ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?

By Ashwath
|
Google Oneindia Kannada News

ಬೆಂಗಳೂರು, ಮೇ.14: ಟ್ರಾಫಿಕ್‌ ಪೊಲೀಸರು ನಮ್ಮವರೇ ಎಂದು ನಾವೆಷ್ಟು ಅವರ ಬಗ್ಗೆ ಹೊಗಳಿದರೂ ಜನರಿಗೆ ಅವರೆಂದರೆ ಅದ್ಯಾಕೋ ತಿರಸ್ಕಾರ, ವಕ್ರ ದೃಷ್ಟಿಯಿಂದ ನೋಡುತ್ತಿರುತ್ತಾರೆ. ಐದು ನಿಮಿಷ ಸಿಗ್ನಲ್‌ನಲ್ಲಿ ವಾಹನ ನಿಂತರೇ ಸಾಕು ಟ್ರಾಫಿಕ್‌ ಪೊಲೀಸರಿಗೆ ಜನ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿರುತ್ತಾರೆ.

ನಿಜವಾಗಿಯೂ ಟ್ರಾಫಿಕ್‌ ಪೊಲೀಸರ ಸಮಸ್ಯೆ ಏನು ಎಂಬುದು ವಾಹನಗಳಲ್ಲಿ ಪ್ರಯಾಣಿಸುವ ನಮಗೆ ಗೊತ್ತೆ ಇರುವುದಿಲ್ಲ. ಪ್ರತಿದಿನ ವಾಹನಗಳ ಹೊಗೆ ಮತ್ತು ದೂಳು ಸೇವಿಸಿ ವಾಹನಗಳ ಹೊಗೆ ಮತ್ತು ದೂಳು ಸೇವಿಸಿ ಸಂಚಾರ ಪೊಲೀಸರ ಆರೋಗ್ಯ ಹದಗೆಡುತ್ತಿದೆ.[ಈ ಟ್ರಾಫಿಕ್‌ ಪೊಲೀಸ್‌ ಅಂದ್ರೆ ಜನರಿಗೆ ಅಚ್ಚುಮೆಚ್ಚು]

ಟ್ರಾಫಿಕ್‌ ಪೊಲೀಸರ ಆರೋಗ್ಯ ಹದಗೆಡುತ್ತಿರುವ ಹಿನ್ನಲೆಯಲ್ಲಿ ಪೊಲೀಸ್‌ ಇಲಾಖೆ ಮನವಿಯ ಮೇರೆಗೆ ನ್ಯಾಷನಲ್‌ ರೆಫರಲ್‌ ಸೆಂಟರ್‌ ಫಾರ್‌‌ ಲೆಡ್‌‌ ಪ್ರೊಜೆಕ್ಟ್‌‌‌ ಇನ್‌‌‌ ಇಂಡಿಯಾ ಸಂಸ್ಥೆ ಟ್ರಾಫಿಕ್‌ ಪೊಲೀಸರ ಬಗ್ಗೆ ಜೂನ್‌ ತಿಂಗಳಿನಿಂದ ಅಧ್ಯಯನ ನಡೆಸಲಿದೆ.[ಮಾನವೀಯತೆ ಮೆರೆದ ದೊಡೇಜಾಗೆ ಅಭಿನಂದನೆ]

ಈ ಮಧ್ಯೆ ಒನ್‌ಇಂಡಿಯಾ ಕನ್ನಡ ಕೆಲವು ಟ್ರಾಫಿಕ್‌ ಪೊಲೀಸರನ್ನು ಮಾತನಾಡಿಸಿದೆ. ಅವರ ಸಮಸ್ಯೆಗಳು, ಕೆಲಸದ ಒತ್ತಡ, ವಾಹನ ದಟ್ಟನೆ ಸಮಸ್ಯೆಗೆ ನಿವಾರಣೆಗೆ ಅವರ ಪರಿಹಾರ, ಇತ್ಯಾದಿ ವಿಚಾರಗಳನ್ನು ಟ್ರಾಫಿಕ್‌‌ ಪೊಲೀಸರು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅವರ ಅಭಿಪ್ರಾಯಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

 ಮಂಡಿ ನೋವು:

ಮಂಡಿ ನೋವು:

ಬಹಳಷ್ಟು ಟ್ರಾಫಿಕ್‌ ಪೊಲೀಸರಿಗೆ ಮಂಡಿ ನೋವು ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ನಿರಂತರವಾಗಿ ಎರಡು ಮೂರು ಗಂಟೆ ನಿಂತರೇ ಸಾಕು ಕಾಲುಗಳು ಉದಿಕೊಳ್ಳುತ್ತಿದೆ. ಕೆಲಸದ ಮಧ್ಯೆ ಕುಳಿತುಕೊಳ್ಳಬಹುದಾದರೂ ಸಿಸಿಟಿವಿಯಲ್ಲಿ ಸೆರೆಯಾಗುತ್ತಿರುತ್ತದೆ. ಹಾಗಾಗಿ ನೋವು ಆದರೂ ಸಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.

 ಮಾಸ್ಕ್‌ ಹಾಕಿದ್ರೂ ಆರೋಗ್ಯ ಕೆಡುತ್ತಿದೆ:

ಮಾಸ್ಕ್‌ ಹಾಕಿದ್ರೂ ಆರೋಗ್ಯ ಕೆಡುತ್ತಿದೆ:

ಇಲಾಖೆ ದೂಳು ಮತ್ತು ಹೊಗೆಯಿಂದ ರಕ್ಷಿಸಿಕೊಳ್ಳಲು ಮಾಸ್ಕ್‌ ನೀಡುತ್ತಿದೆ. ಆದರೆ ಮಾಸ್ಕ್‌ ಹಾಕಿದ್ದರೂ ಶ್ವಾಸಕೋಶದ ತೊಂದರೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಒನ್‌ ಇಂಡಿಯಾದ ಜೊತೆ ಮಾತನಾಡಿದ ಪೊಲೀಸರಲ್ಲಿ ಹಲವು ಮಂದಿ ಶ್ವಾಸಕೋಶ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ.

 ವಾಹನಗಳ ಶಬ್ಧ ಕೇಳಿ ಕಿವಿಗೆ ಅಪಾಯ:

ವಾಹನಗಳ ಶಬ್ಧ ಕೇಳಿ ಕಿವಿಗೆ ಅಪಾಯ:

ಪ್ರತಿ ದಿನ ವಾಹನಗಳ ಶಬ್ಧಗಳನ್ನು ಕೇಳಿ ಕೇಳಿ ಮನೆಗೆ ಹೋಗಿ, ಮನೆಯವರು ಮೆಲ್ಲನೆ ಮಾತನಾಡಿದರೆ ಏನು ಹೇಳಿದ್ದಾರೆ ಎಂಬುದೇ ಗೊತ್ತಾಗುದಿಲ್ಲವಂತೆ. ಈ ಸಮಸ್ಯೆಯೂ ಹಲವರಲ್ಲಿದೆ.

 ದೂಳಿನಿಂದ ಕಣ್ಣಿಗೆ ಹಾನಿ :

ದೂಳಿನಿಂದ ಕಣ್ಣಿಗೆ ಹಾನಿ :

ನಗರದ ಕೆಲವೇ ಕೆಲ ಏರಿಯಾಗಳಲ್ಲಿ ರಸ್ತೆ ಚೆನ್ನಾಗಿದೆ. ಉಳಿದಂತೆ ರಸ್ತೆಯಲ್ಲೇ ದೊಡ್ಡ ದೊಡ್ಡ ಗುಂಡಿಗಳು ಕಾಣಿಸುತ್ತಿದೆ. ಗುಂಡಿ ಮುಚ್ಚಬಹುದಾದರೂ ರಸ್ತೆ ಬದಿಯಲ್ಲಿ ಸರಿಯಾಗಿ ಡಾಂಬರ್‌ ಹಾಕುವುದಿಲ್ಲ. ಆ ಬದಿಯ ದೂಳುಗಳನ್ನು ನಾವು ಸೇವಿಸುವುದರ ಜೊತೆಗೆ ಕಣ್ಣಿಗೆ ಹೋಗುತ್ತದೆ. ಇದರಿಂದಾಗಿ ನಮ್ಮ ಕೆಲ ಸಿಬ್ಬಂದಿಗಳಿಗೆ ಕಣ್ಣಿನ ದೋಷ ಬಂದಿದೆ ಅಂತಾರೆ ಕೆಲ ಪೊಲೀಸರು.

 ದಿನದಲ್ಲಿ ಎಂಟು ಗಂಟೆ ಕೆಲಸ

ದಿನದಲ್ಲಿ ಎಂಟು ಗಂಟೆ ಕೆಲಸ

ದಿನದಲ್ಲಿ ಎಂಟು ಗಂಟೆ ದುಡಿಯುತ್ತೇವೆ. ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗುತ್ತದೆ.

ಟ್ರಾಫಿಕ್‌ ಸಿಗ್ನಲ್‌ ಕೈ ಕೊಟ್ಟರೆ ಕೆಲಸ ಕಷ್ಟ:

ಟ್ರಾಫಿಕ್‌ ಸಿಗ್ನಲ್‌ ಕೈ ಕೊಟ್ಟರೆ ಕೆಲಸ ಕಷ್ಟ:

ಟ್ರಾಫಿಕ್‌ ಸಿಗ್ನಲ್‌ ದೀಪ ಇದ್ದರೂ ಸವಾರರು ನಿಯಮ ಪಾಲಿಸುವುದಿಲ್ಲ. ಇನ್ನು ಸಿಗ್ನಲ್‌ ದೀಪ ಕೈ ಕೊಟ್ಟರೆ ರಸ್ತೆಯ ಮಧ್ಯದಲ್ಲೇ ನಿಂತು ನಿಯಂತ್ರಣ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಬೈಕಿನಲ್ಲಿ ವೇಗವಾಗಿ ಬರುವುದನ್ನು ನೋಡಿ ನಮಗೆ ಹೆದರಿಕೆಯಾಗುತ್ತದೆ.

 ಹೆಚ್ಚಿನ ದಂಡ ಹಾಕಬೇಕು:

ಹೆಚ್ಚಿನ ದಂಡ ಹಾಕಬೇಕು:

ಟ್ರಾಫಿಕ್‌ ನಿಯಮ ಉಲ್ಲಂಘಿಸುವುದರಲ್ಲಿ ಹೆಚ್ಚಿನವರು ವಿದ್ಯಾರ್ಥಿ‌ಗಳು. ಅವರಿಗೆ ಹಣದ ಬೆಲೆ ಗೊತ್ತಿಲ್ಲ.ಹೀಗಾಗಿ ದಂಡದ ಪ್ರಮಾಣ ಹೆಚ್ಚಿಸಬೇಕೆಂದು ಕೆಲವರು ಸಲಹೆ ನೀಡಿದ್ದಾರೆ.

 ನಿಯಮ ಪಾಲಿಸುವುದಿಲ್ಲ:

ನಿಯಮ ಪಾಲಿಸುವುದಿಲ್ಲ:


ಹೆಲ್ಮೆಟ್‌ ಹಾಕಿ, ಸೀಟ್‌ ಬೆಲ್ಟ್‌ ಹಾಕಿ ಎಂದು ಇಲಾಖೆ ಹೇಳುತ್ತಿದ್ದರೂ ಜನಗಳಿಗೆ ಕ್ಯಾರೇ ಇಲ್ಲ. ಈಗ ಸ್ಮಾರ್ಟ್‌ಫೋನ್‌ಲ್ಲಿ ಮಾತನಾಡಿಕೊಂಡು ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

 ಐವತ್ತು ಲಕ್ಷ ದಾಟಿದೆ ವಾಹನಗಳ ಸಂಖ್ಯೆ

ಐವತ್ತು ಲಕ್ಷ ದಾಟಿದೆ ವಾಹನಗಳ ಸಂಖ್ಯೆ

ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನ ವಾಹನಗಳ ಸಂಖ್ಯೆ ಐವತ್ತು ಲಕ್ಷ ದಾಟಿದೆ.
ದ್ವಿಚಕ್ರ ವಾಹನಗಳು- 35 ಲಕ್ಷ
ಕಾರು - 12 ಲಕ್ಷ
ಆಟೊ - 1.4 ಲಕ್ಷ
ಬಸ್ಸು/ ಮಿನಿ ಬಸ್ಸು- 1.6 ಲಕ್ಷ
ಲಾರಿ/ ಇತರೆ ವಾಹನ- 1 ಲಕ್ಷ

 ಒಂದು ಕುಟುಂಬಕ್ಕೆ ಒಂದು ವಾಹನ:

ಒಂದು ಕುಟುಂಬಕ್ಕೆ ಒಂದು ವಾಹನ:

ಪ್ರತಿದಿನ 30 ಲಕ್ಷಕ್ಕೂ ಅಧಿಕ ವಾಹನಗಳು ಬೆಂಗಳೂರಿನ ರಸ್ತೆಯಲ್ಲಿ ಓಡುತ್ತವೆ. ಒಂದು ಕುಟುಂಬದವರಿಗೆ ಒಂದೇ ವಾಹನ ಎಂದು ಕಡ್ಡಾಯ ಮಾಡಿದರೆ ಬೆಂಗಳೂರಿನ ಮಾಲಿನ್ಯನದ ಜೊತೆಗೆ ಸಂಚಾರ ದಟ್ಟನೆಯೂ ಕಡಿಮೆಯಾಗಬಹುದು. ಇಲ್ಲದಿದ್ದಲ್ಲಿ ಮುಂದಿನ ಐದು ವರ್ಷದಲ್ಲಿ ಒಂದು ಕಿ.ಮೀ ಹೋಗಬೇಕಿದ್ದಲ್ಲಿ ಅರ್ಧ‌ಗಂಟೆ ತಗಲಿದರೂ ಸಂದೇಹವಿಲ್ಲ ಎಂದು ಹೇಳುತ್ತಾರೆ ಟ್ರಾಫಿಕ್‌ ಪೊಲೀಸರು.

English summary
Bangalore Traffic police suffering from health problem- Traffic Police personnel are suffering from lung-related disorders like pneumonia and bronchitis because of severe air pollution, hearing impairment due to high-level of noise pollution, some traffic cops are complaining about eye-related problems due to dust particles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X