ಬೆಂಗಳೂರಿಗರಿಗೆ ಗುಡ್‌ನ್ಯೂಸ್: ಈ ಮಾರ್ಗದಲ್ಲಿ 10 ಪಥದ ರಸ್ತೆ, 307 ಕೋಟಿ ರೂ. ಅನುದಾನ

ಬೆಂಗಳೂರಿನ ಪ್ರಮುಖ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇದೀಗ ಅನುಮೋದನೆ ನೀಡಿರುವ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನ ಕೆ.ಆರ್. ಪುರಂ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ORR ಮಾರ್ಗದ 307 ಕೋಟಿ ರೂ.ಗಳ ನವೀಕರಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯು ಕಾಂಕ್ರೀಟ್ ಪಾದಚಾರಿ ಮಾರ್ಗಗಳ ಅಭಿವೃದ್ಧಿಯೂ ಸೇರಿದೆ. ಈ ಯೋಜನೆಯ ಮೂಲಕ ಬೆಂಗಳೂರಿನ ಕೃಷ್ಣರಾಜಪುರ ಹಾಗೂ ಸಿಲ್ಕ್ ಬೋರ್ಡ್ ಮಾರ್ಗದ ಎರಡೂ ಬದಿಗಳಲ್ಲಿ ಸೈಕಲ್ ಪಥ ದ್ವಿಗುಣಗೊಳ್ಳಲಿವೆ. ರಸ್ತೆಯ ಕೆಲವು ಭಾಗಗಳನ್ನು ಪುನರ್ ನಿರ್ಮಿಸಲು ಸಹ ಉದ್ದೇಶಸಲಾಗಿದೆ.

Good News for Bengaluru Residents 10-Lane Road Coming Up 307 Crore Allocated

307 ಕೋಟಿ ರೂ. ಅನುದಾನ: ಇನ್ನು ಬೆಂಗಳೂರಿನ ಈ ಪ್ರಮುಖ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 307 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಲಾಗಿದೆ. ಸಿಲ್ಕ್‌ ಬೋರ್ಡ್ ಜಂಕ್ಷನ್ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣದ ನಡುವಿನ ಹೊರ ವರ್ತುಲ ರಸ್ತೆ (ORR) ಮಾರ್ಗಕ್ಕೆ 307 ಕೋಟಿ ರೂ.ಗಳ ಮೊತ್ತದ ಅನುದಾನವನ್ನು ಮೊದಲ ಹಂತದಲ್ಲಿ ಮೀಸಲಿರಿಸಲಾಗಿದೆ. ಇದಕ್ಕೆ ಈಚೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಬೆಂಗಳೂರಲ್ಲಿ 17.01 ಕಿ.ಮೀ ಮಾರ್ಗ ಅಭಿವೃದ್ಧಿ

ಬೆಂಗಳೂರಿನಲ್ಲಿ ಸಾರ್ವಜನಿಕರ ಪ್ರಯಾಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವ ಉದ್ದೇಶದಿಂದ 17.01 ಕಿ.ಮೀ. ಮಾರ್ಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಅಧಿಕಾರಿಗಳ ಪ್ರಕಾರ, ನವೀಕರಿಸಿದ ಕಾರಿಡಾರ್ 10-ಲೇನ್‌ಗಳನ್ನು ಒಳಗೊಂಡಿದೆ. ಮೂರು ಮುಖ್ಯ ಕ್ಯಾರೇಜ್‌ವೇ ಲೇನ್‌ಗಳು ಮತ್ತು ಪ್ರತಿ ಬದಿಯಲ್ಲಿ ಎರಡು ಸರ್ವಿಸ್ ರಸ್ತೆ ಲೇನ್‌ಗಳು ಇರಲಿವೆ. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಕಂಟ್ರೋಲ್ ಮಾಡುವ ಉದ್ದೇಶದಿಂದ ಈ ಹಿಂದೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದ ಬಸ್ ಆದ್ಯತೆಯ ಲೇನ್ ಅನ್ನು ಮತ್ತೆ ಜಾರಿ ಮಾಡುವ ಉದ್ದೇಶ ಸಹ ಇದೆ ಎಂದು ಹೇಳಲಾಗಿದೆ.

ಸೈಕಲ್ ಲೈನ್ ಅಭಿವೃದ್ಧಿ: ಇನ್ನು ಬೆಂಗಳೂರಿನ ಈ ಮಾರ್ಗದಲ್ಲಿ ಸೈಕಲ್ ಲೈನ್‌ಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಉದ್ದೇಶಿಸಲಾಗಿದೆ. ಈ ಯೋಜನೆಯು ಕಾಂಕ್ರೀಟ್ ಪಾದಚಾರಿ ಮಾರ್ಗಗಳನ್ನು ಒಳಗೊಂಡಿದ್ದು, ಎರಡೂ ಬದಿಗಳಲ್ಲಿ ಸೈಕಲ್ ಪಥ ದ್ವಿಗುಣಗೊಳ್ಳಲಿವೆ. ರಸ್ತೆಯ ಕೆಲವು ಭಾಗಗಳನ್ನು ಪುನರ್ ನಿರ್ಮಿಸುವು ದಕ್ಕೂ ಪ್ಲ್ಯಾನ್ ರೂಪಿಸಿಕೊಳ್ಳಲಾಗಿದೆ. ಯೋಜನೆಯ ಆರಂಭಿಕ ಅಂದಾಜು ಸುಮಾರು 400 ಕೋಟಿ ರೂ.ಗಳಾಗಿದೆ. ಆದರೆ ಪ್ರಾರಂಭದ ಹಂತದಲ್ಲಿ ಕ್ಯಾಬಿನೆಟ್ 307 ಕೋಟಿ ರೂ.ಗಳನ್ನು ಅನುಮೋದನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+