ಎಲೆಕ್ಟ್ರಾನಿಕ್ಸ್ ಸಿಟಿಗೆ ಬಿಎಂಟಿಸಿ ಉಚಿತ ಶಟಲ್ ಬಸ್ ಸೇವೆ
ಬೆಂಗಳೂರು, ಮಾರ್ಚ್ 27: ಎಲೆಕ್ಟ್ರಾನಿಕ್ಸ್ ಸಿಟಿ ಸುತ್ತಮುತ್ತ ಸಾಕಷ್ಟು ಸಾಫ್ಟ್‌ವೇರ್ ಕಂಪನಿಗಳಿದ್ದು ಲಕ್ಷಾಂತರ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಉದ್ಯೋಗಿಗಳು ಕಚೇರಿಗೆ ಬರಲು ತಮ್ಮ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ ಇದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್ ಉಚಿತ ಸೇವೆ ನೀಡುತ್ತಿದೆ.
ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಉಚಿತ ಶಟಲ್ ಬಸ್ ಸೇವೆ ಆರಂಭಿಸಿದೆ.ಎಲೆಕ್ಟ್ರಾನಿಕ್ ಸಿಟಿಯ ಪೂರ್ವ ಹಂತ ಮತ್ತು ಪಶ್ಚಿಮ ಹಂತದ ನಡುವೆ ನಿರ್ದಿಷ್ಟ ಅವಧಿಗಳಲ್ಲಿ ಬಸ್ಸುಗಳು ಸಂಚರಿಸಲಿವೆ. ಈ ಪ್ರದೇಶದಲ್ಲಿ ಬಿಎಂಟಿಸಿ ಫೀಡರ್ ಬಸ್ಸುಗಳ ಸೇವೆ ಇಲ್ಲದ ಕಾರಣ ಉಚಿತ ಶಟಲ್ ಸೇವೆ ಮಹತ್ವ ಪಡೆದಿದೆ.

ಡಿಸೆಂಬರ್ ಅಂತ್ಯದಲ್ಲಿ ಪ್ರಾಯೋಗಿಕವಾಗಿ ಶಟಲ್ ಬಸ್ ಸೇವೆ ಆರಂಭಿಸಿತ್ತು. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಎರಡು ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಮಾರ್ಚ್ 25ರಿಂದ ಇನ್ನೆರೆಡು ಬಸ್‌ಗಳನ್ನು ಸೇವೆಗೆ ಒದಗಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೂಲ ಸೌಕರ್ಯ ಒದಗಿಸುವ ಯೋಜನೆಯ ಭಾಗವಾಗಿ ಈ ಸೇವೆ ಒದಗಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಕಂಪನಿಯ ಉದ್ಯೋಗಿಗಳಾಗಿ ಈ ಸೌಲಭ್ಯ ಒದಗಿಸಲಾಗುತ್ತಿದೆ. ಉದ್ಯೋಗಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 26 ಸೀಟಿನ ಬಸ್‌ಅನ್ನು ಪರಿಚಯಿಸಲಾಗಿತ್ತು. ಬಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅಪ್ಲಿಕೇಷನ್ ಬಳಸಿ ಬಸ್ ಎಲ್ಲಿ ಬರುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ.












Click it and Unblock the Notifications