ಬೆಂಗಳೂರಿನಲ್ಲಿ ಕನ್ನಡ ಗೊತ್ತಿಲ್ಲ ಅನ್ನೋ ಹಾಗಿಲ್ಲ
ಬೆಂಗಳೂರು, ಮೇ.8 : ಬೆಂಗಳೂರಿನಲ್ಲಿ ಕನ್ನಡದಲ್ಲಿ ಸಂವಹನ ಮಾಡಲು ಕಷ್ಟಪಡುತ್ತಿರುವವರಿಗೆ ಒಂದು ಗುಡ್ ನ್ಯೂಸ್. ಇನ್ನು ಮುಂದೆ ನೀವು ಆಟೋ ಡ್ರೈವರ್, ತರಕಾರಿ ಮಾರುವವರಲ್ಲಿ ಸುಲಭವಾಗಿ ಕನ್ನಡದಲ್ಲೇ ಮಾತನಾಡಬಹುದು!
ಹೌದು. ಸಿಲಿಕಾನ್ ಸಿಟಿ ನಗರಕ್ಕೆ ಉದ್ಯೋಗಕ್ಕಾಗಿ ಹೊರ ರಾಜ್ಯದಿಂದ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊರ ರಾಜ್ಯದವರು ಇನ್ನು ಮುಂದೆ ಕನ್ನಡದಲ್ಲಿ ಸಂವಹನ ಮಾಡಲಾಗಿಲ್ಲ ಎಂದು ಹೇಳುವ ಹಾಗಿಲ್ಲ. ಅನ್ಯಭಾಷಿಕರಿಗಾಗಿ ಪ್ರೀತಿಯಿಂದ ಕನ್ನಡ ಕಲಿಸುವ ವಿನೂತನ ಅಭಿಯಾನವನ್ನು ಸ್ವಯಂ ಸೇವಾ ಸಂಸ್ಥೆಯೊಂದು ಆರಂಭಿಸಲಿದೆ.
World Peacemakers Movement ಸಂಘಟನೆ, ಬಿ ಪ್ಯಾಕ್ ಸಹಯೋಗದೊಂದಿಗೆ ಸಂವಹನ ಸಮಸ್ಯೆ ನಿವಾರಿಸಲು 'ವೆಲ್‌ಕಂ ಟು ಬೆಂಗಳೂರು' ಹೆಸರಿನ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಿದೆ. ನಾಲ್ಕು ಪುಟಗಳ ಈ ಕಿರು ಪುಸ್ತಕದಲ್ಲಿ ಪ್ರತಿ ದಿನ ಸಂವಹನ ನಡೆಸುವ ಕನ್ನಡ ಪದಗಳ ವಾಕ್ಯಗಳು ಇಂಗ್ಲಿಷ್‌ನಲ್ಲಿ ಮುದ್ರಿತವಾಗಿರುತ್ತದೆ.[ಅಪಾರ್ಟ್‌ಮೆಂಟಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸಬೇಕಾ?]

ಅನ್ಯ ಭಾಷಿಕರು ಒಮ್ಮಿದೊಮ್ಮೆಗೆ ಕನ್ನಡ ಕಲಿಯುವುದು ಕಷ್ಟ. ಹಂತ ಹಂತವಾಗಿ ಹತ್ತು ಕನ್ನಡ ಪದಗಳನ್ನುಕಲಿತರೆ ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಸಂವಹನ ಕಷ್ಟವೆನಲ್ಲ. ಈ ನಿಟ್ಟಿನಲ್ಲಿ ಮೇ ಎರಡನೇ ವಾರದಿಂದ ಈ ಅಭಿಯಾನ ಆರಂಭಗೊಳ್ಳಲಿದೆ.[ಮೊಬೈಲಿನಲ್ಲಿ ಸಂಪೂರ್ಣ ಕನ್ನಡ ಬ್ರೌಸರ್ ]
ದಿನ ಬಳಕೆಯಲ್ಲಿ ಹೆಚ್ಚಾಗಿ ಮಾತನಾಡುವ 32 ವಾಕ್ಯಗಳು ಈ ಕೈಪಿಡಿಯಲ್ಲಿದ್ದು, ರಿಕ್ಷಾ ಚಾಲಕರಿಗೆ, ತರಕಾರಿ ಮಾರಾಟ ಮಾಡುವವರಿಗೆ, ಐಟಿ ಕನ್ನಡ ಟೆಕ್ಕಿಗಳಿಗೆ, ಕನ್ನಡ ಬಾರದ ಆನ್ಯಭಾಷೆಯಲ್ಲಿ ಮಾತನಾಡುವ ಟೆಕ್ಕಿಗಳಿಗೆ ಆರಂಭದಲ್ಲಿ ವಿತರಿಸಲಾಗುತ್ತದೆ. [ಕನ್ನಡ ಮಾಧ್ಯಮ: ಫೇಸ್ ಬುಕ್ಕಿನಲ್ಲಿ ಜೋರು ಚರ್ಚೆ]
ಆರಂಭಿಕ ಹಂತದಲ್ಲಿ ಐದು ಸಾವಿರ ಪ್ರತಿಗಳನ್ನು ಮುದ್ರಣ ಮಾಡಲಾಗುವುದು. ಇದರ ಯಶಸ್ಸನ್ನು ನೋಡಿಕೊಂಡು ಹಂತವಾಗಿ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎನ್ನುತ್ತಾರೆ ಪೀಸ್ ಆಟೋ ಸಂಘಟನೆ ರೂವಾರಿ ಅನಿಲ್ ಶೆಟ್ಟಿ.












Click it and Unblock the Notifications