• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಂದರವಾಗಿ ನಡೆದ ಆತ್ಮೀಯ ಔತಣಕೂಟ..ಡಿಸಿಎಂ ಜೊತೆ ಗಾಲಿ ರೆಡ್ಡಿ

|

ಬೆಂಗಳೂರು, ಅಕ್ಟೋಬರ್ 31: ಅಕ್ರಮ ಗಣಿಗಾರಿಕೆ ಆರೋಪ ಹೊತ್ತು ಬಳ್ಳಾರಿಯಿಂದ ದೂರ ಉಳಿದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳ ಜೊತೆ ಔತಣಕೂಟದಲ್ಲಿ ಕಾಣಿಸಿಕೊಂಡಿದ್ದಾರೆ.

ದೀಪಾವಳಿ ಪಟಾಕಿ; ಬೆಂಗಳೂರಲ್ಲಿ ಮಾಲಿನ್ಯ ಶೇ 18ರಷ್ಟು ಹೆಚ್ಚಳ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕವೂ ಬಿಜೆಪಿ ಪಾಳಯದಲ್ಲಿ ಗಾಲಿ ರೆಡ್ಡಿ ಕಾಣಿಸಿಕೊಂಡಿರಲಿಲ್ಲ. ಪ್ರತ್ಯೇಕ ವಿಜಯನಗರ ಜಿಲ್ಲೆ ಬಗ್ಗೆ ಆನಂದ್ ಸಿಂಗ್ ಬಣ ಪಣ ತೊಟ್ಟಾಗಲು ಎದುರಿಸಿದವರಲ್ಲಿ ಸೋಮಶೇಖರ್ ರೆಡ್ಡಿ ಹಾಗೂ ಬಿ ಶ್ರೀರಾಮುಲು ಅವರು ಮುಂಚೂಣಿಯಲ್ಲಿದ್ದರು. ಆದರೆ ಈಗ ದೀಪಾವಳಿ ಔತಣಕೂಟದಲ್ಲಿ ಗಾಲಿ ಜನಾರ್ದನ ರೆಡ್ಡಿ ಭಾಗವಹಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ. ಮತ್ತೊಮ್ಮೆ ಸಕ್ರಿಯ ರಾಜಕೀಯಕ್ಕೆ ಮರಳಲು ಉತ್ಸುಕರಾಗಿರುವ ರೆಡ್ಡಿಗೆ ಕೋರ್ಟ್ ಕೇಸ್, ಹೈಕಮಾಂಡ್ ನೀತಿ ನಿಯಮಗಳು ಸದ್ಯಕ್ಕೆ ಅಡ್ಡಿಯಾಗಿವೆ.

ಗಾಲಿ ರೆಡ್ಡಿ ಬರೆದುಕೊಂಡಿದ್ದು ಹೀಗೆ...

ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಆತ್ಮೀಯರಾದ ಶ್ರೀ ಪಾರಸಮಲ್ ಬಗರೀಚ ಅವರು ಏರ್ಪಡಿಸಿದ ಔತಣಕೂಟದಲ್ಲಿ ಅವರ ಆಹ್ವಾನದ ಮೇರೆಗೆ ಭಾಗಿಯಾಗಿದ್ದೆ.

ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

ಈ ಒಂದು ಆತ್ಮೀಯ ಔತಣಕೂಟಕ್ಕೆ ನನ್ನನ್ನು ಆಹ್ವಾನಿಸಿ ಗೌರವಿಸಿದ ಪಾರಸ್ ಮಲ್ ಬಗರೀಚ ಕುಟುಂಬದ ಎಲ್ಲಾ ಸದಸ್ಯರುಗಳಿಗೆ, ಅವರ ಹಿತೈಷಿಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಈ ಒಂದು ಸುಂದರ ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ ಅಶ್ವಥ್ ನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡರಾದ ಶ್ರೀ ಲೆಹರ್ ಸಿಂಗ್ ರವರು ಸೇರಿದಂತೆ ಅನೇಕ ಗಣ್ಯರು, ಆತ್ಮೀಯರು ಭಾಗವಹಿಸಿದ್ದ ಈ ಔತಣಕೂಟದ ಕಾರ್ಯಕ್ರಮ ಸುಂದರ ಹಾಗೂ ಅತ್ಯಂತ ಆತ್ಮೀಯವಾಗಿತ್ತು.

ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.

ಗಾಲಿ ಜನಾರ್ದನ ರೆಡ್ಡಿ

English summary
Former minister Gali Janardhana Reddy Deepavali get together with DCM Ashwath Narayan and Parasmal Bagrecha, Lehar Singh and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X