• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಿವನ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಶ್ರುತಿ ಹರಿಹರನ್ ಮೋಡಿ ನೋಡಿ

|

ಬೆಂಗಳೂರು, ನವೆಂಬರ್ 14: ಲಿವನ್ ಟೈಮ್ಸ್ ಫ್ರೆಶ್ ಫೇಸ್ ನ 11ನೇ ಆವೃತ್ತಿಯಲ್ಲಿ ದಿವಾಸ್ ಕೌಶಿಕ್ ಹಾಗೂ ಸುಕನ್ಯಾ ಗೆಲುವಿನ ಕಿರೀಟ ಪಡೆದಿದ್ದಾರೆ.

ಲಿವನ್ ಟೈಮ್ಸ್ ಫ್ರೆಶ್ ಫೇಸ್ ಬೆಂಗಳೂರಿನ ಯುವ ಪ್ರತಿಭೆಗಳಿಗೆ ಅವರ ವ್ಯಕ್ತಿತ್ವ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಯಿತು.

ಬೆಂಗಳೂರಿನ 20 ಕಾಲೇಜು ಹಾಗೂ 1 ಓಪನ್ ಮಾಲ್ ನಲ್ಲಿ ನಡೆಸಿದ ಈ ಪ್ರತಿಭಾನ್ವಷಣೆಯ ಆಡಿಷನ್ ನಲ್ಲಿ ಕಠಿಣ ಆಯ್ಕೆಯ ಮೂಲಕ 150 ಸೆಮಿಫೈನಲಿಸ್ಟ್ ಗಳನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಟಾಪ್ 20 ಅನ್ನು ಸಿಟಿ ಫಿನಾಲೆಗಾಗಿ ಆಯ್ಕೆ ಮಾಡಲಾಯಿತು.

ಇದರಲ್ಲಿ ದಿವಾಸ್ ಕೌಶಿಕ್ ಹಾಗೂ ಸುಕಾನ್ಯ ಗಿರೀಶ್ ವಿಜೇತರಾದರು. ಲೈಂಗಿಕ ದುರ್ಬಳಕೆ ಹಾಗೂ ದಾಳಿಗೆ ಸಂಬಂಧಪಟ್ಟಂತೆ ದಿವಾಸ್ ಕೌಶಿಕ್ ಅವರ ಅದ್ಭುತವಾದ ಅಭಿನಯ ತೀರ್ಪುಗಾರರ ಮನಸೆಳೆಯಿತು. ಹಾಗೇ ಸುಕನ್ಯಾ ಗಿರೀಶ್ ಅವರು ತಮ್ಮ ಪ್ರತಿಭೆಯಿಂದ ತೀರ್ಪುಗಾರರು ಹಾಗೂ ಪ್ರೇಕ್ಷಕರ ಗಮನ ಸೆಳೆದರು.

ಸ್ಪರ್ಧಿಗಳ ಪ್ರತಿಭೆ ಹಾಗೂ ಅವರು ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸಿಕೊಂಡರು ಹಾಗೇ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವರ ಅಭಿಪ್ರಾಯ ಎಂಬಿತ್ಯಾದಿ ವಿಷಯಗಳ ಆಧಾರದ ಮೇಲೆ ತೀರ್ಪುಗಾರರು ಅವರನ್ನು ಆಯ್ಕೆ ಮಾಡಿದರು. ನಟಿ ಶೃತಿ ಹರಿಹರನ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಇಲ್ಲಿ ಸ್ಪರ್ಧಿಗಳನ್ನು ಅವರ ವ್ಯಕ್ತಿತ್ವ, ಪ್ರತಿಭೆ, ಜ್ಞಾನ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವರ ಅರಿವುಗಳ ಆಧಾರದ ಮೇಲೆ ನಿರ್ಣಯ ಮಾಡಲಾಯಿತು. ಆಯ್ಕೆಯಾದ ಪ್ರತಿ ನಗರದ ಫೈನಲಿಸ್ಟ್ ಗಳು ಮುಂಬೈಯಲ್ಲಿ ನಡೆಯಲಿರುವ ನ್ಯಾಷನಲ್ ಗ್ರಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಲಿದ್ದಾರೆ. ಇಲ್ಲಿ ವಿಜೇತರಾದ ಒಬ್ಬ ಹುಡುಗ ಹಾಗೂ ಒಬ್ಬ ಹುಡುಗಿ ಲಿವನ್ ಟೈಮ್ಸ್ ಫ್ರೆಶ್ ಫೇಸ್ನ11ನೇ ಆವೃತ್ತಿಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.

ಹಾಗೇ ಯಾರು ಈ ಆಡಿಷನ್ ಅನ್ನು ಮಿಸ್ ಮಾಡಿಕೊಂಡಿದ್ದಾರೋ ಅವರು ನೇರವಾಗಿ ಮುಂಬೈನಲ್ಲಿ ನಡೆಯಲಿರುವ ಲಿವನ್ ಟೈಮ್ಸ್ ಫ್ರೆಶ್ ಫೇಸ್ ಸೀಸನ್ 11ರ ರಾಷ್ಟ್ರೀಯ ಫಿನಾಲೆಗೆ ಹೋಗಬಹುದು.

ಲಿವನ್ ಮಿಸ್ ಫ್ಯಾಬ್ ಹಾಗೂ ಸೆಟ್ ವೆಟ್ ಪ್ರಾಯೋಜಕತ್ವದ ವೈಲ್ಡ್ ಕಾರ್ಡ್ ಪ್ರವೇಶದಿಂದ ನ್ಯಾಷನಲ್ ವಿನ್ನರ್ ಆಗುವ ಅವಕಾಶವನ್ನು ನೀಡಲಿದೆ.

English summary
Divas Koushik and Sukanya Girish have won 11th edition of Bengaluru fresh face crown which was organized for youths in Bengaluru. More than 150 youths were participated in the audition round and 20 were selected for the grand finale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X