಎದುರಿಸಿದ ಆರ್ಥಿಕ ತೊಂದರೆಗಳು ಮತ್ತು ಒತ್ತಡದಿಂದ ಪರಿಹಾರ ಪಡೆಯುವಿರಿ. ನಿಮ್ಮ ಪ್ರಾಮಾಣಿಕತೆಗೆ ಪ್ರತಿಫಲ ಸಿಗುತ್ತದೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಬಹುದು.
ಸಿಂಹ ರಾಶಿ:
ಏಕಕಾಲದಲ್ಲಿ ಹಲವಾರು ಆಲೋಚನೆಗಳಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗುತ್ತದೆ. ಆತುರದ ನಿರ್ಧಾರಗಳಿಂದ ನಷ್ಟವಾಗುವುದು. ತಾಳ್ಮೆಯಿಂದ ಇರುವುದು ಅಗತ್ಯ.
ಕನ್ಯಾರಾಶಿ:
ನಿಮ್ಮ ವೃತ್ತಿ ಅಥವಾ ವೈಯಕ್ತಿಕ ಜೀವನದಲ್ಲಿ ಹೊಸ ಹೆಜ್ಜೆಗಳನ್ನು ಇಡುವ ಸಾಧ್ಯತೆ ಇದೆ. ಕಠಿಣ ಪರಿಶ್ರಮವು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಆಸ್ತಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಇದು ಉತ್ತಮ ಸಮಯ.
ತುಲಾ ರಾಶಿ:
ಆಸೆಗಳು ಈಡೇರುವ ದಿನ. ಧೈರ್ಯದಿಂದ ಪ್ರಾರಂಭಿಸುವ ಕೆಲಸಗಳು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ. ವೃತ್ತಿಯಲ್ಲಿ ಬಡ್ತಿ ಸಿಗುವುದು. ಹೊಸ ಕೆಲಸದ ಅವಕಾಶಗಳೂ ಒಲಿದು ಬರುವುದು.
ವೃಶ್ಚಿಕ ರಾಶಿ:
ಮನೆಯಲ್ಲಿ ಹಬ್ಬದ ವಾತಾವರಣವಿರುತ್ತದೆ. ಹೊಸ ಮನೆ ಖರೀದಿಸುವ ಅಥವಾ ನಿರ್ಮಿಸುವ ಕೆಲಸಕ್ಕೆ ಕೈ ಹಾಕಬಹುದು. ವಿವಾಹ ಪ್ರಯತ್ನಗಳು ಫಲ ನೀಡುತ್ತವೆ. ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ. ವಿದೇಶ ಪ್ರಯಾಣ ಯೋಗವಿದೆ.
ಧನು ರಾಶಿ:
ಉನ್ನತ ಸ್ಥಾನ ಒಲಿದು ಬರುವುದು. ಇಂದು ನಿಮಗೆ ಭೌತಿಕ ಸುಖಗಳಿಗಿಂತ ಮಾನಸಿಕ ಶಾಂತಿ ಬೇಕಾಗಿದೆ. ಧ್ಯಾನ ಮಾಡಿದರೆ, ಹೊಸ ಉತ್ಸಾಹ ಬರುತ್ತದೆ.
ಮಕರ ರಾಶಿ:
ಪ್ರಸ್ತುತ ಸ್ಥಿತಿ ನಿಮ್ಮ ಪರವಾಗಿಲ್ಲ. ಕಚೇರಿ ಕೆಲಸಗಳಿಂದಾಗಿ ಮಾನಸಿಕ ಯಾತನೆಯನ್ನು ಅನುಭವಿಸಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಸುತ್ತುವರೆದಿರುವ ಸಾಧ್ಯತೆಯಿದೆ. ಶಾಂತವಾಗಿರಲು ಪ್ರಯತ್ನಿಸಿ.
ಕುಂಭ ರಾಶಿ:
ಪರಿಸ್ಥಿತಿ ನೀವು ಭಾವಿಸುವಷ್ಟು ಗಂಭೀರವಾಗಿಲ್ಲ. ಸ್ವಲ್ಪ ಪ್ರಯತ್ನ ಮಾಡಿದರೆ ಸಮಸ್ಯೆಗಳಿಂದ ಹೊರಬರಬಹುದು. ಸಮಸ್ಯೆಗಳು ತಾವಾಗಿಯೇ ಪರಿಹಾರವಾಗುವವರೆಗೆ ಕಾಯಬೇಡಿ. ಅನಗತ್ಯ ಭಯಗಳನ್ನು ಬಿಟ್ಟು ಆತ್ಮವಿಶ್ವಾಸದಿಂದ ಮುಂದಕ್ಕೆ ಹೆಜ್ಜೆ ಹಾಕಿದರೆ ಎಲ್ಲವೂ ಸರಿಯಾಗುತ್ತದೆ.
ಮೀನ ರಾಶಿ:
ಮೇಲಾಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮವನ್ನು ಗುರುತಿಸುವರು. ನಿಮ್ಮ ಶತ್ರುಗಳು ನಿಮ್ಮನ್ನು ಸೋಲಿಸುವ ಕೆಲಸಕ್ಕೆ ಕೈ ಹಾಕಬಹುದು. ಧೈರ್ಯದಿಂದ ಮುಂದುವರೆಯಿರಿ, ಗೆಲುವು ನಿಮ್ಮದಾಗುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications