ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಸಿಗ್ನಲ್ ಹೀರೋಗಳ ಹೆಸರನ್ನು ನೀವೇ ಸೂಚಿಸಿ

By Ashwath
|
Google Oneindia Kannada News

ಬೆಂಗಳೂರು, ಜೂನ್‌.3: ನಿಮ್ಮ ಏರಿಯಾದ ಟ್ರಾಫಿಕ್‌ ಪೊಲೀಸರ ‌ ಕೆಲಸ ನೋಡಿ ಅವರನ್ನು ಗೌರವಿಸಬೇಕೆಂದು ಅನಿಸುತ್ತಾ? ಹಾಗಾದ್ರೆ ನಿಮಗೆ ಇಲ್ಲೊಂದು ಅವಕಾಶವಿದೆ. ನೀವೆ ನಿಮ್ಮ ನೆಚ್ಚಿನ ಟ್ರಾಫಿಕ್‌ ಪೊಲೀಸರ ಉತ್ತಮ ಕೆಲಸವನ್ನು ಕಂಡು ಅವರ ಹೆಸರನ್ನು ಪ್ರಶಸ್ತಿಗೆ ಸೂಚಿಸಿ ಅವರಿಗೆ ಸನ್ಮಾನ ಸಿಗುವಂತೆ ಮಾಡಬಹುದು.

ದಿ ವರ್ಲ್ಡ್‌ ಪೀಸ್‌ಕೀಪರ್‍ಸ್‌ ಮೂವ್‌‌‌ಮೆಂಟ್‌‌‌ ಹಾಗೂ ಬಿ- ಪ್ಯಾಕ್‌‌‌, ಬೆಂಗಳೂರು ಸಂಚಾರ ಪೊಲೀಸರ ಸಹಯೋಗದೊಂದಿಗೆ 'ಹಾಡಿ ಹೊಗಳದ ಟ್ರಾಫಿಕ್‌‌ ಸಿಗ್ನಲ್‌‌ ಹೀರೋಗಳು' - ಟ್ರಾಫಿಕ್‌ ಪೊಲೀಸರ ಕೆಲಸವನ್ನು ಗುರುತಿಸಿ ಪ್ರೋತ್ಸಾಹಿಸಲು ವಿನೂತನ ಕಾರ್ಯ‌ಕ್ರಮ ಆಯೋಜಿಸಿದೆ.[ಬೆಂಗಳೂರಿನಲ್ಲಿ ಕನ್ನಡ ಗೊತ್ತಿಲ್ಲ ಅನ್ನೋ ಹಾಗಿಲ್ಲ]

ದಿ ವರ್ಲ್ಡ್‌‌‌ ಪೀಸ್‌‌ಕೀಪರ್‍ಸ್‌‌‌ ಮೂವ್‌ಮೆಂಟ್‌‌‌‌ನ ಸಿಇಒ ಹಾಗೂ ಪೀಸ್‌ ಆಟೋ ಯೋಜನೆಯ ರೂವಾರಿ ಅನಿಲ್‌ ಶೆಟ್ಟಿ ಮಾತನಾಡಿ ಟ್ರಾಫಿಕ್‌ ಪೊಲೀಸ್‌ ಪೇದೆಗಳು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ, ಅವರ ಸ್ಪೂರ್ತಿ‌‌ದಾಯಕ ಘಟನೆಗಳನ್ನು ಹಾಡಿ ಹೊಗಳಿ ಪ್ರೋತ್ಸಾಹಿಸುವುದು ಈ ಕಾರ್ಯ‌ಕ್ರಮವನ್ನು ಉದ್ದೇಶ ಎಂದರು.[ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?]

bpac

ಹಾಡಿಹೊಗಳದ ಟ್ರಾಫಿಕ್‌ ಸಿಗ್ನಲ್‌ ಹೀರೋಗಳು 25 ಟ್ರಾಫಿಕ್‌ ಪೊಲೀಸರಿಗೆ ಸಲ್ಲಲಿರುವ ಸಾರ್ವ‌ಜನಿಕ ಗೌರವ ಆಗಿದ್ದು ,ವಿಜೇತರಿಗೆ ಜುಲೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸನ್ಮಾನ ಮಾಡಿ ಗೌರವಿಸಲಾಗುತ್ತದೆ.[ಸಂಚಾರ ನಿಯಮ ಪಾಲಿಸಿ, ಬಹುಮಾನ ಪಡೆಯಿರಿ]

ಟ್ರಾಫಿಕ್‌ ಪೊಲೀಸರ ಹೆಸರನ್ನು ಸಾರ್ವ‌‌‌ಜನಿಕರು ಎಸ್‌ಎಂಎಸ್‌‌,ಇಮೇಲ್‌ ಹಾಗೂ ಫೇಸ್‌‌ಬುಕ್‌ ಮೂಲಕ ಸೂಚಿಸಬಹುದು.

ಹೆಸರನ್ನು ಈ ರೀತಿ ನಾಮನಿರ್ದೇಶನ ಮಾಡಬಹುದು:
ಮೊಬೈಲ್‌‌: 9008598334 ಕಥೆ/ವಿವರನ್ನು ಕಳುಹಿಸಿ ಅಥವಾ ಕರೆ ಮಾಡಿ ತಿಳಿಸಬಹುದು.
ಇಮೇಲ್‌‌ : [email protected]
‌ಫೇಸ್‌‌ಬುಕ್‌ : www.facebook.com/trafficpoliceconstable

English summary
The World Peacekeepers Movement and the Bangalore Political Action Committee (B.PAC) in association with the Bangalore Traffic Police Department unveiled their latest initiative in honor of the many traffic police constables who take service of the people to a whole new level. This initiative is to appreciate and encourage the acts of all those under appreciated traffic police constables who work under very stressful conditions and have gone an extra mile to make Bangalore roads safer for its citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X