Bengaluru Airport: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದೇಶದ ಅತೀ ದೊಡ್ಡ ಗ್ರೀನ್‌ಫೀಲ್ಡ್ ಕಾರ್ಗೋ ಟರ್ಮಿನಲ್

Bengaluru Airport: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಲವು ಬದಲಾವಣೆ ಮೂಲಕ ಆಗಾಗ ಸುದ್ದಿಯಲ್ಲಿರುತ್ತದೆ. ಹಾಗೆಯೇ ಇದೀಗ ಈ ವಿಮಾನ ನಿಲ್ದಾಣದ ಆವರಣದಲ್ಲಿ ವಿನ್ಯಾಸ ಸಾಮರ್ಥ್ಯದಲ್ಲಿ ಭಾರತದಲ್ಲೇ ಅತಿ ದೊಡ್ಡ ಗ್ರೀನ್‌ಫೀಲ್ಡ್ ದೇಶೀಯ ಕಾರ್ಗೋ ಟರ್ಮಿನಲ್‌ ಪ್ರಾರಂಭ ಆಗಿದೆ. ಹಾಗಾದರೆ ಇದರ ವ್ಯಾಪ್ತಿ ಎಷ್ಟಿದೆ ಹಾಗೂ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ಎರಡು ಟರ್ಮಿನಲ್‌ಗಳನ್ನು ಒಳಗೊಂಡಿದೆ. ಈ ಪೈಕಿ ಎರಡನೇಯದ್ದು ವಿಶ್ವದ ಅತ್ಯಂತ ಸುಂದರ ಟರ್ಮಿನಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟಿದ್ದರೂ ಸಹ ಪ್ರಯಾಣಿಕರ ದಟ್ಟಣೆ ಮಾತ್ರ ಕಡಿಮೆಯಾಗದ ಹಿನ್ನೆಲೆ ನಗರದ ಸಮೀಪ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಯಾವ ಸ್ಥಳ ಎಂದು ಇನ್ನೂ ನಿಗದಿಯಾಗಬೇಕಿದೆ.'

India s Largest Greenfield Domestic Cargo Terminal Inaugurated at Bengaluru Kempegowda Airport

ನೆಲಮಂಗಲ ಬಳಿ ಸರ್ವೇ ಕಾರ್ಯ ಏನೋ ಆರಂಭವಾಗಿತ್ತು. ಆದರೆ, ಈ ಭಾಗದ ರೈತರು ಮಾತ್ರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ರೆ ನಾವು ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದರು. ಆಗ ಇದಕ್ಕೆ ಹಲವು ಶಾಸಕರು ಸೇರಿದಂತೆ ಸಚಿವರು ಸಹ ಕೈಜೋಡಿಸಿ ರೈತರ ಪರ ನಿಲ್ಲುವುದಾಗಿ ಭರವಸೆ ನೀಡಿದ್ದರು. ಬಳಿಕ ಈ ಸರ್ವೆ ಕಾರ್ಯ ನಿಂತಿತ್ತು ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಸಚಿವ ಜಿ.ಪರಮೇಶ್ವರ್‌, ವಿ.ಸೋಮಣ್ಣನವರು ಗುರುತಿಸಿರುವ ಸ್ಥಳಗಳಲ್ಲಿ ತುಮಕೂರು ಒಂದಾಗಿದ್ದು, ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ, ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಲಿದೆ. ಅಲ್ಲದೆ, ಉತ್ತರ ಕರ್ನಾಟಕ ಭಾಗಕ್ಕೂ ತುಂಬಾ ಪ್ರಯೋಜನಾ ಆಗಲಿದೆ. ಆದ್ದರಿಂದ ಇಲ್ಲೇ ನಿರ್ಮಾಣ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಇನ್ನೂ ಇದುವರೆಗೂ ಈ ಬಗ್ಗೆ ಸರ್ಕಾರ ಮಾತ್ರ ಕ್ಯಾರೆ ಅನ್ನುತ್ತಿಲ್ಲ.

ಮತ್ತೊಂದೆಡೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮತ್ತು ವಾಯುಯಾನ ಸರಕು ಸಾಗಣೆ ಕ್ಷೇತ್ರದ ಮೆನ್ಜೀಸ್ ಏವಿಯೇಷನ್ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣ ಆದ 245,000 ಚದರ ಅಡಿ ವ್ಯಾಪ್ತಿಯ ಈ ಕಾರ್ಗೋ ಟರ್ಮಿನಲ್‌ ಅನ್ನು, ದೇಶೀಯವಾಗಿ ಹೆಚ್ಚುತ್ತಿರುವ ವಾಯುಮಾರ್ಗ ಸರಕು ಸಾಗಣೆಯ ಬೇಡಿಕೆ ಪೂರೈಸುವ ದೃಷ್ಟಿಯಿಂದ ಅತ್ಯಾಧುನಿಕ ಮೂಲ ಸೌಕರ್ಯದೊಂದಿಗೆ ವಿಶಾಲವಾಗಿ ವಿನ್ಯಾಸಗೊಳಿಸಲಾಗಿದೆ.

ಕೈಗಾರಿಕೆಗಳ ಸಂಪರ್ಕ ಮತ್ತು ಪೂರೈಕೆ ಸರಪಳಿಗಳ ಬಲಪಡಿಸುವಿಕೆಯಲ್ಲಿ ಹೊಸ ಕಾರ್ಗೋ ಟರ್ಮಿನಲ್‌ ಮಹತ್ವದ ಪಾತ್ರ ವಹಿಸಲಿದೆ. ದೇಶದಲ್ಲಿ ಸರಕು ಸಾಗಣೆ ಮತ್ತು ಪ್ರಾದೇಶಿಕ ವ್ಯಾಪಾರದ ಭವಿಷ್ಯವನ್ನು ಸುಸ್ಥಿರಗೊಳಿಸಲಿದೆ. ಅಲ್ಲದೆ, ದೇಶೀಯ ವಾಯುಮಾರ್ಗ ಸರಕು ಸಾಗಣೆಯ ನಿರ್ವಹಣೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣವನ್ನು ಮುಂಚೂಣಿಯಲ್ಲಿರುವಂತೆ ಮಾಡಲಿದೆ.

ವ್ಯಾಪ್ತಿಯ ವಿವರ: 7 ಹೆಕ್ಟೇರ್‌ನಲ್ಲಿ ವ್ಯಾಪಿಸಿರುವ ಬೃಹತ್‌ ದೇಶೀಯ ಕಾರ್ಗೋ ಟರ್ಮಿನಲ್‌, ಸುಮಾರು 360,000 ಮೆಟ್ರಿಕ್ ಟನ್‌ಗಳ ಗರಿಷ್ಠ ನಿರ್ವಹಣಾ ಸಾಮರ್ಥ್ಯ ಮತ್ತು 400,000 ಮೆಟ್ರಿಕ್ ಟನ್‌ಗಳವರೆಗೆ ವಿಸ್ತರಿಸಬಹುದಾದ ಅವಕಾಶವನ್ನು ಕೂಡ ಹೊಂದಿದೆ. ಅಲ್ಲದೆ, ಸುಮಾರು 42 ಬೃಹತ್‌ ಟ್ರಕ್‌ಗಳು, 400ಕ್ಕೂ ಹೆಚ್ಚು ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಾರ್ಗೋ ಬೋಗಿಗಳು ಸಂಚರಿಸುವ ಸಾಮರ್ಥ್ಯವನ್ನು ಹೊಸ ಕಾರ್ಗೋ ಟರ್ಮಿನಲ್‌ ಒಳಗೊಂಡಿದೆ.

ಸರಕುಗಳನ್ನು ಪರೀಕ್ಷಿಸುವ ಎಕ್ಸ್‌-ರೇ ಯಂತ್ರದ ಜೊತೆ ಸಂಯೋಜಿಸಲ್ಪಟ್ಟ ಸಾಧನಗಳು, ವಿಮಾನಕ್ಕೆ ಸರಕುಗಳನ್ನು ಸಾಗಿಸುವ ಮುನ್ನ ನಿರ್ವಹಣೆ ಮಾಡುವ ಸರಿಸುಮಾರು 30 ಕೇಂದ್ರಗಳು, ನೈಜ ಸಮಯದಲ್ಲಿ ಸರಕುಗಳ ದತ್ತಾಂಶ ಸಂಗ್ರಹಿಸುವ 40 ಹ್ಯಾಂಡ್‌ಹೆಲ್ಡ್ ಟರ್ಮಿನಲ್‌ ಸಾಧನಗಳು ಮತ್ತು ಏಜೆಂಟರಿಗೆ ಸ್ವಯಂ ಸೇವಾ ಕಿಯೋಸ್ಕ್‌ ಸೌಲಭ್ಯಗಳು ಈ ಹೊಸ ವಾಯುಯಾನ ಸರಕು ಸಾಗಣೆ ಟರ್ಮಿನಲ್‌ನಲ್ಲಿ ಇರಲಿವೆ.

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್‌ ಸೌಲಭ್ಯಗಳ ಜೊತೆಗೆ ಸುಸಜ್ಜಿತಗೊಂಡಿರುವ ಈ ಹೊಸ ಕಾರ್ಗೋ ಟರ್ಮಿನಲ್‌ನಲ್ಲಿ ಸರಕುಗಳ ಸಾಗಣೆಯ ನೈಜ ಸಮಯದ ಟ್ರ್ಯಾಕಿಂಗ್, ದತ್ತಾಂಶ ವಿಶ್ಲೇಷಣೆ ಪರಿಕರಗಳು, ಬಾರ್‌ಕೋಡ್‌ ಮತ್ತು ಕ್ಯೂಆರ್ ಕೋಡ್‌ಗಳೊಂದಿಗೆ ಸಂಯೋಜಿಸಲ್ಪಟ್ಟ ವರ್ಧಿತ ಸಂವಹನ ವ್ಯವಸ್ಥೆಗಳಂತಹ ನವೀನ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಹೀಗೆ ಹಲವು ಸೌಲಭ್ಯಗಳು ಏಕೀಕರಣಗೊಂಡಿರುವುದು ತಡೆರಹಿತ ದತ್ತಾಂಶ ವಿನಿಮಯಕ್ಕೆ ಅವಕಾಶ ಕಲ್ಪಿಸಿ, ಒಟ್ಟಾರೆ ಸರಕು ಸಾಗಣೆ ಪ್ರಕ್ರಿಯೆಯ ಸಮಯವನ್ನು ಕಡಿಮೆಗೊಳಿಸುತ್ತದೆ.

ಮಾನವನ ಅವಲಂಬನೆಯನ್ನ ಕಡಿಮೆ ಮಾಡಿ ವೇಗ ಮತ್ತು ಸುರಕ್ಷಿತವಾಗಿ ಸರಕು ನಿರ್ವಹಣೆ ಮಾಡಲು ಅನುವು ಮಾಡಿಕೊಡಲಿದೆ. ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು ಕಾರ್ಯಾಚರಣೆ, ಪೂರೈಕೆ ಸರಪಳಿಗಳನ್ನು ಸುಲಲಿತಗೊಳಿಸುತ್ತದೆ. ಒಟ್ಟಾರೆ, ಹೊಸ ಟರ್ಮಿನಲ್‌ ವಿಮಾನಯಾನ ಸಂಸ್ಥೆಗಳು, ಸರಕು ಏಜೆಂಟರು, ಅಂತಿಮ ಬಳಕೆದಾರರ ಸರಕು ನಿರ್ವಹಣಾ ಅನುಭವವನ್ನು ಹೆಚ್ಚಳ ಮಾಡಲಿದೆ.

ದೊಡ್ಡ ಮಟ್ಟದಲ್ಲಿ ಸರಕುಗಳ ರಫ್ತಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗಾಗಲೇ ಪ್ರಸಿದ್ಧಿ ಪಡೆದಿದೆ. ಇದೀಗ ಹೊಸದಾಗಿ ದೇಶೀಯ ಕಾರ್ಗೋ ಟರ್ಮಿನಲ್‌ ಅನ್ನು ಆರಂಭಿಸಿರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದ ಸರಕು ಸಾಗಣೆ ನಿರ್ವಹಣಾ ಸಾಮರ್ಥ್ಯ ಮತ್ತಷ್ಟು ಹೆಚ್ಚಾದಂತಾಗಲಿದೆ. ಜೊತೆಗೆ ಬೆಲೆಬಾಳುವ ವಸ್ತುಗಳು, ದುರ್ಬಲ ವಸ್ತುಗಳು, ಜೀವಂತ ಪ್ರಾಣಿಗಳು, ಅಪಾಯಕಾರಿ ಸರಕುಗಳು ಮತ್ತು ವಿಕಿರಣಶೀಲ ವಸ್ತುಗಳಂತಹ ವಿಶೇಷ ಸರಕುಗಳಿಗೆ ಮೀಸಲಾದ ಶೇಖರಣಾ ಪ್ರದೇಶಗಳನ್ನು ಸಹ ಟರ್ಮಿನಲ್ ಒಳಗೊಂಡಿದ್ದು, ಇದು ಸಮಗ್ರ ಸರಕು ನಿರ್ವಹಣಾ ಸಾಮರ್ಥ್ಯವನ್ನು ಬಲಪಡಿಸಲಿದೆ.

ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಮಾನದಂಡಗಳಿಗೆ ಅನುಗುಣವಾಗಿ ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಪರಿಸರ ಪರವಾಗಿ ಹೊಸ ಕಾರ್ಗೋ ಟರ್ಮಿನಲ್‌ನ ವಿನ್ಯಾಸಗೊಳಿಸಲಾಗಿದೆ. ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ವ್ಯಾಪಾರ-ವಾಣಿಜ್ಯ ವಹಿವಾಟುಗಳಿಗೆ ಹೊಸ ಮಾರ್ಗಗಳನ್ನು ಹೆಚ್ಚಿಸುವ ಮೂಲಕ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಕಾರ್ಗೋ ಟರ್ಮಿನಲ್ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ.

ಹೊಸ ಕಾರ್ಗೋ ಟರ್ಮಿನಲ್ ಪರಿಸರಸ್ನೇಹಿ ವೈಶಿಷ್ಟ್ಯಗಳಾದ ಸ್ಕೈಲೈಟಿಂಗ್, ಸುಧಾರಿತ ವಾತಾಯನ ವ್ಯವಸ್ಥೆ, ನೀರು ಸಂರಕ್ಷಣಾ ಅಭ್ಯಾಸಗಳು ಮತ್ತು ಇಂಧನ, ಸಮರ್ಥ ಮೂಲಸೌಕರ್ಯಗಳನ್ನೂ ಒಳಗೊಂಡಿದೆ. ಇವೆಲ್ಲವೂ ವಾಯುಯಾನ ಸರಕು ಸಾರಿಗೆ ಪ್ರಕ್ರಿಯೆಯಿಂದ ಪರಿಸರದ ಮೇಲೆ ಬೀರುವ ಪರಿಣಾಮವನ್ನು ಕಡಿಮೆ ಮಾಡಲು ಸಹಕರಿಸಲಿವೆ.

ಪರಿಸರ ಸುಸ್ಥಿರತೆ, ಸಿಬ್ಬಂದಿಯ ಯೋಗಕ್ಷೇಮ ಎರಡಕ್ಕೂ ಆದ್ಯತೆ ನೀಡಿ, ನವೀಕರಿಸಬಹುದಾದ ಇಂಧನ ಪರಿಹಾರಗಳನ್ನು ಹೊಸ ಟರ್ಮಿನಲ್‌ನಲ್ಲಿ ಸಂಯೋಜಿಸುವ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪರಿಸರ ಸ್ನೇಹಿ ಸರಕು ಕಾರ್ಯಾಚರಣೆಗಳಿಗೆ ವೇದಿಕೆ ಕಲ್ಪಿಸಿಕೊಡಲಿದೆ. ಈ ಬಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯಾಚರಣಾ ಅಧಿಕಾರಿ ಸತ್ಯಕಿ ರಘುನಾಥ್ ಅವರು ಮಾತನಾಡಿದ್ದಾರೆ.

"ಹೊಸ ದೇಶೀಯ ಕಾರ್ಗೋ ಟರ್ಮಿನಲ್ ಆರಂಭವು ಸುಸ್ಥಿರ ಬೆಳವಣಿಗೆಯನ್ನು ಸಾಧಿಸಲು ನಾವು ಹೊಂದಿರುವ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ವಾತಾವರಣವನ್ನು ಅಳವಡಿಸಿಕೊಳ್ಳುವ ಮೂಲಕ, ದೇಶೀಯವಾಗಿ ವಾಯುಮಾರ್ಗ ಸರಕು ಸಾಗಣೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ಈ ಹೊಸ ಹೆಜ್ಜೆ ಇಟ್ಟಿದ್ದೇವೆ. ಈ ಸೌಲಭ್ಯವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಮುಖ ವಾಯು ಸರಕು ಸಾಗಣೆ ಕೇಂದ್ರವಾಗಿಸಲಿದ್ದು, ಹೊಸ ಅವಕಾಶಗಳಿಗೆ ವೇದಿಕೆ ಕಲ್ಪಿಸಿ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲಿದೆ" ಎಂದು ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಸರ ಸ್ನೇಹಿ ದೇಶೀಯ ಕಾರ್ಗೋ ಟರ್ಮಿನಲ್‌ ಆರಂಭಿಸಿರುವುದು ಪರಿಣಾಮಕಾರಿ, ವಿಶ್ವಾಸಾರ್ಹ ಮತ್ತು ಭವಿಷ್ಯದ ಸರಕು ಸಾಗಣೆ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಭಾರತದಲ್ಲಿ ವಾಯುಯಾನ ಸರಕು ಸಾಗಣೆಯಲ್ಲಿ ತ್ವರಿತ ಬೆಳವಣಿಗೆ ಆಗುತ್ತಿದ್ದು, ಬೇಡಿಕೆಯು 2029ರ ವೇಳೆಗೆ 5.8 ದಶಲಕ್ಷ ಟನ್ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿನ ಬೇಡಿಕೆಯ ಪೂರೈಕೆಗಷ್ಟೇ ಅಲ್ಲದೆ, ಭವಿಷ್ಯದ ಅಗತ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೂತನ ಕಾರ್ಗೋ ಟರ್ಮಿನಲ್‌ ವಿನ್ಯಾಸಗೊಳಿಸಲಾಗಿದೆ ಎಂದು ಚಾರ್ಲ್ಸ್ ವೈಲಿ ಹೇಳಿದ್ಧಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+