ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಟ್ರಾಫಿಕ್‌ ಪೊಲೀಸ್‌ ಅಂದ್ರೆ ಜನರಿಗೆ ಅಚ್ಚುಮೆಚ್ಚು

By Ashwath
|
Google Oneindia Kannada News

ಬೆಂಗಳೂರು, ಮೇ 2: ಟ್ರಾಫಿಕ್‌ ಪೊಲೀಸರು ಅಂದ್ರೆ ಸಾಕು ಅದೇನೋ ನಮ್ಮ ಸಮಾಜದಲ್ಲಿ ಅವರ ಮೇಲೆ ಒಂದು ವಕ್ರ ದೃಷ್ಠಿ. ದಂಡ ಹಾಕುವವರು, ಲೈಸೆನ್ಸ್ ಕ್ಯಾನ್ಸಲ್‌ ಮಾಡುವವರು, ಏನೇನೋ ದಾಖಲೆಗಳನ್ನು ಪರಿಶೀಲಿಸುವವರು.. ಎಂಬ ಹಣೆಪಟ್ಟಿಯನ್ನು ನೀಡುವ ಮಂದಿಗಳೆ ಹೆಚ್ಚು.

ಆದರೆ ಇಲ್ಲೊಬ್ಬರು ಟ್ರಾಫಿಕ್‌ ಪೊಲೀಸ್‌ ಇದ್ದಾರೆ. ಇವರು ಮೇಲೆ ತಿಳಿಸಿದ ವರ್ಗ‌ಕ್ಕಿಂತ ಹೊರತಾಗಿರುವ ಟ್ರಾಫಿಕ್‌ ಪೊಲೀಸ್‌‌. ಇವರು ಕಾರ್ಯ‌‌ನಿರ್ವ‌ಹಿಸಿದ್ರೆ ಸಾಕು ಜನರಿಗೆ ಅದೇನು ಅಚ್ಚುಮೆಚ್ಚು ಗೊತ್ತಿಲ್ಲಪ್ಪ. ಆ ಏರಿಯಾದ ಪರಿಚಯದ ಜನ ಇವರನ್ನು ಕಂಡರೆ ಸಾಕು 'ಹಾಯ್‌' ಎಂದು ಹೇಳಿ ಹೋಗುವವರೇ ಹೆಚ್ಚು.[ಸಂಚಾರ ನಿಯಮ ಪಾಲಿಸಿ, ಬಹುಮಾನ ಪಡೆಯಿರಿ]

ಈ ರೀತಿ ಸಾರ್ವ‌ಜನಿಕರಿಂದ ಶ್ಲಾಘನೆಗೆ ಒಳಗಾಗಿರುವ ಟ್ರಾಫಿಕ್‌ ಪೊಲೀಸ್‌ ಹೆಸರು ಭಾಸ್ಕರ್‌‌. 25 ವರ್ಷದ ಭಾಸ್ಕರ್‌ ಮೂಲತಃ ಮೈಸೂರಿನವರು. ಕಳೆದ ಐದು ವರ್ಷ‌ಗಳಿಂದ ಟ್ರಾಫಿಕ್‌ ಪೊಲೀಸ್‌ ಆಗಿ ಕೆಲಸ ಮಾಡುತ್ತಿರುವ ಇವರು ವಾರದ ಏಳು ದಿನ, ದಿನಂಪ್ರತಿ12 ಗಂಟೆಗಳ ಕಾಲ ಟ್ರಾಫಿಕ್‌ ಪೊಲೀಸ್‌ ಆಗಿ ಕಾರ್ಯ‌‌ನಿರ್ವ‌‌‌‌‌ಹಿಸುತ್ತಿದ್ದಾರೆ.

Bhaskar Bangalore Traffic Police

ಮೂರು ವರ್ಷ‌ಗಳ ಕಾಲ ಸಿವಿ ರಾಮನ್ ನಗರದ ಸುರಂಜನ್ ದಾಸ್ ರಸ್ತೆಯಲ್ಲಿ ಕಾರ್ಯ‌ನಿರ್ವ‌ಹಿಸಿದ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾ‌ವಣೆ ಮಾಡಿದ ವಿಚಾರ ತಿಳಿದ ಕೂಡಲೇ ಅಲ್ಲಿನ ಸ್ಥಳೀಯ ನಿವಾಸಿಗಳು ಭಾಸ್ಕರ್‌ ಅವರು ನಮ್ಮ ಏರಿಯಾದಲ್ಲೇ ಇರಬೇಕು. ಅವರನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ವರ್ಗಾ‌ವಣೆ ಮಾಡಬಾರದು ಎಂದು ಟ್ರಾಫಿಕ್‌ ಪೊಲೀಸ್‌ ಇಲಾಖೆಗೆ ಇ ಮೇಲ್‌ ಮೂಲಕ ಮನವಿ ಮಾಡಿದ್ದರಂತೆ. ಸ್ಥಳೀಯರ ವಿನಂತಿಗೆ ಸ್ಪಂದಿಸಿ ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಭಾಸ್ಕರ್‌ ಅವರನ್ನು ಮತ್ತೇ ಪುನಃ ಸುರಂಜನ್ ದಾಸ್ ರಸ್ತೆಯಲ್ಲಿ ನಿಯೋಜಿಸಿದ್ದು ಇವರ ಜನಪ್ರಿಯತೆಗೆ ಸಾಕ್ಷಿ. [ಮೇ.4 ಆರ್ ಸಿಬಿ ಮ್ಯಾಚ್, ವಾಹನ ನಿಲುಗಡೆ ಎಲ್ಲೆಲ್ಲಿ?]

ಉತ್ತಮ ಕೆಲಸ ಮಾಡಿ ಜನರ ಮೆಚ್ಚುಗೆ ಪಾತ್ರವಾಗುವ ಸರ್ಕಾರಿ ಅಧಿಕಾರಿಗಳ ಸಂಖ್ಯೆ ಬಹಳ ಕಡಿಮೆ. ಆದರಲ್ಲೂ ಟ್ರಾಫಿಕ್‌ ಪೊಲೀಸರ ಸಂಖ್ಯೆ ಅತಿ ವಿರಳ. ಅಂತಹುದರಲ್ಲಿ ಜನರ ಮೆಚ್ಚುಗೆ ಭಾಸ್ಕರ್‌ ಪಾತ್ರವಾಗಿದ್ದಾರೆ ಅಂದರೆ ನಿಜಕ್ಕೂ ಗ್ರೇಟ್‌‌.

ಈ ರೀತಿ ಅಭಿಮಾನಿಗಳನ್ನು ಪಡೆಯಲು ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ರೆ ಭಾಸ್ಕರ್‌ '' ನಾನೇನು ವಿಶೇಷ ಕೆಲಸ ಮಾಡುತ್ತಿಲ್ಲ. ನನ್ನ ಕೆಲಸವನ್ನು ಸರಿಯಾಗಿ ಮಾಡುತ್ತೇನೆ. ನಾನು ಸವಾರರ ತಪ್ಪನ್ನು ಗುರುತಿಸುತ್ತಿದ್ದರೂ ನನ್ನನ್ನು ದೇವರು ನೋಡುತ್ತಿರುತ್ತಾನೆ. ನಾನು ಸರಿಯಾಗಿ ಕೆಲಸ ಮಾಡದಿದ್ದರೆ, ದೇವರಿಗೆ ಉತ್ತರ ಹೇಳುವವರು ಯಾರು? ಮನಪೂರ್ವ‌ಕವಾಗಿ ನಮ್ಮ ಕೆಲಸವನ್ನು ಮಾಡಿದ್ದರೆ ಆ ಕೆಲಸ ಎಲ್ಲರಿಗೂ ಇಷ್ಟವಾಗುತ್ತದೆ ಅಷ್ಟೇ " ಎಂದು ಮುಗುಳ್ನಗುತ್ತಾ ಉತ್ತರಿಸುತ್ತಾರೆ.

ಹೇಳಿದ ಹಾಗೇ ಇದು ಒನ್‌ ಇಂಡಿಯಾದ ಸುದ್ದಿಯಲ್ಲ. ಬದಲಾಗಿ lmllittlemorelove ಬ್ಲಾಗ್‌ನಲ್ಲಿ ಬಂದಿರುವ ಸುದ್ದಿ. ಈ ಬ್ಲಾಗ್‌ನವರು ನಮ್ಮ ಸುತ್ತಮುತ್ತಲಿರುವ ವಿಶೇಷ ವ್ಯಕ್ತಿಯನ್ನು ಗುರುತಿಸಿ ಅವರನ್ನು ಗೌರವಿಸಲು ಮುಂದಾಗುತ್ತಿದ್ದು, ಅವರ ಮೊದಲ ಅಪರಿಚಿತ ವಿಶೇಷ ವ್ಯಕ್ತಿಯಾಗಿ ಭಾಸ್ಕರ್‌ ಆಯ್ಕೆಯಾಗಿದ್ದಾರೆ. ಟ್ರಾಫಿಕ್‌ ಪೊಲೀಸ್‌ ಆಗಿ ಕಾರ್ಯ‌ನಿರ್ವ‌ಹಿಸುತ್ತಿರುವ ವ್ಯಕ್ತಿಯನ್ನು ಸಮಾಜಕ್ಕೆ ಪರಿಚಯಿಸಿ ಸಿಟಿಜನ್‌ ಜರ್ನ‌ಲಿಸಂನಂತೆ ಕಾರ್ಯ‌ನಿರ್ವ‌ಹಿಸುತ್ತಿರುವ lmllittlemorelove ಬ್ಲಾಗ್‌ನ ಎಲ್ಲಾ ಸದಸ್ಯರಿಗೆ ಧನ್ಯವಾದ.

English summary
Bhaskar A Bangalore Traffic Police praised by people.He works on all 7 days of the week, 12 hours each day. A citizen journalist blog finds his good work and he hailed as an unsung hero.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X