ಬೇನಾಮಿ ಆಸ್ತಿ ಪತ್ತೆ: ಕೆಎಎಸ್ ಅಧಿಕಾರಿ ಸುಧಾಗೆ ಇಡಿ ಉರುಳು ?

ಬೆಂಗಳೂರು ನ. 11: ಹಿರಿಯ ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಮನೆ ಹಾಗೂ ಬೇನಾಮಿದಾರ ರ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಕಳೆದ ಮೂರು ದಿನದಿಂದ 50 ಕೋಟಿ ರೂ.ಗೂ ಅಧಿಕ ಮೊತ್ತದ ಆಸ್ತಿ ಪತ್ತೆ ಹಚ್ಚಿದ್ದಾರೆ. ಸುಧಾ ಅವರ ಅಕ್ರಮ ಸಂಪತ್ತು ನೋಡಿ ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಡಾ. ಸುಧಾ ಅವರ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ 200ಕ್ಕೂಹೆಚ್ಚು ದಾಖಲೆ ಪತ್ರಗಳು, 50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರ ಲಭ್ಯವಾಗಿವೆ. ಊಹೆಗೂ ನಿಲುಕದ ರೀತಿ ಆಸ್ತಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಧಾ ಅವರ ಅಕ್ರಮ ಆಸ್ತಿ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಹಾಗೂ ಅದಾಯ ತೆರಿಗೆ ಇಲಾಖೆಗೆ ವಹಿಸುವ ಬಗ್ಗೆ ಎಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ವಿಚಾರವಾಗಿ ಇಂದು ಹಿರಿಯ ಎಸಿಬಿ ಅಧಿಕಾರಿಗಳು ಸತತ ಸಭೆ ನಡೆಸಿ ಚರ್ಚೆ ನಡೆಸಿರುವ ಮಾಹಿತಿಯನ್ನು ಎಸಿಬಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸುಧಾ ಅವರು ಬಿಡಿಎ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವೇಳೆ ಕೋಟ್ಯಂತರ ರೂ.ಗಳನ್ನು ಬೇನಾಮಿಯಾಗಿ ವಹಿವಾಟು ನಡೆಸಿರುವ ಸಂಶಯ ವ್ಯಕ್ತವಾಗಿದ್ದು, ಇದೀಗ ಇಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ತಯಾರಿ ನಡೆದಿದೆ.

Dr Sudha KAS Illegal Assets case: Directorate of Enforcement likely to probe

ಡಾ. ಸುಧಾ ಅವರ ಬೇನಾಮಿ ರೇಣುಕಾ ಸೇರಿದಂತೆ ಏಳಕ್ಕೂ ಹೆಚ್ಚು ಕಡೆ ದಾಳಿ ನಡೆದಿತ್ತು. ಸುಧಾ ಅವರಿಗೆ ಸೇರಿದ್ದ ಕೆ.ಜಿ ಗಟ್ಟಲೆ ಚಿನ್ನಾಭರಣ ಸ್ವರ್ಣ ಸಾಮ್ರಾಜ್ಯ ಬೆಳಕಿಗೆ ಬಂದಿತ್ತು. ಇದೀಗ 50 ಕೋಟಿ ರೂ. ಮೌಲ್ಯದ ಅಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಇಡಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+