ಡಬಲ್ ಡೆಕ್ಕರ್ ಮೆಟ್ರೋಗೆ ಸಿಗಲಿಲ್ಲ ಅನುಮತಿ: ಹೆಬ್ಬಾಳ-ಸರ್ಜಾಪುರ ಮಾರ್ಗದ ಮರುಪರಿಶೀಲನೆಗೆ ಸೂಚನೆ
ಬೆಂಗಳೂರು: ₹28,405 ಕೋಟಿ ವೆಚ್ಚದ ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗಕ್ಕೆ ಕೇಂದ್ರದ ಅನುಮೋದನೆ ತಾತ್ಕಾಲಿಕವಾಗಿ ತಡವಾದ ಹಿನ್ನೆಲೆ ಸಂಪೂರ್ಣ ಮಾರ್ಗವನ್ನು ಡಬಲ್ ಡೆಕ್ಕರ್ ಆಗಿ ರೂಪಿಸುವ ರಾಜ್ಯದ ನಿಯಮವೇ ಅಡ್ಡಿಯಾಗಿದೆ ಎಂಬ ಚರ್ಚೆ ವೇಗ ಪಡೆದಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಸಂಪೂರ್ಣ ಕಾರಿಡಾರ್ನ್ನು ಡಬಲ್ ಡೆಕ್ಕರ್ ರೂಪದಲ್ಲಿ ನಿರ್ಮಿಸುವುದು ಸಾಮೂಹಿಕ ಸಾರಿಗೆ ಗುರಿಗಳಿಗೆ ಧಕ್ಕೆಯುಂಟುಮಾಡಬಹುದು ಎಂದು ಎಚ್ಚರಿಕೆ ನೀಡಿದ್ದು, ವಿನ್ಯಾಸವನ್ನು ಮರುಪರಿಶೀಲಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಸೂಚಿಸಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ವಿಷಯವನ್ನು ಪ್ರಸ್ತಾಪಿಸಿ ಚರ್ಚೆಗೆ ದಾರಿ ಮಾಡಿದ್ದಾರೆ. ಆಯ್ದ ಜಂಕ್ಷನ್ಗಳಲ್ಲಿ ಮಾತ್ರ ಡಬಲ್ ಡೆಕ್ಕರ್ ಪರಿಗಣನೆ ಯೋಗ್ಯವಾಗಬಹುದು. ಆದರೆ ಸಂಪೂರ್ಣ ಕಾರಿಡಾರ್ನ್ನೇ ಅದೇ ಮಾದರಿಯಲ್ಲಿ ನಿರ್ಮಿಸುವುದು ಅಪಾಯವನ್ನುಂಟುಮಾಡುತ್ತದೆ ಎಂದು ಸೂಚಿಸಿದ್ದಾರೆ.

ಏನೆಲ್ಲ ಅನಾನುಕೂಲ?
ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಭಿಪ್ರಾಯದಂತೆ, ರಸ್ತೆಯ ಮೇಲ್ಭಾಗದಲ್ಲಿ ಸಂಪೂರ್ಣ ಉದ್ದಕ್ಕೂ ಡಬಲ್ ಡೆಕ್ಕರ್ ರಚನೆ ಮಾಡಿದರೆ, ಖಾಸಗಿ ವಾಹನ ಬಳಕೆ ಉತ್ತೇಜನಕ್ಕೆ ಸಾಧ್ಯವಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಾಣಲಿದ್ದು, ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ಕಡಿಮೆಯಾಗುವುದಿಲ್ಲ. ಈ ಯೋಜನೆಯ ಆರ್ಥಿಕ-ಸಾಮಾಜಿಕ ಲಾಭಾಂಶದ ಮೇಲೆ ಪರಿಣಾಮ ಬೀರುವ ಅಪಾಯಗಳಿವೆ ಎಂದಿದ್ದಾರೆ.
ಹೀಗಾಗಿ ಹೆಬ್ಬಾಳ-ಸರ್ಜಾಪುರ ಮಾರ್ಗದ ವಿನ್ಯಾಸವನ್ನು ಮರುಪರಿಶೀಲಿಸಬೇಕು. ಡಬಲ್ ಡೆಕ್ಕರ್ ಅಗತ್ಯವಿರುವ ಭಾಗಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಪ್ರಯಾಣಿಕರ ಅಂದಾಜು, ಸಂಚಾರ ಮಾದರಿ, ವೆಚ್ಚ-ಲಾಭ ವಿಶ್ಲೇಷಣೆಗಳನ್ನು ಸ್ಪಷ್ಟಪಡಿಸಬೇಕು. ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವ ಕ್ರಮಗಳಿಗೆ ಆದ್ಯತೆ ಕೊಡಬೇಕು. ಈ ಎಲ್ಲ ಅಂಶಗಳೊಂದಿಗೆ ಕೇಂದ್ರ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
A double-decker may be justified at select junctions. But extending it across an entire corridor risks creating parallel infrastructure, encouraging private vehicle use, reducing Metro ridership, and weakening anticipated social benefits including lower congestion and pollution.
— P C Mohan (@PCMohanMP) February 11, 2026
ಪಿ.ಸಿ.ಮೋಹನ್ ಅವರ ಪೋಸ್ಟ್ ಬಳಿಕ ನಗರ ಸಾರಿಗೆ ಯೋಜನೆಗಳ ದಿಕ್ಕು ಕುರಿತು ಸಾರ್ವಜನಿಕ ಹಾಗೂ ತಜ್ಞರ ವಲಯದಲ್ಲಿ ಚರ್ಚೆ ಗರಿಗೆದರಿದೆ. ಆಯ್ದ ಜಂಕ್ಷನ್ಗಳಲ್ಲಿ ಡಬಲ್ ಡೆಕ್ಕರ್ ಒಳ್ಳೆಯದೇ ಆದರೂ ಸಂಪೂರ್ಣ ಕಾರಿಡಾರ್ನಲ್ಲಿ ಅದನ್ನು ಜಾರಿಗೊಳಿಸುವುದು ಮೆಟ್ರೋದ ಮೂಲ ಉದ್ದೇಶ ಹಾಗೂ ಸಾರ್ವಜನಿಕ ಸಾರಿಗೆ ಉತ್ತೇಜನಕ್ಕೆ ವಿರುದ್ಧವಾಗಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಬಿಎಂಆರ್ಸಿಎಲ್ ಮರುಪರಿಶೀಲಿತ ವಿನ್ಯಾಸದೊಂದಿಗೆ ಕೇಂದ್ರಕ್ಕೆ ಸಮರ್ಥನೆ ನೀಡಿದ ಬಳಿಕವೇ ಅಂತಿಮ ಅನುಮೋದನೆ ಸಿಗುವ ಸಾಧ್ಯತೆ ಇದೆ. ಯೋಜನೆಗೆ ಹಸಿರು ನಿಶಾನೆ ಸಿಗುವುದೇ ಅಥವಾ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳಾಗುವುದೇ ಎಂಬುದು ಮುಂದಿನ ಕ್ರಮಗಳ ಮೇಲೆ ಅವಲಂಬಿತವಾಗಿದೆ.
ಸಾರ್ವಜನಿಕರ ವಾದವೇನು?
ಬೆಂಗಳೂರು ಮೆಟ್ರೋ ಫೇಸ್-3ಎ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ ಡಬಲ್ ಡೆಕ್ಕರ್ ಪರಿಕಲ್ಪನೆಯ ವಿಚಾರದಲ್ಲೇ ತಡವಾಗುತ್ತಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಹಲವರು ನಾಗ್ಪುರ ಮೆಟ್ರೋದಲ್ಲಿ 5.6 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮಾರ್ಗಕ್ಕೆ ಅನುಮೋದನೆ ದೊರೆತಿದೆ ಎಂದು ಉಲ್ಲೇಖಿಸುತ್ತಿದ್ದಾರೆ. ಅಲ್ಲಿ ರಸ್ತೆ ಮತ್ತು ಮೆಟ್ರೋ ಒಟ್ಟಿಗೆ ನಿರ್ಮಾಣಗೊಂಡು "ವಿಶ್ವದಾಖಲೆ" ಉದ್ದದ ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಹೋಲಿಕೆ ಮಾಡಿ, ಭಾರೀ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ನಗರಕ್ಕೆ ಇದೇ ರೀತಿಯ ಡಬಲ್ ಡೆಕ್ಕರ್ ಮಾದರಿಯನ್ನು ಯಾಕೆ ಅನುಮೋದಿಸಲಾಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಕೂಡ ಮುಂದಿಡುತ್ತಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications