ಬೆಂಗಳೂರು: ಟ್ರಾಫಿಕ್‌ನಲ್ಲೇ ಸ್ಕೂಟಿ ಓಡಿಸುತ್ತಾ ಆನ್‌ಲೈನ್‌ ಮೀಟಿಂಗ್‌ಗೆ ಅಟೆಂಡ್‌ ಆದ ಮಹಿಳೆ, ವಿಡಿಯೋ ವೈರಲ್‌

ಬೆಂಗಳೂರು, ಏಪ್ರಿಲ್‌, 26: ಬೆಂಗಳೂರು ಟ್ರಾಫಿಕ್‌ ಜಾಮ್‌ಗೆ ಹೆಸರುವಾಸಿಯಾಗಿದ್ದು, ಅದರಲ್ಲೂ ಮೆಟ್ರೋ ಸೇವೆ ಇಲ್ಲದ ಮಾರ್ಗಗಳಲ್ಲಿ ಕಚೇರಿಗೆ ಹಾಗೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವವರ ಪಾಡಂತೂ ಹೇಳತೀರದಾಗಿರುತ್ತದೆ. ಇನ್ನು ಟ್ರಾಫಿಕ್‌ ಜಾಮ್‌ ಇರುವಂತಹ ಸಂದರ್ಭದಲ್ಲಿ ಬೈಕ್‌, ಸ್ಕೂಟಿಗಳಲ್ಲಿಯೇ ಮೀಟಿಂಗ್‌ಗೆ ಅಟೆಂಡ್‌ ಆದ ಉದಾಹರಣೆಗಳು ಕೂಡ ಇವೆ. ಇಂತಹದ್ದೇ ಒಂದು ಘಟನೆ ಮತ್ತೆ ನಗರದಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ಬೆಂಗಳೂರಿಗರು ದಿನದ ಅರ್ಧ ಬರೀ ಟ್ರಾಫಿಕ್‌ನಲ್ಲಿಯೇ ಕಳೆಯುವಂತಾಗಿದೆ. ಆದ್ದರಿಂದ ಸಮಯ ಉಳಿಸುವ ಹಾಗೂ ಕಂಪನಿಯ ನಿಯಮನ ಪಾಲನೆ ಮಾಡುವ ಉದ್ದೇಶದಿಮದ ಬೇರೆ ದಾರಿಯಿಲ್ಲದೇ, ಕೆಲವರು ಟ್ರಾಫಿಕ್‌ನಲ್ಲಿಯೇ ಬೈಕ್‌ಗಳನ್ನು ಓಡಿಸುವ ಮೂಲಕ ಮೀಟಿಂಗ್‌ಗೆ ಅಟೆಂಡ್‌ ಆಗಿರುತ್ತಾರೆ. ಇದೀಗ ನಗರದಲ್ಲಿ ಮಹಿಳೆಯೊಬ್ಬರು ಸ್ಕೂಟಿ ಓಡಿಸುತ್ತಲೇ ಮೊಬೈಲ್‌ನಲ್ಲಿ ವಿಡಿಯೋ ಕಾಲ್‌ನಲ್ಲಿ ಮಾತನಾಡುವ ವಿಡಿಯೋ ಎಲ್ಲೆಡೆ ಭಾರೀ ಸದ್ದು ಮಾಡುತ್ತದೆ.

Bengaluru Woman Join Online Meeting Amid Heavy Traffic Video Goes Viral

ನಿಯಮದ ಪ್ರಕಾರ ವಾಹನಗಳನ್ನು ಓಡಿಸುವಾಗ ಪ್ರಯಾಣಿಕರು ಮೊಬೈಲ್‌ ಫೋನ್‌ ಬಳಕೆ ಮಾಡುವಂತಿಲ್ಲ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಟ್ರಾಫಿಕ್‌ನಲ್ಲಿಯೇ ಫೋನ್‌ಗಳನ್ನು ಬಳಕೆ ಮಾಡುತ್ತಿದ್ದು, ಇದು ಟ್ರಾಫಿಕ್‌ ಪೊಲೀಸರಿಗೆ ತಲೆನೋವು ತರಿಸಿದೆ.

ನಗರದಲ್ಲಿನ ಪ್ರಯಾಣಿಕರು ಸರಾಸರಿ 29 ನಿಮಿಷ 10 ಸೆಕೆಂಡುಗಳಲ್ಲಿ ಕೇವಲ 10 ಕಿಲೋ ಮೀಟರ್‌ಗಳನ್ನು ಕ್ರಮಿಸುತ್ತಾರೆ. ಇನ್ನು ಸ್ಕೂಟರ್‌ನಲ್ಲಿ ಸವಾರಿ ಮಾಡುವಾಗ ಮಹಿಳೆಯೊಬ್ಬರು ವಿಡಿಯೋ ಕರೆಗೆ ಹಾಜರಾಗಿದ್ದು, ಇದನ್ನು ಗಮನಿಸಿದರೆ, ಸಾಮಾಜಿಕ ಜಾಲತಾಣ ಜನರನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತಿದೆ ಎನ್ನುವುದೂ ಕೂಡ ಪ್ರಶ್ನೆಯಾಗಿ ಕಾಡುತ್ತಿದೆ.

ಮಹಿಳೆಯು ತನ್ನ ಸ್ಕೂಟರ್‌ನಲ್ಲಿ ತನ್ನ ಹ್ಯಾಂಡಲ್‌ನಲ್ಲಿ ಅಳವಡಿಸಲಾಗಿರುವ ಫೋನ್‌ನಲ್ಲಿ ವಿಡಿಯೋ ಕರೆಯಲ್ಲಿ ತೊಡಗಿದ್ದು, ಈ ವಿಡಿಯೋವನ್ನು @Sun46982817Shan ಎಂಬ ಟ್ವಿಟ್ಟರ್‌ನಲ್ಲಿ ಹಂಚಿಕ್ಕೊಳ್ಳಲಾಗಿದೆ. ಕ್ಯಾಮರಾ ಝೂಮ್ ಔಟ್ ಮತ್ತು ಪ್ಯಾನ್ ಮಾಡುವಾಗ, ಸ್ಕೂಟಿ ಮುಂದೆ ರಸ್ತೆಯಲ್ಲಿ ವಾಹನಗಳ ಸರಮಾಲೆಯೇ ಇರುವುದು ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+