Watch Video: ಬೆಂಗಳೂರಿನ Cult.fit ಜಿಮ್‌ನಲ್ಲಿ 20 ಕೆಜಿ ಪ್ಲೇಟ್ ಎಸೆತ! ಕೂದಲೆಳೆ ಅಂತರದಲ್ಲಿ ಯುವತಿ ಪಾರು
ಬೆಂಗಳೂರು: ಜಿಮ್‌ವೊಂದರಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಇನ್ನೊಬ್ಬನ ಮುಖಕ್ಕೆ ಪಂಚ್ ಕೊಟ್ಟಿದ್ದರಿಂದ ಸಂತ್ರಸ್ತ ಐಸಿಯುನಲ್ಲಿ ಚಿಕಿತ್ಸೆ ಪಡೆಯುವಂತಾಗಿತ್ತು. ಈ ಘಟನೆ ವೈರಲ್ ಆದ ಬೆನ್ನಲ್ಲೆ ಜಿಮ್ ಗೆ ಹೆಸರು ವಾಸಿಯಾದ ಕಲ್ಟ್ ಫಿಟ್ (Cult.fit Gym) ನಲ್ಲಿ ಮತ್ತೊಂದು ಘಟನೆ ನಡೆದಿದೆ. ಸ್ವಲ್ಪ ಯಾಮಾರಿದ್ದರೂ ಯುವತಿಯೊಬ್ಬರಿಗೆ ಗಂಭೀರ ಗಾಯಗಳಾಗುತ್ತಿದ್ದವು. ಬೆಂಗಳೂರಿನ ಕಲ್ಟ್ ಫಿಟ್ ಜಿಮ್‌ನಲ್ಲಿ ಸುರಕ್ಷತೆ ಕುರಿತು ಪ್ರಶ್ನೆಗಳು ಮೂಡಿವೆ.
ಯುವ ಸಮೂಹ ಫಿಟ್‌ನೆಸ್‌ಗಾಗಿ ಜಿಮ್‌ಗೆ ಸೇರಿಕೊಳ್ಳುತ್ತಾರೆ. ಅದರಲ್ಲೂ ಬೆಂಗಳೂರಿನಂತಹ ನಗರದಲ್ಲಿ ಕಲ್ಟ್ ಫಿಟ್ ಜಿಮ್ ಕ್ರೇಜ್ ಹೆಚ್ಚಿದೆ. ಇಲ್ಲಿನ ಇಂದಿರಾನಗರದ ಕಲ್ಟ್ ಫಿಟ್‌ನಲ್ಲಿ ಪೀಕ್ ಸಮಯದಲ್ಲಿ ಜಿಮ್ ಮಾಡುತ್ತಿದ್ದ ಸದಸ್ಯನೊಬ್ಬ 20ಕೆಜಿ ತೂಕದ ಪ್ಲೇಟ್ ಅನ್ನು ಸಹ ಸದಸ್ಯರತ್ತ ಎಸೆದಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕಲ್ಟ್ ಫಿಟ್ ಕ್ರಮ ಕೈಗೊಂಡಿದೆ. ನೆಟ್ಟಿಗರು ಸುರಕ್ಷತೆ ಬಗ್ಗೆ ಪ್ರಶ್ನಿಸಿದ ಮೇಲೆ ಕಲ್ಟ್‌ಫಿಟ್ ಸಂಸ್ಥೆ ಎಚ್ಚೆತ್ತುಕೊಂಡಿದೆ.

ಜಿಮ್ ವೈರಲ್ ವಿಡಿಯೋದಲ್ಲಿ ಏನಿದೆ?
ಪೀಕ್ ಹವರ್‍ನಲ್ಲಿ ಜಿಮ್‌ನಲ್ಲಿ ಸಲಕರಣೆಗಳು ಪರಸ್ಪರ ಹಂಚಿಕೊಂಡು, ಹೊಂದಾಣಿಕೆಯಲ್ಲಿ ವರ್ಕೌಟ್ ಮಾಡಬೇಕಾಗುತ್ತದೆ. ಒಬ್ಬರಿಗೊಬ್ಬರು ಸಹಕರಿಸಬೇಕಿರುವುದು ಅನಿವಾರ್ಯವಾಗುತ್ತದೆ. ಆದರೆ ಇಲ್ಲೊಬ್ಬ ಜಿಮ್ ಸಲಕರಣೆ ಕೇಳಿದ್ದಕ್ಕೆ ಕೋಪಗೊಂಡು ಸಹ ಸದಸ್ಯರ ಬಳಿಕ 20 ಕೆಜಿ ಪ್ಲೇಟ್ ಎಸೆದಿದ್ದಾರೆ. ಪ್ಲೇಟ್ ತನ್ನತ್ತ ಬೀಳುತ್ತಿದ್ದಂತೆ ಕ್ಷಣಮಾತ್ರದಲ್ಲಿ ಬದಿಗೆ ಸರಿದು ಯುವತಿ ಬಚಾವ್ ಆಗಿದ್ದಾಳೆ. ಒಂದು ವೇಳೆ ಯುವತಿಗೆ ಪ್ಲೇಟ್ ತಾಗಿದ್ದರೆ ಗಂಭೀರವಾಗಿ ಗಾಯಗಳಾಗುವ ಸಾಧ್ಯತೆ ಇತ್ತು.
ಈ ಘಟನೆ ವಿಡಿಯೋ ವನ್ನು ರೋಹನ್ ಪೆರೇರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಾನೊಬ್ಬನೇ ಜಿಮ್ ಸಕಲರಣೆಗಳನ್ನು ಬಳಸಲು ಇಚ್ಛಿಸಿದ್ದ. ಕೇಳಿದರೆ ಕೋಪಗೊಂಡು ಎಸೆದಿದ್ದಾಗಿ ಅವರು ತಿಳಿಸಿದ್ದಾರೆ. ಮೊದಲಿಗೆ ರೋಹನ್ ಅವರು ಘಟನೆಯನ್ನು ಜಿಮ್ ಮುಖ್ಯಸ್ಥರ ಗಮನಕ್ಕೆ ತಂದರು. ಆದರೆ ಪ್ರಯೋಜನವಾಗಿಲ್ಲ. ಕೊನೆಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಲ್ಟ್ ಫಿಟ್‌ಗೆ ಟ್ಯಾಗ್ ಮಾಡಲಾಗಿದೆ. ನೋಡ ನೋಡುತ್ತಿದ್ದಂತೆ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂದು ಬಳಿಕ ಜಿಮ್ ಮುಖ್ಯಸ್ಥರು, ಕಲ್ಟ್ ಫಿಟ್ ಸಂಸ್ಥೆ ಮಾಲೀಕರು ಎಚ್ಚೆತ್ತು ಸದಸ್ಯತ್ವ ರದ್ದುಗೊಳಿಸಿದ್ದಾರೆ.
ಪ್ಲೇಟ್ ಎಸೆದ ಸದಸ್ಯನ ಜಿಮ್ ಸದಸ್ಯತ್ವ ರದ್ದು
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜಿಮ್ ಮುಖ್ಯಸ್ಥರು ಪ್ಲೇಟ್ ಎಸೆದವನ ಸದಸ್ಯತ್ವ ರದ್ದುಗೊಳಿಸಿದ್ದಾಗಿ ತಿಳಿಸಿದ್ದಾರೆ. ಸುರಕ್ಷತೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಇಂತಹ ವರ್ತನೆ ಸಹಿಸುವುದಿಲ್ಲ ಎಂದು ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ವಿಡಿಯೋಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.
A man at a gym in Bengaluru’s Indiranagar threw 20-kg weight plates after being asked to share equipment, with one plate narrowly missing a woman. Police initiated legal action, while the gym cancelled his membership following an investigation.#bengaluru #indiranagar #cultfit… pic.twitter.com/U2QWyzAEe0
— Salar News (@EnglishSalar) September 21, 2026
ನೆಟ್ಟಿಗರು ಹೇಳಿದ್ದೇನು?
ಜಿಮ್ ನಲ್ಲಿನ ತೂಕದ ಪ್ಲೇಟ್‌ಗಳನ್ನು ಹೀಗೆ ಕೋಪದಿಂದ ಇತರರೆಡೆಗೆ ಎಸೆದಾಗ ಅದರಿಂದ ಸಾಕಷ್ಟು ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಆ ಯುವತಿಗೆ ತಾಗಿದ್ದರೆ ಗಂಭೀರ ಗಾಯಗಳಾಗುವ ಸಾಧ್ಯತೆ ಇತ್ತು. ಇಂತಹ ವರ್ತನೆ ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications
