ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಳಚೆ ಪೈಪ್ ನಲ್ಲಿ ಸಿಲುಕಿದ್ದ ಬೆಕ್ಕನ್ನು ರಕ್ಷಿಸಿದ "ಜಿಎಚ್ಆರ್ ತಂಡ'

|
Google Oneindia Kannada News

ಬೆಂಗಳೂರು, ನವೆಂಬರ್ 20: ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಹರ್ಷ ಅವರ ಮನೆಯ ಕೊಳಚೆ ನೀರಿನ ಪೈಪ್ ನಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಲಾಗಿದೆ. ಬಿಜೆಪಿ ಮುಖಂಡ, ಜಿ.ಎಚ್ ರಾಮಚಂದ್ರ ಅವರ ಪುತ್ರ ಜಗದೀಶ್.ಆರ್.ಚಂದ್ರರವರಿಗೆ ಬೆಕ್ಕಿನ ಮರಿ ರಕ್ಷಣೆಗೆ ಸಹಾಯ ಮಾಡಲು ಹರ್ಷ ಮನವಿ ಮಾಡಿದ್ದರು.

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕೊರೊನಾ ಯೋಧರಾಗಿ ಸೇವೆ ಸಲ್ಲಿಸಿದ "ನಮ್ಮ Team GHR' ಸದಸ್ಯರು ತ್ವರಿತವಾಗಿ ಬೆಕ್ಕಿನ ರಕ್ಷಣೆಗೆ ಮುಂದಾದರು. ಮತ್ತು ಬೆಕ್ಕಿನ ಮರಿಯನ್ನು ಅದರ ತಾಯಿ ಬೆಕ್ಕಿನೊಂದಿಗೆ ಮತ್ತೆ ಒಂದುಗೂಡಿಸುವಲ್ಲಿ ಸಫಲರಾದರು. ಗುರುವಾರ ರಾತ್ರಿಯಿಂದ ಕೊಳಚೆನೀರಿನ ಪೈಪ್‌ನಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಲಾಗಿದ್ದು, ಇದಕ್ಕೆ ಸಹಕರಿಸಿದ ನಮ್ಮ Team GHR ತಂಡದ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು ಎಂದು ರಾಜರಾಜೇಶ್ವರಿ ನಗರದ ನಿವಾಸಿ ಹರ್ಷ ಹೇಳೀದ್ದಾರೆ.

ಬೆಕ್ಕನ್ನು ಹೊರತೆಗೆಯಲು ಪ್ರಯತ್ನ ಮಾಡಿದೆ

ಬೆಕ್ಕನ್ನು ಹೊರತೆಗೆಯಲು ಪ್ರಯತ್ನ ಮಾಡಿದೆ

ಬೆಕ್ಕಿನ ಮರಿಯ ರಕ್ಷಣೆ ಕುರಿತು ಮಾತನಾಡಿದ ಹರ್ಷ, ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ತುಂಬಾ ಶಬ್ಧ ಬರುತ್ತಿತ್ತು. ಬೀದಿ ಬೆಕ್ಕುಗಳು ಆಗಿದ್ದರಿಂದ ಮನೆಯಲ್ಲಿಯೇ ಸಾಕಿಕೊಂಡಿದ್ದೆ. ಜಾಸ್ತಿ ಶಬ್ಧ ಬರುತ್ತಿದೆ ಎಂದು ಹೊರ ಬಂದು ನೋಡಿದಾಗ, ೫ರಲ್ಲಿ ನಾಲ್ಕು ಬೆಕ್ಕಿನ ಮರಿಗಳು ಕಾಣಿಸಿಕೊಂಡವು.ಇನ್ನೊಂದು ಬೆಕ್ಕು ಪಕ್ಕದಲ್ಲಿದ್ದ ಪೈಪಿನೊಳಗೆ ಹೋಗಿತ್ತು, ಅದನ್ನು ಮುಚ್ಚಿದ್ದರೂ ಹೇಗೋ ಅದರೊಳಗೆ ಹೋಗಿ ಹೆಚ್ಚು ಸೌಂಡ್ ಮಾಡುತ್ತಿತ್ತು. ನಾನು ಬೆಕ್ಕನ್ನು ಹೊರತೆಗೆಯಲು ಪ್ರಯತ್ನ ಮಾಡಿದೆ. ಆದರೆ ಪ್ರಯೋಜನವಾಗಲಿಲ್ಲ.

ಎರಡು ದಿನದ ಶಿಶು ಕದ್ದು 80 ಸಾವಿರಕ್ಕೆ ಮಾರಾಟಎರಡು ದಿನದ ಶಿಶು ಕದ್ದು 80 ಸಾವಿರಕ್ಕೆ ಮಾರಾಟ

ಬೆಕ್ಕನ್ನು ರಕ್ಷಣೆ ಮಾಡಲ್ಲ

ಬೆಕ್ಕನ್ನು ರಕ್ಷಣೆ ಮಾಡಲ್ಲ

ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಪ್ರಾಣಿ ರಕ್ಷಣಾ ಸಂಘ ಅಂತಾ ಸಾವಿರ ಇದಾವೆ. ಆದರೆ ಅವರ್ಯಾರು ಸಹಾಯಕ್ಕೆ ಬರಲಿಲ್ಲ. ದಯವಿಟ್ಟು ಮನವಿ ಮಾಡಿಕೊಳ್ಳುತ್ತೇನೆ. ಬೆಕ್ಕನ್ನು ರಕ್ಷಣೆ ಮಾಡಲ್ಲ, ನಾಯಿಯನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಅಂತವರು ಕಂಪನಿ ಮುಚ್ಚಿಬಿಡಿ ಎಂದು ಹರ್ಷ ಸಿಡಿಮಿಡಿಗೊಂಡರು.

ನಮ್ಮ ಜಿಎಚ್ಆರ್ ತಂಡವನ್ನು ಕಳುಹಿಸಿದರು

ನಮ್ಮ ಜಿಎಚ್ಆರ್ ತಂಡವನ್ನು ಕಳುಹಿಸಿದರು

ಎಲ್ಲಾ ಪ್ರಾಣಿಗಳು ಒಂದೇ, ಎಲ್ಲ ಪ್ರಾಣಿಗಳ ಪ್ರಾಣವೂ ಒಂದೇ. ಎಲ್ಲ ಪ್ರಾಣಿಗಳ ರಕ್ಷಣೆಗೆ ಮುಂದಾಗಿ. ಜಿ.ಎಚ್ ರಾಮಚಂದ್ರಪ್ಪ ಅವರ ಮಗ ಜಗದೀಶ್ ನನಗೆ ಪಿಯು ಕ್ಲಾಸ್ ಮೇಟ್ ಆಗಿದ್ದ. ಫೇಸ್ ಬುಕ್ ನಲ್ಲಿ ಈ ಥರ ಆಗಿದೆ ಎಂದು ಕಮೆಂಟ್ ಹಾಕಿದೆ. ತಕ್ಷಣವೇ ಅವರ ನಮ್ಮ ಜಿಎಚ್ಆರ್ ತಂಡವನ್ನು ಕಳುಹಿಸಿದರು.

ಆಸ್ಪತ್ರೆಗೂ ಹೋಗಿ ತೋರಿಸುತ್ತೇನೆ

ಆಸ್ಪತ್ರೆಗೂ ಹೋಗಿ ತೋರಿಸುತ್ತೇನೆ

ಬೆಕ್ಕನ್ನು ರಕ್ಷಣೆ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ. ಮೇಲಿನಿಂದ ರಕ್ಷಣೆ ಮಾಡಲು ಅಸಾಧ್ಯವಾದಾಗ ಕೆಳಗೆ ಪೈಪ್ ಕೊರೆದು, ಬೆಕ್ಕನ್ನು ರಕ್ಷಣೆ ಮಾಡಿದರು. ಬೆಕ್ಕು ಆರೋಗ್ಯವಾಗಿದ್ದು, ಆಸ್ಪತ್ರೆಗೂ ಹೋಗಿ ತೋರಿಸುತ್ತೇನೆ. ಬೆಕ್ಕು ರಕ್ಷಣೆ ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ರಾಜರಾಜೇಶ್ವರಿ ನಿವಾಸಿ, ಪ್ರಾಣಿಪ್ರಿಯ ಹರ್ಷ ವಿಡಿಯೋ ಮೂಲಕ ಹೇಳಿದರು.

English summary
A cat Rescued in a sewer pipe in Rajarajeshwari Nagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X