ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 8: ಬೆಳ್ಳಂದೂರು ಕೆರೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು ಇದು ಮನುಕುಲವನ್ನೇ ನಾಶ ಮಾಡಬಲ್ಲ ಶಕ್ತಿ ಇದೆ ಎಂದು ಅಧ್ಯಯನವೊಂದು ಹೇಳಿರುವುದಾಗಿ ಪರಿಸರ ತಜ್ಞ ಡಾ. ಯಲ್ಲಪ್ಪರೆಡ್ಡಿ ತಿಳಿಸಿದ್ದಾರೆ.

ಬೆಳ್ಳಂದೂರು ಕೆರೆಯಲ್ಲಿ ನೊರೆ ಉತ್ಪತ್ತಿಯಾಗುವುದು, ಬೆಂಕಿ ಕಾಣಿಸಿಕೊಳ್ಳುವುದರ ಬಗ್ಗೆ ನೀವು ತಿಳಿದಿದ್ದೀರಾ ಆದರೆ ಆ ನೀರಿನಲ್ಲಿ ಮುನಷ್ಯರ ಕುಲವನ್ನೇ ನಾಶಮಾಡುವ ಶಕ್ತಿ ಇರುವ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಸುತ್ತಮುತ್ತಲ ಜನರನ್ನು ಆತಂಕಕ್ಕೀಡು ಮಾಡಿದೆ.

ಬೆಂಗಳೂರು ಮಳೆ, ಬೆಳ್ಳಂದೂರು ಕೆರೇಲಿ ನೊರೆ, ಪಿಕ್ನಿಕ್ ಗೆ ಹೋಗೋಣ ಬಾರೆ ಬೆಂಗಳೂರು ಮಳೆ, ಬೆಳ್ಳಂದೂರು ಕೆರೇಲಿ ನೊರೆ, ಪಿಕ್ನಿಕ್ ಗೆ ಹೋಗೋಣ ಬಾರೆ

ಇತ್ತೀಚೆಗೆ ಒಂದು ವಾರದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದ ಮತ್ತೆ ನೊರೆ ಉತ್ಪತ್ತಿಯಾಗಿದೆ. ಜತೆಗೆ ಅಧ್ಯನದ ವರದಿಯೊಂದು ಪರಿಸರ ತಜ್ಞರ ಕೈಗೆ ದೊರೆತಿದ್ದು, ಬೆಳ್ಳಂದೂರು ಕೆರೆಯ ಇನ್ನೊಂದು ಭಯಂಕರ ಮುಖದ ಕುರಿತು ಪರಿಚಯವಾಗಿದೆ.

Drug-resistant bacteria in Bellandur lake

ಮಾಲಿನ್ಯದಿಂದ ಯಾವ ಔಷಧಕ್ಕೂ ಜಗ್ಗದ ಮಾರಕ ರೋಗಗಳನ್ನು ಹರಡುವ ಬ್ಯಾಕ್ಟೀರಿಯಾಗಳು ನಮ್ಮ ಸುತ್ತಮುತ್ತಲಿನ ಕೆರೆಗಳಲ್ಲಿ ಸೃಷ್ಟಿಯಾಗಿವೆ. ನಾವು ನಾಗರೀಕರಣ ಹಾಗೂ ಕೈಗಾರೀಕರಣ ಪ್ರಕ್ರಿಯೆಯಲ್ಲಿ ತೊಡಗಿ ಕೆರೆಕಟ್ಟೆಗಳಲ್ಲಿರುವ ನೀರನ್ನು ಮಲಿನಗೊಳಿಸುತ್ತಿದ್ದೇವೆ ಎಂದು ವಿವರಿಸಿದರು.

ಬೆಳ್ಳಂದೂರು ಕೆರೆ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಚಂದ್ರಶೇಖರ್ ಟೀಕೆ ಬೆಳ್ಳಂದೂರು ಕೆರೆ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಚಂದ್ರಶೇಖರ್ ಟೀಕೆ

ಐಷಾರಾಮಿ ಜೀವನಕ್ಕೋಸ್ಕರ ನಾವು ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ, ನಿಸರ್ಗದ ಬಗ್ಗೆ ಪ್ರಾಮಾಣಿಕ ಪ್ರೀತಿ ಬೆಳೆಸಿಕೊಳ್ಳದಿದ್ದರೆ ನಿಸರ್ಗ ಮುನಿಸಿಕೊಳ್ಳುತ್ತದೆ ಎಂದರು.

English summary
Raw sewage flows in a steady stream into Bellandur lake, bringing with it heavy metals, froth-inducing phosphorus, coliforms and other microorganisms. The murky waters of the cesspool may even be a breeding ground for bacteria to develop into stronger, more drug-resistant varieties
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X