• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಲ್ಲಿ ಮೈತ್ರಿ ಮುರಿಯುವ ಮಾತನಾಡಿದ ಕುಮಾರಸ್ವಾಮಿ!

|
Google Oneindia Kannada News

ಬೆಂಗಳೂರು, ನವೆಂಬರ್ 04 : 'ಎಲ್ಲಿ ಹೋದರು ಗುಂಡಿ, ಕಸದ ರಾಶಿ. ಯಾವ ಪುರುಷಾರ್ಥಕ್ಕೆ ಆಡಳಿತ ಮಾಡುತ್ತಿದ್ದೀರಿ. ಇಂತಹ ಆಡಳಿತ ನೋಡಿ ಸಾಕಾಗಿದೆ. ಇದು ಹಿಗೇಯೇ ಮುಂದುವರೆದರೆ ನೀಡಿರುವ ಬೆಂಬಲ ವಾಪಸ್ ಪಡೆಯಬೇಕಾಗುತ್ತದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಆಡಳಿತದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. 'ಫೋಟೋ ತೆಗಿಸಿಕೊಳ್ಳಲು ಮೇಯರ್ ಆದಿರಾ?' ಎಂದು ಮೇಯರ್ ಮಂಜುನಾಥ ರೆಡ್ಡಿ ಅವರನ್ನು ಪ್ರಶ್ನಿಸಿದರು. [ಬಿಬಿಎಂಪಿ ಮೈತ್ರಿ : ಜೆಡಿಎಸ್ ಗೆ ಲಾಭ ಹೆಚ್ಚು]

'ಬೆಂಗಳೂರು ನಗರದ ಎಲ್ಲಿ ಹೋದರೂ ಗುಂಡಿ, ಕಸದ ರಾಶಿ. ಇದನ್ನು ಮುಂದಿಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿ ಎಂದು ಆಹ್ವಾನ ನೀಡುತ್ತಿದ್ದೀರಿ. ಬಿಬಿಎಂಪಿಯಲ್ಲಿ ನೀವು ಅಧಿಕಾರ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ?' ಎಂದು ಕೇಳಿದರು. [ಬಿಬಿಎಂಪಿ ಮೈತ್ರಿ : ಎಲ್ಲಾ ಗೊಂದಲ ಬಗೆಹರಿಸಿದ ಎಚ್ಡಿಕೆ]

ಅಭಿವೃದ್ಧಿಗಾಗಿ ಬೆಂಬಲ : 'ಬಿಬಿಎಂಪಿಯಲ್ಲಿ ಹಿಂದೆ ಆಡಳಿತ ನೀಡಿದ ಬಿಜೆಪಿಯವರು ಲೂಟಿ ಹೊಡೆದಿದ್ದರು. ಈಗ ಕಾಂಗ್ರೆಸ್ ಸರ್ಕಾರವಿದೆ. ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯಲಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಮೇಯರ್ ಆಯ್ಕೆ ಸಂದರ್ಭದಲ್ಲಿ ಜೆಡಿಎಸ್ ಬೆಂಬಲ ನೀಡಿತ್ತು' ಎಂದು ಕುಮಾರಸ್ವಾಮಿ ಹೇಳಿದರು. [ಬಿಬಿಎಂಪಿ ಮೈತ್ರಿಗೆ ಎಚ್ಡಿಕೆ ಅಸಮಾಧಾನ]

'ಮೈತ್ರಿ ಮಾಡಿಕೊಂಡ ದಿನವೇ ಪಶ್ಚಾತಾಪ ವಾಗಿತ್ತು. ಇಂತಹ ಆಡಳಿತ ನೋಡಿಕೊಂಡು ಎಷ್ಟು ದಿನ ಇರಲು ಸಾಧ್ಯ. ಧಿಮಾಕು ಮಾಡಿ ಎಂದು ನಿಮಗೆ ಆಡಳಿತ ನೀಡಿಲ್ಲ. ಇಂತಹ ಆಡಳಿತ ನಡೆಸಿದರೆ ಮೈತ್ರಿಯನ್ನು ವಾಪಸ್ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತೇನೆ' ಎಂದರು.

ಮುನಿರತ್ನ ವಿರುದ್ಧ ಗರಂ : ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, 'ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್‌ನ ಬಿಬಿಎಂಪಿ ಸದಸ್ಯರು ಕಸವನ್ನು ತೆರವುಗೊಳಿಸಲು ಹೋದರೆ ಮುನಿರತ್ನ ಅವರು ಅಡ್ಡಿಪಡಿಸುತ್ತಾರೆ. ಬೆಂಗಳೂರು ನಗರದ ಬಗ್ಗೆ ನಿಮಗೆ ಕಾಳಜಿ ಇಲ್ಲವೇ?' ಎಂದು ಪ್ರಶ್ನಿಸಿದರು.

ಅಂದಹಾಗೆ 2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಜೆಡಿಎಸ್ ಕಾಂಗ್ರೆಸ್ ಮೈತ್ರಿಯಿಂದಾಗಿ ಅದಕ್ಕೆ ಮೇಯರ್ ಸ್ಥಾನ ಕೈತಪ್ಪಿತು. ಜೆಡಿಎಸ್ ಬೆಂಬಲ ಪಡೆದು ಮಂಜುನಾಥ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

English summary
JDS state president H.D.Kumaraswamy expressed unhappiness over Congress administration in BBMP. On Wednesday Kumaraswamy addressed media at Vidhana Soudha, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X