ಇನ್ನು ಮೂರು ದಿನಗಳಲ್ಲಿ ಬೆಳಗುವುದು ಈ ರಾಶಿಯವರ ಅದೃಷ್ಟ : ವೃತ್ತಿಯಲ್ಲಿ ಬಡ್ತಿ ಭಾಗ್ಯ, ಮನೆ ನಿರ್ಮಾಣದ ಯೋಗ
ಜ್ಯೋತಿಷ್ಯದ ಪ್ರಕಾರ, ನಿರ್ದಿಷ್ಟ ಸಮಯಕ್ಕೆ ಅನುಗುಣವಾಗಿ ಗ್ರಹಗಳು ರಾಶಿಗಳನ್ನು ಬದಲಾಯಿಸುತ್ತದೆ. ಹಾಗೆಯೇ ನಿರ್ದಿಷ್ಟ ಮಧ್ಯಂತರಗಳಲ್ಲಿ ನಕ್ಷತ್ರಗಳನ್ನು ಕೂಡಾ ಬದಲಾಯಿಸುತ್ತದೆ. ಅಂದರೆ ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಸಂಚಾರ ಬೆಳೆಸುತ್ತದೆ. ಗ್ರಹಗಳ ಈ ರಾಶಿ ಮತ್ತು ನಕ್ಷತ್ರ ಬದಲಾವಣೆಗಳು ಪ್ರತಿಯೊಂದು ರಾಶಿಯವರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ.
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮಂಗಳ ಗ್ರಹವು ಜುಲೈ 24, 2026 ರಂದು ಮೃಗಶಿರ ನಕ್ಷತ್ರವನ್ನು ಪ್ರವೇಶಿಸುತ್ತದೆ. ಮೃಗಶಿರ ಮಂಗಳ ಗ್ರಹಕ್ಕೆ ವಿಶೇಷ ಪ್ರಾಮುಖ್ಯತೆಯ ನಕ್ಷತ್ರವೆಂದು ಪರಿಗಣಿಸಲಾಗಿದೆ. ಇದರಿಂದಾಗಿ, ಈ ಸಂಚಾರ ಹೆಚ್ಚು ಪರಿಣಾಮಕಾರಿಯಾಗಿರುವುದು.

ಜ್ಯೋತಿಷಿಗಳ ಪ್ರಕಾರ, ಗ್ರಹಗಳ ನಕ್ಷತ್ರಗಳ ಪರಿವರ್ತನೆ ಕೆಲವು ರಾಶಿಯವರಿಗೆ ಉದ್ಯೋಗಗಳಲ್ಲಿ ಪ್ರಗತಿ, ಆರ್ಥಿಕ ಲಾಭ, ವ್ಯವಹಾರದಲ್ಲಿ ಯಶಸ್ಸು ತಂದು ಕೊಡುವುದು. ಮಾತ್ರವಲ್ಲ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವ ಸಾಧ್ಯತೆಗಳನ್ನು ಹೆಚ್ಚು ಮಾಡುವುದು. ಮಂಗಳನ ನಕ್ಷತ್ರ ಸಂಕ್ರಮಣ ನಾಲ್ಕು ರಾಶಿಯವರಿಗೆ ವಿಶೇಷವಾಗಿ ಅನುಕೂಲಕರವಾಗಿರಲಿದೆ.
ಮಂಗಳನಿಂದ ಅದೃಷ್ಟ ಪಡೆಯುವ ರಾಶಿಗಳು
ಮೇಷ ರಾಶಿ (Aries): ಮಂಗಳನ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ತರುವ ಸಾಧ್ಯತೆಯಿದೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಉದ್ಭವಿಸಬಹುದು. ಉದ್ಯೋಗಿಗಳಿಗೆ ಬಡ್ತಿ ಅಥವಾ ವೇತನ ಹೆಚ್ಚಾಗಬಹುದು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದ ಸಂದರ್ಭಗಳು ಎದುರಾಗಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದರ ಜೊತೆಗೆ ಹಣ ಉಳಿತಾಯಕ್ಕೂ ಅವಕಾಶವಿರುವುದು. ಅದೃಷ್ಟ ಜೊತೆಗಿರುವುದು. ಈ ಮೂಲಕ ದೀರ್ಘಕಾಲದಿಂದ ಪೂರೈಸಲು ಸಾಧ್ಯವಾಗದೇ ಇರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ.
ಸಿಂಹ (Leo): ಮಂಗಳನ ನಕ್ಷತ್ರ ಸಂಕ್ರಮಣದಿಂದ ಹೆಚ್ಚಿನ ಲಾಭ ಪಡೆಯುವ ರಾಶಿಗಳಲ್ಲಿ ಸಿಂಹವೂ ಒಂದು. ಮಂಗಳ ಗ್ರಹದ ಅನುಕೂಲಕರ ಪ್ರಭಾವದಿಂದ, ಅದೃಷ್ಟವು ನಿಮ್ಮ ಕಡೆ ಇರುವ ಸಾಧ್ಯತೆಯಿದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದು. ಉದ್ಯೋಗಗಳನ್ನು ಬದಲಾಯಿಸಲು ಬಯಸುವವರಿಗೆ ಹೊಸ ಅವಕಾಶಗಳು ಸಿಗಬಹುದು. ಆದಾಯ ಹೆಚ್ಚಾಗುವ ಮೂಲಕ ಆರ್ಥಿಕ ಸ್ಥಿರತೆ ಸುಧಾರಿಸುತ್ತದೆ. ಕುಟುಂಬ ಸದಸ್ಯರ ಬೆಂಬಲದ ಜೊತೆಗೆ, ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗುವ ಸಾಧ್ಯತೆಯಿದೆ. ಮನೆ ನಿರ್ಮಾಣದ ಯೋಗವೂ ಕೂಡಿ ಬರುವುದು. ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು.
ಧನು ರಾಶಿ (Sagitarius) : ನಕ್ಷತ್ರಪುಂಜದಲ್ಲಿನ ಈ ಬದಲಾವಣೆಯು ಧನು ರಾಶಿಯವರಿಗೆ ಆಧ್ಯಾತ್ಮಿಕ ಜೀವನದ ಮೇಲೂ ಸಕಾರಾತ್ಮಕ ಪರಿಣಾಮ ಬೀರಬಹುದು. ದೇವಾಲಯಕ್ಕೆ ಭೇಟಿ, ಪೂಜಾ ಕಾರ್ಯಕ್ರಮ ಮತ್ತು ಧಾರ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಾಗುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ದೇವಾಲಯಗಳಿಗೆ ಭೇಟಿ ನೀಡುವ ಯೋಗ ಕೂಡಿ ಬರಬಹುದು. ದೀರ್ಘಕಾಲದವರೆಗೆ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳಿಂದ ಪರಿಹಾರ ಪಡೆಯುವ ಸಾಧ್ಯತೆಗಳಿವೆ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗುವ ಸೂಚನೆಗಳಿವೆ. ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿಗಳಿಗೆ ಒಳ್ಳೆಯ ಸುದ್ದಿ ಸಿಗುವುದು.
ಮಕರ ರಾಶಿ (Capricorn): ಈ ಸಂಚಾರವು ಮಕರ ರಾಶಿಯವರಿಗೆ ಶುಭಕರವಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯಗಳು ಕಡಿಮೆಯಾಗಬಹುದು. ಸಂಬಂಧಗಳಲ್ಲಿ ಸುಧಾರಣೆಯಾಗುವುದು. ಸಾಮಾಜಿಕ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಯಿದೆ. ಉದ್ಯೋಗ ಸಂದರ್ಶನಗಳು, ಸ್ಪರ್ಧಾತ್ಮಕ ಪರೀಕ್ಷೆಗಳು ಅಥವಾ ಹೊಸ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರ ಫಲಿತಾಂಶಗಳು ಸಿಗುವ ಸೂಚನೆಗಳಿವೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸಿನ ಸಿಗುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯೂ ಇದೆ.
ಮಂಗಳ ಗ್ರಹವನ್ನು ಧೈರ್ಯ, ಶಕ್ತಿ ಮತ್ತು ಸಾಧನೆಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ವಿಶ್ವಾಸದಿಂದ ಮುಂದಕ್ಕೆ ಸಾಗಿದರೆ, ಉತ್ತಮ ಫಲಿತಾಂಶಗಳು ಸಿಗುವ ಸಾಧ್ಯತೆಯಿದೆ ಎನ್ನುವುದು ಜ್ಯೋತಿಷ್ಯ ತಜ್ಞರ ಅಭಿಪ್ರಾಯ. ಆದರೆ ವೈಯಕ್ತಿಕ ಜಾತಕದಲ್ಲಿನ ಗ್ರಹಗಳ ಸ್ಥಾನಗಳು, ಹಂತಗಳು ಮತ್ತು ಸಂಚಾರಗಳು ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದು ಕೂಡಾ ನೆನಪಿರಲಿ.


Click it and Unblock the Notifications
