Bengaluru Gas: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಟೌವ್‌ಗಳಿಗೆ ಭಾರೀ ಡಿಮ್ಯಾಂಡ್, ಕಾರಣವೇನು
ಮಧ್ಯಪ್ರಾಚ್ಯದಲ್ಲಿ ಯುದ್ಧ ಇನ್ನೂ ಮುಂದುವರಿದಿದೆ. ಅದರ ನೇರ ಹಾಗೂ ಪರೋಕ್ಷ ಪರಿಣಾಮಗಳು ಬೆಂಗಳೂರು ನಗರ ಸೇರಿದಂತೆ ಕರ್ನಾಟಕದಾದ್ಯಂತ ಬೀರಲು ಪ್ರಾರಂಭವಾಗಿದೆ. ಕರ್ನಾಟಕದ ವಿವಿಧ ಭಾಗದಲ್ಲಿ ಅಡುಗೆ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಎದುರಾಗಿದೆ. ಗ್ಯಾಸ್ ಸಿಲಿಂಡರ್‌ಗಳ ಕೊರತೆ ಎದುರಾದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ವಿವಿಧ ಭಾಗದ ಜನ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಇಂಡಕ್ಷನ್ ಸ್ಟೌವ್ ಹಾಗೂ ಎಲೆಕ್ಟ್ರಿಕ್ ಸಾಧನಗಳ ಮೊರೆ ಹೋಗುವುದು ಹೆಚ್ಚಾಗಿದೆ. ಮುಖ್ಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಬುಧವಾರದಿಂದ ನಗರದಾದ್ಯಂತ ಗೃಹೋಪಯೋಗಿ ಉಪಕರಣಗಳ ಅಂಗಡಿಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳ ಮಾರಾಟ ಮತ್ತು ಅವುಗಳ ಬೆಲೆ ವಿವರ ಕೇಳುವುದು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಬೆಂಗಳೂರಿನ ಹಾಸ್ಟೆಲ್‌ಗಳು, ಪಿಜಿಗಳು ಹಾಗೂ ಹೋಟೆಲ್‌ಗಳಿಗೆ ಸಂಕಷ್ಟ ಎದುರಾಗಿದೆ. ಇರಾನ್, ಅಮೆರಿಕ ಹಾಗೂ ಇಸ್ರೇಲ್ ನಡುವೆ ಯುದ್ಧವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಅನಿಲ ಪೂರೈಕೆ ಬಿಕ್ಕಟ್ಟಿನ ಸುದ್ದಿಯಿಂದಾಗಿ ಜನ ಆತಂಕಕ್ಕೆ ಒಳಗಾಗಿದ್ದು, ಎಲೆಕ್ಟ್ರಿಕ್ ಸಾಧನಗಳ ಮೊರೆ ಹೋಗಿದ್ದಾರೆ.

ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಬೆಲೆಯನ್ನು ವಿಚಾರಿಸುವ ಮತ್ತು ಮಾರಾಟದಲ್ಲಿ ಸ್ವಲ್ಪ ಏರಿಕೆ ಕಂಡುಬಂದರೆ, ಬುಧವಾರ ಕೆಲವು ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗುವುದರೊಂದಿಗೆ ತೀವ್ರ ಏರಿಕೆ ಕಂಡುಬಂದಿದೆ. ಜಯನಗರದ ಒಂದು ಅಂಗಡಿಯಲ್ಲಿ ಕೇವಲ ಒಂದು ದಿನದಲ್ಲಿ ಸುಮಾರು 350 ಇಂಡಕ್ಷನ್ ಸ್ಟೌವ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಎಲೆಕ್ಟ್ರಿಕ್ ಹಾಗೂ ಗ್ಯಾಸ್ ಸಿಲಿಂಡರ್‌ಗೆ ಪರ್ಯಾಯ ಸಾಧನಗಳನ್ನು ಜನ ಹುಡುಕುತ್ತಿದ್ದಾರೆ.
ಬೆಂಗಳೂರಿನ ಪಿಜಿ - ಹೋಟೆಲ್‌ಗಳಿಗೆ ಸಂಕಷ್ಟ
ಇನ್ನು ಬೆಂಗಳೂರಿನಲ್ಲಿ ಪಿಜಿ, ಹೋಟೆಲ್‌ಗಳು ಹಾಗೂ ಹಾಸ್ಟೆಲ್‌ಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಹಲವು ಪಿಜಿಗಳು, ಹೋಟೆಲ್‌ಗಳು ಹಾಗೂ ಹಾಸ್ಟೆಲ್‌ಗಳಲ್ಲಿ ಅಡುಗೆ ಮಾಡಿಕೊಳ್ಳುವುದಕ್ಕೆ ಸೌದೆ ಒಲೆಗಳ ಮೊರೆ ಹೋಗಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಆಗುವ ಸಾಧ್ಯತೆ ಇದೆ. ಆದರೆ ಹಾರ್ಮುಜ್ ಜಲಸಂಧಿಯ ಸಮಸ್ಯೆ ಬಗೆಹರಿಯುವ ವರೆಗೂ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ.












Click it and Unblock the Notifications