ತೀರ್ಥಯಾತ್ರೆ ವೇಳೆ ತಪ್ಪಿಸಿಕೊಂಡಿದ್ದ ವೃದ್ಧ: ChatGPTಯಿಂದ ಅಡ್ರೆಸ್ ಹುಡುಕಿ ಮನೆ ಮುಟ್ಟಿಸಿದ ವ್ಯಕ್ತಿ! Viral

ಚಂಡಿಗಢ: ಸರ್ಕಾರದಿಂದ ಕರೆದೊಯ್ಯುವ ತೀರ್ಥಯಾತ್ರೆಗೆ ಎಲ್ಲರೊಂದಿಗೆ ತೆರಳಿದ್ದ ಪಂಜಾಬ್‌ನ ವೃದ್ಧ ಯಾತ್ರಿಕರೊಬ್ಬರು ದಾರಿ ತಪ್ಪಿ ಸುಮಾರು 1,200 ಕಿ.ಮೀ.ಗಿಂತ ಅಧಿಕ ದೂರ ತೆರಳಿದ್ದರು. ಅವರು ಮನೆಗೆ ಹಿಂದಿರುಗಲು ಒಂದಷ್ಟು ಸಮಸ್ಯೆ ಎದುರಾಗಿತ್ತು. ಈ ವೇಳೆ ಅವರನ್ನು ಕರೆದುಕೊಂಡು ಬರುವಲ್ಲಿ ವ್ಯಕ್ತಿ ಹಾಗೂ ಚಾಟ್‌ ಜಿಪಿಟಿ ಸಹಾಯವಾಗಿದೆ ಎಂದು ವರದಿ ಆಗಿದೆ. ಅಷ್ಟು ದೂರು ಹೋಗಿ ಮರಳಿ ವೃದ್ಧ ಗೂಡು ಸೇರಿದ್ದೇಗೆ?. ವೃದ್ಧನನ್ನು ಕರೆತಂದ ವ್ಯಕ್ತಿಗೆ ಕುಟುಂಬಸ್ಥರು ನೀಡಿದ ಗೌರವ ವಿಶೇಷವಾಗಿತ್ತು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭರಪೂರ ಶ್ಘಾಘನೆಗೆ ಕಾರಣವಾಗಿದೆ.

ವೃದ್ಧನನ್ನು ಪಂಜಾಬ್‌ ರಾಜ್ಯದ ಲುಧಿಯಾನ ಜಿಲ್ಲೆಯ ಪತ್ತೇಗಢ ಗುಜ್ರನ್ ಗ್ರಾಮದ ಚಮನ್ ಲಾಲ್ ಎಂದು ಗರುತಿಸಲಾಗಿದೆ. ಈ ವೃದ್ಧರು ಸೆಪ್ಟೆಂಬರ್ 11 ರಂದು ಪಂಜಾಬ್ ಸರ್ಕಾರದ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆಯಡಿ ಶ್ರೀ ಹರ್ಮಂದಿರ್ ಸಾಹಿಬ್‌ಗೆ ತೆರಳಲು ಅಮೃತಸರಕ್ಕೆ ಪ್ರಯಾಣ ಬೆಳೆಸಿದ್ದರು.ಈ ವೇಳೆ ಅವರು ಗುಂಪಿನಿಂದ ಬೇರ್ಪಟ್ಟು ಕಾಣೆಯಾಗಿದ್ದರು. ಒಬ್ಬರೇ ರೈಲು ನಿಲ್ದಾಣಕ್ಕೆ ಬಂದಿದ್ದ ಅವರು, ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೇ ರೈಲು ಹತ್ತಿ 1200 ಕಿಲೋ ಮೀಟರ್ ಪ್ರಯಾಣ ಮಾಡಿದ್ದರು. ಬಿಹಾರದ ಗಯಾಕ್ಕೆ ತಲುಪಿದ್ದ ವೃದ್ಧರು ಗುರುತು ಪರಿಚಯ ಇಲ್ಲದೇ ಓಡಾಡುತ್ತಿದ್ದರು, ಬಾಯಾರಿದ್ದರು.

Lost Punjab Elderly Man

ವೃದ್ಧನನ್ನು ಮನೆಗೆ ಕರೆದೊಯ್ದ ನಿರಜ್

ಈ ವೃದ್ಧರನ್ನು ಕಂಡ ವ್ಯಕ್ತಿಯೊಬ್ಬರು ಅವರಿಗೆ ಹಸಿವು ಕಂಡು ಊಟು ನೀಡಿದ್ದರು. ಅವರನ್ನು ಮಾತನಾಡಿದರೆ ತಮ್ಮ ಹೆಸರು ಬಿಟ್ಟು ಬೇರೇನನ್ನು ವೃದ್ಧರು ಹೇಳುತ್ತಿರಲಿಲ್ಲ. ಕಾರಣ ಅವರಿಗೆ ನೆನಪಿನ ಶಕ್ತಿ ಕಡಿಮೆ ಇತ್ತು. ವಯಸ್ಸಾಗಿದ್ದರಿಂದ ಅರಳು ಮರಳು ರೀತಿಯಲ್ಲಿ ಅವರ ವರ್ತನೆ ಇತ್ತು. ತಮ್ಮ ಮನೆ, ವಿಳಾಸ ವಿವರಿಸಲು ಸಾಧ್ಯವಾಗಿರಲಿಲ್ಲ. ಆಗ ಊಟ ನೀಡಿದ್ದ ಗಯಾದ ವ್ಯಕ್ತಿ ನಿರಜ್ ಅವರನ್ನು ತಮ್ಮ ಮನೆಗೆ ಕರೆದೊಯ್ದು ನಾಲ್ಕು ದಿನ ಅಲ್ಲೇ ಇರಿಸಿಕೊಂಡಿದ್ದರು.

ಈ ನಾಲ್ಕು ದಿನವು ಅವರ ವಿಳಾಸ ಪತ್ತೆಗೆ ಸತತ ಪ್ರಯತ್ನ ನಡೆಸಿದ್ದರು. ತಮ್ಮ ಹೆಸರು, ಪತ್ತೇಗಡ್ ಗುಜ್ರನ್ ಬಿಟ್ಟರೇ ಬೇರೆ ಏನನ್ನು ವೃದ್ಧ ಹೇಳುತ್ತಿರಲಿಲ್ಲ. ಕೊನೆಗೆ ವೃದ್ಧರ ಹೆಸರು, ಚಾಟ್‌ ಜಿಪಿಟಿ ಸಹಾಯದಿಂದ ಅಮೃತ್ ಸರದ ವಿಳಾಸ ಪತ್ತೆ ಹಚ್ಚುವಲ್ಲಿ ನಿರಜ್ ಯಶಸ್ವಿಯಾದರು. ಒಬ್ಬಂಟಿಯಾಗಿದ್ದ ನೆನಪಿಶಕ್ತಿ ಸರಿ ಇಲ್ಲದ ವೃದ್ಧನನ್ನು ಒಬ್ಬರನ್ನೆ ಬಿಡಲು ಮನಸ್ಸು ಮಾಡದ ನಿರಜ್ ಅವರು ವೃದ್ಧರ ಗ್ರಾಮಕ್ಕೆ ಅವರನ್ನು ಕರೆದೊಯ್ಯಲು ನೀರ್ಣಯಿಸಿದರು.

ವೃದ್ಧನ ಕೈ ಹಿಡಿದು1,200 ಕಿಮೀ ಪ್ರಯಾಣಿಸಿದ ನಿರಜ್: ಮೆಚ್ಚುಗೆ

ನಿರಜನ್ ಚಮನ್ ಲಾಲ್ ಅವರೊಂದಿಗೆ ಗಯಾದಿಂದ ಲುಧಿಯಾನದವರೆಗೆ ತೆರಳಿದರು. ಅಷ್ಟರಲ್ಲಾಗಲೇ ವೃದ್ಧನಿಗಾಗಿ ಮನೆ ಮಂದಿಯಲ್ಲಿ ಅನೇಕ ಕಡೆಗಳಲ್ಲಿ ಹುಡುಕಿ ಹುಡುಕಿ ಹೈರಾಣಾಗಿದ್ದರು. ಹುಡುಕಾಟ ಮುಗಿದಿರಲಿಲ್ಲ, ಸಾಮಾಜಿಕ ಜಾಲತಾಣದಲ್ಲೂ ಫೋಟೋ ಸಮೇತ ಪ್ರಸಾರ ಮಾಡಿದ್ದರು. ಅವರ ಗ್ರಾಮಕ್ಕೆ ತೆರಳಿದ ಬಳಿಕ ನೀರಜ್ ಸ್ಥಳೀಯ ನಿವಾಸಿಗಳಿಗೆ ಚಮನ್ ಲಾಲ್ ಅವರ ಛಾಯಾಚಿತ್ರ ತೋರಿಸಲು ಪ್ರಾರಂಭಿಸಿದರು. ಯಾರಾದರೂ ಗುರುತಿಸುತ್ತಾರೆಯೇ ಎಂದು ಕಾದು ನೋಡಿದರು.

ಅಷ್ಟೋತ್ತಿಗಾಗಿ ಚಮನ್ ಲಾಲ್ ಅವರ ಕುಟುಂಬಕ್ಕೆ ವೃದ್ಧನ ವಿಚಾರ ತಲುಪಿತ್ತು. ಅವರ ಮೊಮ್ಮಗ ಸುಖಚೈನ್ ಸಿಂಗ್ ಮಚ್ಚಿವಾರಾಗೆ ಧಾವಿಸಿ, ನೀರಜ್ ನನ್ನು ಭೇಟಿ ಮಾಡಿದರು. ದೇಶದಲ್ಲಿ ವ್ಯಕ್ತಿಯೊಬ್ಬರು ಇನ್ನೊಬ್ಬ ಗುರುತು ಪರಿಚಯ ಇಲಲ್ದವರಿಗಾಗಿ 1,200 ಕಿ.ಮೀ.ಗಿಂತ ಹೆಚ್ಚು ದೂರ ನಡೆದದ್ದು ಇದ್ದಿರಲಿಲ್ಲಕ್ಕಿಲಲ್. ತಾತನನ್ನು ಕರೆತಂದದ್ದು ಕಂಡು ಮೊಮ್ಮಗ ಖುಷಿ ಪಟ್ಟರು. ತಾತನನ್ನು ತಬ್ಬಿ ಕಣ್ಣೀರಿಟ್ಟರು.

ನಿರಜ್‌ಗೆ ಭರ್ಜರಿ ಸ್ವಾಗತ ಮೂಲಕ ಕೃತಜ್ಞತೆ ಅರ್ಪಣೆ

ಚಮನ್ ಲಾಲ್ ಅವರ ಅವರನ್ನು ನೋಡಿಕೊಂಡು ಸುರಕ್ಷಿತವಾಗಿ ಮನೆಗೆ ತಲುಪಿದ್ದಕ್ಕಾಗಿ ನೀರಜ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಹೂವು ಹಾರ ಹಾಕಿ ಅಭಿನಂದಿಸಿದರು. ಜೊತೆಗೆ ಒಂದಷ್ಟು ಹಣ, ಬಟ್ಟೆ ಕೊಟ್ಟು ತಮ್ಮ ಪ್ರೀತಿ, ಗೌರವ ತೋರ್ಪಡಿಸಿದರು. ಆಗ ನಿರಜ್ ಅವರು, ವೃದ್ಧರು ಒಬ್ಬರೇ ಇದ್ದದ್ದು ನೋಡಿ ಬಿಟ್ಟು ಹೋಗಲು ಮನಸ್ಸಾಗಲಿಲ್ಲ. ಹೀಗಾಗಿ ಹಳ್ಳಿಗೆ ಕರೆದೊಯ್ದು, ಅವರ ವಿಳಾಸ ಹುಡುಕಲು ಮುಂದಾಗಿದ್ದೆ ಎಂದು ಕುಟುಂಬಸ್ಥರಿಗೆ ತಿಳಿಸಿದರು. ಸದ್ಯ ಇವರ ಮಾನವೀಯ ಕಾರ್ಯ ದೇಶಾದ್ಯಂತ ಶ್ಲಾಘನೆಗೆ ಕಾರಣವಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+