Actress Megha Shetty: ನಟಿ ಮೇಘಾ ಶೆಟ್ಟಿ ಜಿಮ್ ವರ್ಕೌಟ್ ವಿಡಿಯೋ ವೈರಲ್: ದರ್ಶನ್ ಫ್ಯಾನ್ಸ್ ಇಟ್ಟ ಬೇಡಿಕೆ ಏನು?
ಬೆಂಗಳೂರು, ಜುಲೈ 07: ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಬೇಡಿಕೆ ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನಟಿ ಮೇಘಾ ಶೆಟ್ಟಿ (Megha Shetty) ಅವರ ಹೊಸ ವಿಡಿಯೋ ವೈರಲ್ ಆಗಿದೆ. ಜಿಮ್ ನಲ್ಲಿ ಬೆವರಿಳಿಸಿವ, ವೀಕೆಂಡ್‌ನಲ್ಲಿ ಸಖತ್ ಆಕ್ಟಿವ್ ಇರುವ ನಟಿಯ ಜಿಮ್ ವಿಡಿಯೋ ಹರಿದಾಡುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ದರ್ಶನ್ ಅಭಿಮಾನಿಗಳು ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಕನ್ನಡದ ಧಾರವಾಹಿ 'ಜೊತೆ ಜೊತೆಯಲಿ' ಯಲ್ಲಿ ನಟಿಸಿ, ನಂತರ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ 'ಅನು ಸಿರಿಮನೆ' ಪಾತ್ರದಿಂದ ಹೆಚ್ಚು ಜನಪ್ರಿಯತೆ ಪಡೆದ ನಟಿ ಮೇಘಾ ಶೆಟ್ಟಿಯವರು ಫಿಟ್ ನೆಸ್ ಮೆಂಟೈನ್ ಮಾಡುತ್ತಿದ್ದಾರೆ. ತಮ್ಮ ಸೌಂದರ್ಯ, ಹೊಸ ಫೋಟೋಗಳು, ಸಿನಿಮಾಗಳ ಮೂಲಕ ಸದ್ದು ಮಾಡುವ ನಟಿ, ಸಾಮಾಜಿಕ ಜಾತಲಾಣಗಳಲ್ಲಿ ಸಕ್ರಿಯವಾಗಿರುತ್ತಾರೆ.

ಇದೀಗ ಅವರು ವೀಕೆಂಡ್ ಜಿಮ್ ಮೂಡ್‌ನಲ್ಲಿದ್ದಾರೆ. ಜಿಮ್ ನಲ್ಲಿ ಕಸರತ್ತು ಮಾಡುವ ವಿಡಿಯೋ ಅನ್ನು ಹಂಚಿಕೊಂಡು ಒಂದೊಳ್ಳೆ ಸ್ಮೈಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ವಿವಿಧ ರೀತಿಯ ವರ್ಕೌಟ್ ಮಾಡುತ್ತಿರುವ ವಿಡಿಯೋದಲ್ಲಿ ಪಿಂಕ್ ಆಂಡ್ ಬ್ಲಾಕ್ ಶಾರ್ಟ್ ಕಾಂಬಿನೇಷನ್ ಡ್ರೆಸ್‌ನಲ್ಲಿ ಸಖತ್ ಹಾಟಾಗಿ ಕಾಣಿಸಿಕೊಂಡಿದ್ದಾರೆ.
ವಿಡಿಯೋಗೆ ಅಭಿಮಾನಿಗಳು ಫಿದಾ
ಮೇಘಾ ಅವರ ಅಭಿಮಾನಿಗಳು ತಮ್ಮ ನಟಿಯು, ದೇಹವನ್ನು ಹುರಿಗೊಳಿಸುವ ಜಿಮ್ ವರ್ಕೌಟ್ ವಿಡಿಯೋ ನೋಡಿ ಫಿದಾ ಆಗಿದ್ದಾರೆ. ಎಲ್ಲ ಸೆಲೆಬ್ರೆಟಿಗಳಂತೆ ಮೇಘಾ ಶೆಟ್ಟಿ ಸಹ ತಮ್ಮ ಸೌಂದರ್ಯ, ಫಿಟ್ ಆಂಡ್ ಹೆಲ್ತಿ ದೇಹವಾಗಿಟ್ಟುಕೊಳ್ಳಲು ಹೆಚ್ಚು ಆದ್ಯತೆ ನೀಡುತ್ತಾರೆ. ಆಗಾಗ ಸಾಂಪ್ರದಾಯಿಕ ಮತ್ತು ಹಾಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸುತ್ತಾರೆ.
ವಿಶೇಷವೆಂದರೆ ಮೇಘಾ ಶೆಟ್ಟಿಯವರಿಗೆ ನಟ ದರ್ಶನ್ ಅಚ್ಚುಮೆಚ್ಚಿನ ನಟ. ಅಲ್ಲದೇ ಇವರು ಸಹ ಪವಿತ್ರಾ ಗೌಡ ಸ್ನೇಹಿತೆಯರಲ್ಲಿ ಒಬ್ಬರಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅವರು ಬರ್ತಡೇ ಕಾರ್ಯಕ್ರಮದಲ್ಲಿ, ಸಿನಿಮಾ ಪ್ರಿ ಇವೆಂಟ್ ಇನ್ನಿತರ ಕಾರ್ಯಕ್ರಮಗಳಲ್ಲಿ ನಟ ದರ್ಶನ್ ಜೊತೆಗೆ ಕಾಣಿಸಿಕೊಂಡಿದ್ದರು.

ದರ್ಶನ್ ಅಭಿಮಾನಿಗಳ ಬೇಡಿಕೆ ಏನು?
ನಟಿ ಮೇಘಾ ಶೆಟ್ಟಿ ವಿಡಿಯೋಗೆ ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ನೀವು ನಮ್ಮ ಡಿ.ಬಾಸ್ ಕುರಿತು ಪ್ರತಿಕ್ರಿಯಿಸಬೇಕು. ಏನದರೂ ಮಾತನಾಡಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ನಟಿಯಿಂದ ಏನು ಪ್ರತಿಕ್ರಿಯಿ ಬರಲಿದೆ ಎಂದು ಕಾದು ನೋಡಬೇಕಿದೆ.
ಉಳಿದಂತೆ ನಟಿ ಮೇಘಾ ಶೆಟ್ಟಿ ಅಭಿಮಾನಿಗಳು, ಸಖತ್ ಹಾಟ್, ಸೆಕ್ಸಿ, ನೈಸ್ ವರ್ಕೌಟಿಂಗ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಹಾರ್ಟ್, ಬೆಂಕಿ ಎಮೋಜಿಗಳನ್ನು ಎಂದಿನಂತೆ ಹಲವರು ಶೇರ್ ಮಾಡಿಕೊಂಡು ನಟಿಯ ಮೇಲಿನ ಅಭಿಮಾನ ಮೆರೆದಿದ್ದಾರೆ.
ವಿವಿಧ ಸಿನಿಮಾಗಳಲ್ಲಿ ಮೇಘಾ ಬ್ಯೂಸಿ
ಸದ್ಯ ನಟಿ 'ಆಪರೇಷನ್ ಲಂಡನ್ ಕೆಫೆ', 'ಚಿತಾ' ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಈ ಹಿಂದೆ ಇವರು ಕನ್ನಡದ ತ್ರಿಬಲ್ ರೈಡಿಂಗ್, ದಿಲ್ ಪಸಂದ್, ಕೈವ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗದ ಭರವಸೆ ನಟಿಯಾಗಿ ಮಿಂಚುತ್ತಿದ್ದಾರೆ.
ನಟಿ ಮೇಘಾ ಶೆಟ್ಟಿ ಅವರು ಕೆಲವು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದರೂ ಸಹಿತ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತಾರೆ. ಅಭಿಮಾನಿಗಳ ಮುಂದೆ ಬರುತ್ತಾರೆ. ಇದೀಗ ಜಿಮ್ ವರ್ಕೌಟ್ ವಿಡಿಯೋ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರಿಗೆ ದರ್ಶನ್ ಫ್ಯಾನ್ಸ್ ಸೇರಿದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications