ಬೆಂಗಳೂರು ಮತದಾರರ ಪಟ್ಟಿ: ನಗರದಲ್ಲಿ 11 ಲಕ್ಷ ಮತದಾರರು ಕಾಣೆಯಾದ್ರಾ, ಏನಿದು ಜಿಬಿಎ ಎಲೆಕ್ಷನ್ ಲೋಪ: ಕೃಷ್ಣಭಟ್ ಬರಹ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ವಿಷಯವು ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಬರಹಗಾರ ಕೃಷ್ಣಭಟ್ ಅವರ ಬರಹ ಇಲ್ಲಿದೆ. ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಅಂತ ನೋಡುವುದಕ್ಕೆ ವೆಬ್ಸೈಟ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೆಬ್ಸೈಟ್ಗೆ ಹೋದೆ.
ಇದರಲ್ಲೊಂದು ದೊಡ್ಡದೇನೋ ಹಗರಣ ನಡೆದಿರುವುದು ಖಾತ್ರಿ ಆಯ್ತು. ಮೊದಲನೆಯದಾಗಿ, ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ ಎಂಬುದು ನಮಗೆಲ್ಲ ಗೊತ್ತಿರುವ ಸಂಗತಿ. ಅಷ್ಟೇ ಅಲ್ಲ, ಕಳೆದ ಲೋಕಸಭೆ ಚುನಾವಣೆಯ ವೇಳೆಗೆ ಬೆಂಗಳೂರಿನ ಮತದಾರರ ಸಂಖ್ಯೆ 1 ಕೋಟಿ 03 ಲಕ್ಷ ಆಗಿತ್ತು. ಆದರೆ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ಬರಿ 88 ಲಕ್ಷದ 92 ಸಾವಿರ ಮತದಾರರು ಮಾತ್ರ ಇದ್ದಾರೆ. ಅಂದರೆ, ಕಳೆದ ಎರಡು ವರ್ಷದಲ್ಲಿ 11 ಲಕ್ಷ ಚಿಲ್ಲರೆ ಜನರು ಬೆಂಗಳೂರು ಬಿಟ್ಟು ಓಡಿ ಹೋಗಿದ್ದಾರೆಯೇ. ಈ 11 ಲಕ್ಷ ಚಿಲ್ಲರೆ ಜನರನ್ನ ತೆಗೆದುಹಾಕಿದ್ದು ಹೇಗೆ, ಈ ಮತದಾರರು ಎಲ್ಲಿಗೆ ಹೋದರು, ಇನ್ನೂ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಲೇ ಇದೆ. ಇನ್ನೂ ಶಿಕ್ಷಕರು ಪ್ರಕ್ರಿಯೆ ಮುಂದುವರಿಸಿದ್ದಾರೆ. ಈಗ ಪರಿಷ್ಕರಣೆ ಆಗಿರುವುದು ಬರಿ 20% ಅಷ್ಟೇ. 20% ಪರಿಷ್ಕರಣೆ ಮಾಡಿದ್ದಾರೆ ಎಂದರೆ ಅರ್ಧಕ್ಕರ್ಧ 10% ಮತದಾರರನ್ನೇ ಕೈಬಿಟ್ಟಿದ್ದಾರೆ ಎಂದಾಯಿತು.

ಇಲ್ಲೊಂದು ಗಂಭೀರ ಸಮಸ್ಯೆ ಖಂಡಿತ ಇದೆ. ದುರಾದೃಷ್ಟವಶಾತ್ ಇದನ್ನು ಯಾರೂ ಪ್ರಶ್ನೆಯನ್ನೂ ಮಾಡಿದ ಹಾಗಿಲ್ಲ. ಇನ್ನೊಂದು ಕ್ರಿಮಿನಲ್ ಐಡಿಯಾವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿದ್ದೇನೆಂದರೆ, ಇವತ್ತೇ ಆಕ್ಷೇಪಣೆ ಸಲ್ಲಿಸುವುದಕ್ಕೆ ಕೊನೆಯ ದಿನ ಅಂತ ಘೋಷಣೆ ಮಾಡಿದ್ದಾರೆ. ಆದರೆ, ಅವರ ವೆಬ್ಸೈಟ್ನಲ್ಲಿ Search by Epic ಮತ್ತೆ Search by Name ಆಯ್ಕೆಯೇ ಇಲ್ಲ. ಪೋಲಿಂಗ್ ಸ್ಟೇಷನ್ ಪ್ರಕಾರ ಹುಡುಕುವ ಆಯ್ಕೆ ಮಾತ್ರ ಕೊಟ್ಟಿದ್ದಾರೆ.
ಅಂದರೆ, ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಅಂತ ನೋಡುವುದಕ್ಕೆ ನಮಗೆ ನಮ್ಮ ಮತಗಟ್ಟೆ ಯಾವುದು ಅಂತ ಗೊತ್ತಿರಬೇಕು. ಅದು ಗೊತ್ತಿದ್ದರೂ ಒಂದೊಂದು ಮತಗಟ್ಟೆಯಲ್ಲೂ ಸುಮಾರು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಒಂದು ಮತಗಟ್ಟೆಯಲ್ಲಂತೂ 5 ಸಾವಿರ ಮತದಾರರಿದ್ದಾರೆ. 5 ಸಾವಿರ ಮತದಾರರ ಹೆಸರಿನಲ್ಲಿ ನಮ್ಮ ಹೆಸರು ಹುಡುಕುವುದು ಸುಲಭದ ಕೆಲಸವೇನು, ಜನರೇನು ಅಷ್ಟು ಫ್ರೀ ಆಗಿ ಕೂತುಕೊಂಡಿದ್ದಾರೆ ಅಂತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಭಾವಿಸಿದೆಯೇ. ಎಪಿಕ್ ನಂಬರ್ ಬಳಸಿ ಸರ್ಚ್ ಮಾಡುವುದಕ್ಕೆ ಆಗದೇ ಇದ್ದರೆ ನಮ್ಮ ಹೆಸರು ಹುಡುಕುವುದು ಸಾಧ್ಯ ಇಲ್ಲ ಅಂತಲೇ ಅರ್ಥ. ಹೀಗಾಗಿ, ಯಾರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೋ ಅವರಿಗೆ ಗೊತ್ತೂ ಆಗುವುದಿಲ್ಲ. ಅವರು ಆಕ್ಷೇಪಣೆ ಸಲ್ಲಿಸಲು ಸಾಧ್ಯವೂ ಆಗುವುದಿಲ್ಲ. ಅವರು ಮತ ಹಾಕುವುದಕ್ಕೆ ಅಂತ ಮತಗಟ್ಟೆಗೆ ಹೋದಾಗಲೇ ಅವರಿಗೆ ಶಾಕ್ ಆಗುತ್ತೆ.
ಈ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಮತಯಂತ್ರ ಬಳಸದೇ ಮತ ಚೀಟಿ ಬಳಸಿ ಮತದಾನ ಮಾಡಲಾಗುತ್ತದೆ ಅಂತ ಘೋಷಣೆ ಮಾಡಿದಾಗಲೇ ಖಾತ್ರಿ ಆಗಿತ್ತು ಇದೊಂದು ಶುದ್ಧ ಗೋಲ್ಮಾಲ್ ಎಲೆಕ್ಷನ್ ಅಂತ. ಈಗ ಅದು ದಿನದಿಂದ ದಿನಕ್ಕೆ ಖಾತ್ರಿ ಆಗುತ್ತಾ ಇದೆ.
- ಕೃಷ್ಣಭಟ್, ಬರಹಗಾರ
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications