ಕೆಐಎಎಲ್ ವಿಮಾನ ನಿಲ್ದಾಣದಿಂದ ನಗರಕ್ಕೆ ಹೆಲಿಕಾಪ್ಟರ್ ಸೇವೆ?

ಬೆಂಗಳೂರು, ಜನವರಿ 16: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60 ಕಿ.ಮೀ ದೂರವಿರುವ ಎಲೆಕ್ಟ್ರಾನಿಕ್ ಸಿಟಿಗೆ ಕೇವಲ 15 ನಿಮಿಷ ಸಾಕಾಗಲಿದೆ. ನಗರದ ಟ್ರಾಫಿಕ್ ನಲ್ಲಿ ಕೆಲವೊಮ್ಮೆ 1 ಕಿ.ಮೀ ದೂರ ಕ್ರಮಿಸಲು ಅರ್ಧ ಗಂಟೆ ಸಂಚರಿಸಬೇಕಾದ ವಾಹ ದಟ್ಟಣೆ ಇದೆ ಆದರೆ ಇಂತ ಸಮಸ್ಯೆಯಿಂದ ಸದ್ಯದಲ್ಲೇ ಮುಕ್ತಿ ದೊರೆಯಲಿದೆ.

ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ಅದರಲ್ಲೂ ವಿಮಾನ ಯಾನ ಪ್ರಯಾಣಿಕರು ಟ್ರಾಫಿಕ್ ನಿಂದ ಅನೇಕ ಬಾರಿ ತಾವು ಪ್ರಯಾಣಿಸಬೇಕಾದ ವಿಮಾನ ಹೊರಡುವ ಸಮಯಕ್ಕೆ ಹೋಗಲಾಗದೆ ಪ್ರಯಾಣವನ್ನೇ ತಪ್ಪಿಸಿ ಕೊಂಡಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಖಾಸಗಿ ಸಂಸ್ಥೆಯೊಂದು ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಆರಂಭಿಸುತ್ತಿದೆ.

ಅದಕ್ಕೆ ಬೇಕಾಗುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪ್ರಮುಖವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೆಲಿಪೋರ್ಟ್ ನಿರ್ಮಿಸಲಾಗುತ್ತಿದೆ. ಅದು ನಿಗದಿಗೊಂಡ ನಂತರ ಜನರನ್ನು ಕಡಿಮೆ ಅವಧಿಯಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸುವ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ.

Heli taxi service between KIAL and Electronic city Soon

15 ನಿಮಿಷ ಪ್ರಯಾಣ: ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ಕಳೆದ ವರ್ಷವೇ ಯೋಜನೆ ರೂಪಿಸಲಾಗಿತ್ತು. ಆದರೆ ಅದಕ್ಕೆ ಬೇಕಾಗುವ ಪೂರ್ವಾನುಮತಿ ಸೇರಿ ಇನ್ನಿತರ ಸಿದ್ಧತೆ ಪೂರ್ಣಗೊಳ್ಳಬೇಕಾಗಿರುವುದರಿಂದ ಸೇವೆ ಆರಂಭದಲ್ಲಿ ವಿಳಂಬವಾಗುತ್ತಿದೆ. ಈ ಯೋಜನೆ ಅಂತಿಮ ಹಂತಕ್ಕೆ ಬಂದಿದ್ದು, ಹೆಲಿಪೋರ್ಟ್ ಸಿದ್ಧಗೊಳಿಸಲಾಗುತ್ತಿದೆ.

ಮೂರು ಕಾಪ್ಟರ್ ಗಳಿಂದ ಸೇವೆ: ಸದ್ಯ ಖಾಸಗಿ ಸಂಸ್ಥೆ ರೂಪಿಸಿರುವ ಯೋಜನೆಯಂತೆ ಮೂರು ಹೆಲೆಕಾಪ್ಟರ್ ಗಳ ಮೂಲಕ ಸೇವೆ ನೀಡಲಾಗುತ್ತದೆ. 13 ಆಸನದ ಸಾಮರ್ಥ್ಯ ಯುಳ್ಳ ಎರಡು ಬೆಲ್-412 ಹೆಲಿಕಾಪ್ಟರ್ ಮತ್ತು 5 ಆಸನ ಸಾಮರ್ಥ್ಯವಿರುವ ಒಂದು ಬೆಲ್ -407 ಹೆಲಿಕಾಪ್ಟರ್ ಮೂಲಕ ಟ್ಯಾಕ್ಸಿ ಸೇವೆ ನೀಡಲಾಗುತ್ತದೆ.

ಪ್ರಾಯೋಗಿಕ ಸೇವೆ: ಪ್ರಾಯೋಗಿಕವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಸೇವೆ ಆರಂಭಿಸಲಾಗುತ್ತದೆ. ಒಂದು ವೇಳೆ ಪ್ರಯಾಣಿಕರ ಬೇಡಿಕೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ವೈಟ್ ಫೀಲ್ಡ್ ಮತ್ತು ಎಚ್ ಎಎಲ್ ವಿಮಾನ ನಿಲ್ದಾಣಕ್ಕೂ ಸೇವೆ ವಿಸ್ತರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+