₹80 ಲಕ್ಷದ ಎರಡು ಫ್ಲ್ಯಾಟ್‌ಗಳ ಮಾಲೀಕ; ಆದರೂ ಉಬರ್‌ ಓಡಿಸುತ್ತಿರುವುದೇಕೆ? ಹೃದಯಾಘಾತದ ಬಳಿಕ ಬದಲಾಯ್ತು ಜೀವನ

ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಕೆಲವರು ಎದುರಿಸುವ ರೀತಿಯೇ ಭಿನ್ನ. ಸಾಲು ಸಾಲು ಸಂಕಷ್ಟಗಳನ್ನು ದಾಟಿಕೊಂಡು ಹೊಸ ಜೀವನ ರೂಪಿಸಿಕೊಳ್ಳುವುದು ಸುಲಭದ ಮಾತಲ್ಲ. ದೆಹಲಿ ಮೂಲದ ಹಿರಿಯರೊಬ್ಬರು ಎಲ್ಲವನ್ನೂ ಗಳಿಸಿ, ಕಳೆದುಕೊಂಡು ಮತ್ತೆ ಹೊಸದಾಗಿ ಜೀವನ ಪ್ರಾರಂಭಿಸಿದ್ದಾರೆ. ಹೌದು ದೆಹಲಿ ಮೂಲದ ಹಿರಿಯರೊಬ್ಬರ ಜೀವನದ ಅನುಭವ ಹಾಗೂ ಈಗ ಅವರು ಎದುರಿಸುತ್ತಿರುವ ಸವಾಲಿನ ಬಗ್ಗೆ ಇನ್‌ಸ್ಟಾಗ್ರಾಮ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಕಂಟೆಂಟ್ ಕ್ರಿಯೇಟರ್ ಆಗಿರುವ ಆಸ್ತಾ ಸೇಠ್ ಎನ್ನುವವರು ಈ ಬಗ್ಗೆ ಸೋಶಿಯಲ್ ಮೀಡಿಯಾ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ.

ದೆಹಲಿಯಲ್ಲಿ ನಡೆದ ಸಾಮಾನ್ಯ ಉಬರ್ ಪ್ರಯಾಣವೊಂದು ಇದೀಗ ಪ್ರೇರಣಾದಾಯಕ ಕಥೆಯಾಗಿ ಬದಲಾಗಿದೆ. ಕಂಟೆಂಟ್ ಕ್ರಿಯೇಟರ್‌ ಆಸ್ಥಾ ಸೇಠ್ ಅವರು ಬಿಹಾರದ ಸಮಸ್ತಿಪುರ ಮೂಲದ ಉಬರ್‌ ಚಾಲಕರೊಂದಿಗೆ ನಡೆಸಿದ ಮಾತುಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ನೋಡಿ ಹಲವರು ಪ್ರೇರಣದಾಯಕ ಹಾಗೂ ಸ್ಫೂರ್ತಿದಾಯಕ ಎಂದಿದ್ದಾರೆ.

80

ಇದೀಗ ವೈರಲ್ ಆಗಿರುವ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಆಸ್ತಾ ಸೇಠ್ ಅವರು ದೆಹಲಿಯಲ್ಲಿ ಕಾರು ಚಾಲಕರು ಈ ಹಿಂದೆ ದೆಹಲಿಯಲ್ಲಿರುವ ತಮ್ಮ ಸಂಬಂಧಿಕರ ಕಾರ್ಖಾನೆಯಲ್ಲಿ ಉತ್ತಮ ಸಂಬಳ ಬರುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಕಳೆದ ವರ್ಷ ಅವರಿಗೆ ಹೃದಯಾಘಾತವಾಯಿತು. ಹೃದಯಾಘಾತದ ನಂತರ ಅವರು ದೈಹಿಕ ಶ್ರಮದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ, ಕಾರ್ಖಾನೆಯ ಕೆಲಸದಿಂದ ಅವರನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ಕಾರ್ಖಾನೆಯಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಇರುವುದರಿಂದ ಮತ್ತೊಂದು ಕೆಲಸವನ್ನು ಹುಡುಕುವುದಕ್ಕೆ ಪ್ರಾರಂಭಿಸಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಬಿಹಾರದ ಸಮಷ್ಟಿಪುರದ ಕಾರು ಚಾಲಕನೊಂದಿಗೆ ಮಾತನಾಡಿದ ನಂತರ ದೆಹಲಿಯಲ್ಲಿ ದಿನನಿತ್ಯದ ಉಬರ್ ಸವಾರಿ ಸ್ಪೂರ್ತಿದಾಯಕ ಕಥೆಯಾಗಿ ಮಾರ್ಪಟ್ಟಿತು ಎಂದು ಅವರು ಹೇಳಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ ಹಂಚಿಕೊಂಡಿದ್ದು, ಇದೀಗ ಈ ಪೋಸ್ಟ್‌ ವೈರಲ್ ಆಗಿದೆ. ದೆಹಲಿಯ ಸಂಬಂಧಿಕರ ಕಾರ್ಖಾನೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವರು ಏಕಾಏಕಿ ಸಂಕಷ್ಟಕ್ಕೆ ಸಿಲುಕಿದರು. ಆದಾಗ್ಯೂ, ಕಳೆದ ವರ್ಷ ಹೃದಯಾಘಾತಕ್ಕೊಳಗಾದ ನಂತರ, ಅವರಿಗೆ ಇನ್ನು ಮುಂದೆ ದೈಹಿಕವಾಗಿ ಕಷ್ಟಕರವಾದ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು. ಇದರ ಬೆನ್ನಲ್ಲೇ ಅವರು ಕಾರ್ಖಾನೆಯಿಂದ ಹೊರ ಬಂದು ಇಂತಹ ಸಂಕಷ್ಟದ ಸಮಯದಲ್ಲೂ ಅವರು ಹೊಸ ಕೆಲಸವನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು.

ಆರೋಗ್ಯ ಸಮಸ್ಯೆಯ ನಡುವೆಯೂ ಅವರು ಕೆಲಸ ಮಾಡುವುದರಿಂದ ಹಿಂದೆ ಸರಿಯಲಿಲ್ಲ. ಅವರು ನೋಯ್ಡಾ ಎಲೆಕ್ಟ್ರಾನಿಕ್ ಸಿಟಿ ಬಳಿಯ ವಸತಿ ಸಮಾಜದಲ್ಲಿ ಸುಮಾರು ₹80 ಲಕ್ಷ ಮೌಲ್ಯದ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಅಲ್ಲದೆ ಈ ಫ್ಲಾಟ್‌ಗಳಿಂದ ಅವರಿಗೆ ಮಾಸಿಕ ಬಾಡಿಗೆಯೇ ₹80,000 ಬರುತ್ತಿದೆ. ಬಿಹಾರದಲ್ಲಿ ಪೂರ್ವಜರ ಆಸ್ತಿಯನ್ನು ಸಹ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಬಾಡಿಗೆ ಆದಾಯದೊಂದಿಗೆ, ಅವರು ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಉಬರ್‌ನಲ್ಲಿ ಕಾರು ಓಡಿಸಲು ನಿರ್ಧಾರವನ್ನು ಮಾಡಿದ್ದಾರೆ. ಇದರಿಂದ ತಿಂಗಳಿಗೆ ₹50,000 ಹೆಚ್ಚುವರಿ ಆದಾಯ ಗಳಿಸುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಆಸ್ಥಾ ಸೇಠ್ ಅವರ ಪ್ರಕಾರ, ಹಾರ್ಟ್ ಅಟ್ಯಾಕ್ ಆದ ಮೇಲೆಯೂ ಜೀವನದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ನಾನು ಸಾಬೀತು ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಈ ಕಾರು ಚಾಲಕರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮತ್ತು ಬಾಡಿಗೆ ಆದಾಯದ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗುವ ಬದಲು ತಮ್ಮ ಭವಿಷ್ಯಕ್ಕಾಗಿ ಎರಡು ಫ್ಲಾಟ್‌ಗಳನ್ನು ಸುರಕ್ಷಿತವಾಗಿ ಇರಿಸುವ ಉದ್ದೇಶವನ್ನು ಹೊಂದಿರುವುದಾಗಿ ಹೇಳಿದ್ದಾರೆ. ಕೇವಲ ಐದು ನಿಮಿಷ ಮಾತನಾಡಿದರೂ ಅವರ ಮಾತು ನನ್ನ ಮನಸ್ಸಿನಲ್ಲಿ ಉಳಿಯಿತು ಎಂದು ಆಸ್ಥಾ ಸೇಠ್ ಹೇಳಿದ್ದಾರೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅವರು ತುಂಬಾ ಶಾಂತವಾಗಿ ತಮ್ಮ ಕಥೆಯನ್ನು ಹೇಳಿಕೊಂಡರು. ಎಲ್ಲ ಕಷ್ಟಗಳ ನಡುವೆಯೂ ಅವರು ನಗುತ್ತಲೇ ಇದ್ದರು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+