Double Decker Flyover: ಬೆಂಗಳೂರು ಅಪ್‌ಕಮಿಂಗ್ ಡಬಲ್ ಡೆಕ್ಕರ್ ಫ್ಲೈಓವರ್ ಅಪ್ಡೇಟ್: ಡಿಕೆ ಶಿವಕುಮಾರ್
ಬೆಂಗಳೂರು ಜನವರಿ 07: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಹೊಸ ಮಾರ್ಗಗಳು ಹೊಸ ರೂಪದಲ್ಲಿ ನಿರ್ಮಾಣಗೊಳ್ಳಲಿವೆ. ಈ ಹಿಂದಿನಂದ ಮೆಟ್ರೊ ಪಿಲ್ಲರ್‌ಗಳು, ವಯಾಡಕ್ಟ್‌ಗಳು ಕೇವಲ ಮೆಟ್ರೋಗೆ ಸಿಮಿತವಾಗದೇ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಿವೆ. ಅಂದರೆ, ಹೊಸ ಮೆಟ್ರೋ ಮಾರ್ಗಗಳು ಡಬಲ್ ಡೆಕ್ಕರ್ ಫ್ಲೈಓವರ್ ಗಳಾಗಿ ಬದಲಾಗಲಿವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ವಿವಿಧ ಸ್ಥಳ ಪರಿಶೀಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮುಂಬರುವ ಎಲ್ಲಾ ಮೆಟ್ರೋ ಮಾರ್ಗಗಳಿಗೆ ವಿಶೇಷ ಅನುದಾನ ಹಂಚಿಕೆ ಮಾಡಲಾಗಿದೆ. ಅಂದರೆ ಈ ಹೊಸ ಉದ್ದೇಶಿತ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲು 9,800 ಕೋಟಿ ರೂ. ನೀಡಲಾಗುತ್ತಿದೆ.

ಈಗಾಗಲೇ ನಮ್ಮ ಮೆಟ್ರೋ ಆರ್‌ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಈ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲಾಗಿದೆ. ಈ ಮೆಟ್ರೋ ಮಾರ್ಗದಲ್ಲಿ ರಾಗಿಗುಡ್ಡ ಪ್ರಸನ್ನಾಂಜನೇಯ ದೇವಸ್ಥಾನದಿಂದ ಸಿಲ್ಕ್‌ಬೋರ್ಡ್ ವರೆಗೆ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವಾಗಿದೆ. ಇದಾದ ಬಳಿಕ ಮುಂದಿನ ಎಲ್ಲ ಮೆಟ್ರೋ ನಿಲ್ದಾಣಗಳ ಹೊಸ ಮಾರ್ಗಗಳಲ್ಲೂ ಈ ಯೋಜನೆ ಮುಂದುವರಿಸಲು ನಿರ್ಧರಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)- ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 50:50 ಅನುಪಾತದಲ್ಲಿ ಯೋಜನೆ ವೆಚ್ಚವನ್ನು ಹಂಚಿಕೊಳ್ಳಲಿವೆ. ಈ ಯೋಜನೆ ಮೂಲಕ ಬೆಂಗಳೂರಿನ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಮುಂದಾಗಿದೆ. ಹೊಸ ಮೆಟ್ರೋ ಯೋಜನೆಗಳು ನಿಗದಿತ ಮಾರ್ಗದಲ್ಲಿ, ನಿಗದಿತ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಡಬಲ್ ಡೆಕ್ಕರ್ ಆಗಿ ಬದಲಾಗಲಿವೆ ಎಂದು ಹೇಳಿದರು.
ಸದ್ಯ ಈ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ ಈಗಾಗಲೇ ಕಾಮಗಾರಿ ಆರಂಭವಾದ ಮೆಟ್ರೋ ಯೋಜನೆ 2ಎ ಮತ್ತು 2ಬಿ ಕ್ರಮವಾಗಿ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ಮತ್ತು ಕೆ.ಆರ್.ಪುರಂನಿಂದ ಬೆಂಗಳೂರು ಏರ್‌ಪೋರ್ಟ್ ವರೆಗೆ ನೀಲಿ ಮಾರ್ಗದ ಕೆಲಸ ನಡೆಯುತ್ತಿದೆ. ಇದಕ್ಕೆ ಅನ್ವಯಿಸದು ಎಂದು ತಿಳಿದು ಬಂದಿದೆ.
ಈ ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್
BMRCL ಮೂರನೇ ಹಂತದ ಯೋಜನೆಗಳಲ್ಲಿ ಎರಡು ಕಾರಿಡಾರ್ ನಲ್ಲಿ ಈ ಫ್ಲೈಓವರ್ ನಿರ್ಮಾಣವಾಗಲಿದೆ. ಜೆಪಿ.ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಒಂದು ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆ ವರೆಗೆ ಮತ್ತೊಂದು ಕಾರಿಡಾರ್ ನಿರ್ಮಾಣಗೊಳ್ಳುತ್ತಿದೆ. ಈ ಎರಡು ಕಾರಿಡಾರ್‌ಗಳು ಡಬಲ್ ಡೆಕ್ಕರ್ ಆಗಲಿ ಬದಲಾಗಲಿವೆ. ಈ ಮಾರ್ಗ ಸೇರಿದಂತೆ ಭವಿಷ್ಯ ದೃಷ್ಟಿಯಿಂದ ಅಗತ್ಯತೆ ನೋಡಿಕೊಂಡು ಮೆಟ್ರೋ ಎತ್ತರಿಸಿದ ಮಾರ್ಗಗಳು ಡಬಲ್ ಡೆಕ್ಕರ್ ಮಾರ್ಗಗಳಾಗಿರಲಿವೆ ಎಂದು ಡಿಸಿಎಂ ಹೇಳಿದರು.












Click it and Unblock the Notifications