ಅಕ್ಷಯ ತೃತೀಯಕ್ಕೆ ಬೆಲೆ ಏರಿಕೆ ಬಿಸಿ: ಚಿನ್ನದ ದುಬಾರಿ ಸಂಭವ

ಬೆಂಗಳೂರು, ಏಪ್ರಿಲ್ 16: ಈ ಬಾರಿ ಅಕ್ಷಯ ತೃತೀಯಕ್ಕೆಂದು ಚಿನ್ನ ಖರೀದಿಸಲು ಹೋದರೆ ಕಳೆದ ವರ್ಷಕ್ಕಿಂತಲೂ ಹೆಚ್ಚು ಹಣವನ್ನು ವ್ಯಯಿಸಬೇಕಾದೀತು.

ಚಿನ್ನದ ದರ 32 ಸಾವಿರ ರೂ. ತಲುಪಿದ್ದು, ಏ.18ರ ಅಕ್ಷಯ ತೃತೀಯ ಹೊತ್ತಿಗೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಬಹುದು. ಆಭರಣ ಮಾರಾಟ ಈ ಸಲ ಶೇ.15-20ರಷ್ಟು ವೃದ್ಧಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಭಾನುವಾರ 10 ಗ್ರಾಂ ಚಿನ್ನದ ಬೆಲೆ 32 ಸಾವಿರ ರೂ. ಆಗಿತ್ತು. ಹಿಂದಿನ ವರ್ಷಗಳಲ್ಲಿ ಇದೇ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 29-29 ಸಾವಿರ ರೂ. ದಾಟಿರಲಿಲ್ಲ. 2016 ಮೇ 9ರ ಅಕ್ಷಯ ತೃತೀಯ ದಿನ ಚಿನ್ನದ ಬೆಲೆ 29,860 ರೂ. ಆಗಿತ್ತು.

Gold rate may high on Akshaya Tritiya

ಮುಂದಿನ 3-4 ದಿನಗಳಲ್ಲಿ ಚಿನ್ನದ ಬೆಲೆ ಇದೇ ರೀತಿ ಏರಿದರೆ ಈ ಸಲದ ಅಕ್ಷಯ ತೃತೀಯ ದುಬಾರಿಯೆನಿಸಲಿದೆ. ಅಮೆರಿಕ-ಚೀನಾ ವ್ಯಾಪಾರ ಸಮರದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಈಗಾಗಲೇ ಗಗನಕ್ಕೇರಿದೆ. ಸೋಮವಾರ ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಚಿನ್ನದ ದರ ಹೆಚ್ಚಳವಾಗುತ್ತಿದೆ.

ಅಮೆರಿಕ ಮತ್ತು ಸಿರಿಯಾ ನಡುವಿನ ಕದನದ ಹಿನ್ನೆಲೆಯಲ್ಲಿ ಈ ವರ್ಷದ ಕೊನೆ ಹೊತ್ತಿಗೆ ಚಿನ್ನದ ಬೆಲೆಗಳು ತೀವ್ರ ಏರಿಕೆಯಾಗುವ ನಿರೀಕ್ಷೆ ಇದೆ. ಈ ವರೆಗೆ ಚಿನ್ನದ ದರದಲ್ಲಿ ಅಲ್ಪ ಏರಿಳಿಕೆ ಯಿದ್ದರೂ ದರ ಸ್ಥಿರವಾಗಿದೆ. ಮದುವೆ ಸೀಸನ್ ಸಹ ಪ್ರಸ್ತುತ ಚಾಲ್ತಿಯಲ್ಲಿದ್ದು ಮಾರುಕಟ್ಟೆಯನ್ನು ಸಕಾರಾತ್ಮಕವಾಗಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+