ಹಳೇ ಪ್ರೇಮಿ ನೆನಪನ್ನು ಸುಡಲು ಇಲ್ಲೊಂದು ಕಾಫಿ ಶಾಪ್
ಬೆಂಗಳೂರು, ಫೆಬ್ರವರಿ 14: ಪ್ರೇಮ ನಿವೇದನೆ ಮಾಡಲು, ಪೇಮಿಗಳನ್ನು ಒಲಿಸಿಕೊಳ್ಳಲು ಕಾಫಿ ಶಾಪ್‌ಗಳಿವೆ, ಪಾರ್ಕ್‌ಗಳಿವೆ ಬೇಕಾದಷ್ಟು ದಾರಿಗಳೂ ಇವೆ, ಜಾಗಗಳೂ ಇವೆ. ಆದರೆ ಹಳೆಯ ಪ್ರೇಮಿಯನ್ನು ಮರೆಯಲು ಏನಿದೆ ಕೇವಲ ಬಾರ್ ಮಾತ್ರ ಅಂದುಕೊಂಡಿದ್ದೀರಾ, ಇಲ್ಲ ಅದಕ್ಕೂ ಒಂದು ಜಾಗ ಬೆಂಗಳೂರಲ್ಲಿದೆ.
ಬಾಲಿವುಡ್ ಸಿನಿಮಾ ಜಬ್ ವಿ ಮೆಟ್‌ನಲ್ಲಿ ಇರುವ ಹಾಗೆ ಹಳೆಯ ಪ್ರೇಮಿಯ ಫೋಟೊವನ್ನು ಅಲ್ಲಿ ಸುಟ್ಟು ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ನಿಜವಾಗಿಯೂ ಫೋಟೊವನ್ನು ಸುಟ್ಟು ಹಾಕುವ ಮೂಲಕ ಪ್ರೀತಿಯನ್ನು ಅಳಿಸಿ ಹಾಕಲು ಸಾಧ್ಯವೇ ಎಂದರೆ ಖಂಡಿತಾ ಇಲ್ಲ, ಪ್ರಾಮಾಣಿಕ ಪ್ರೀತಿಯನ್ನು ಮರೆಯುವುದು ಅಷ್ಟು ಸುಲಭವಲ್ಲ. ಆದರೂ ಪ್ರೇಮಿಗಳ ದಿನದಂದು ಹೋಗೊಂದು ಅವಕಾಶವನ್ನು ಈ ಕೆಫೆ ಮಾಡಿಕೊಟ್ಟಿದೆ.

ಈ ಕೆಫೆ ಮತ್ಯಾವುದೂ ಅಲ್ಲ ಕೋರಮಂಗಲ ರೌಂಡ್‌ಅಪ್ ಕೆಫೆ ಇಲ್ಲಿ ನಿಮ್ಮ ಹಳೆ ಪ್ರೀತಿಯನ್ನು ಸುಟ್ಟು ಹಾಕಲು ಒಂದು ಅವಕಾಶ ನೀಡಲಾಗಿದೆ.
ಪ್ರಪಂಚದಾದ್ಯಂತ ಪ್ರೇಮಿಗಳು ಪರಸ್ಪರ ಹಾರೈಸಿಕೊಂಡು ಜೀವನದ ನಾನು ಎನ್ನುವದನ್ನು ಬಿಟ್ಟು 'ನಾವು' ಎಂದು ಬಾಳುವುದಾಗಿ ಪ್ರಮಾಣ ಮಾಡಿಕೊಳ್ಳವು ದಿನ. ಈ ಪ್ರೇಮಿಗಳ ದಿನದ ಆಚರಣೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯೇ. ಈ ದಿನದ ಬಗ್ಗೆ ನೀವರಿಯದ ಅದೆಷ್ಟೋ ಸಂಗತಿಗಳಿವೆ.












Click it and Unblock the Notifications