SMVT ಬೆಂಗಳೂರು ರೈಲುಗಳ ಪ್ರಯಾಣದ ಸಮಯ ಬದಲು; ಡಿಸೆಂಬರ್ ವರೆಗೆ ವೇಳಾಪಟ್ಟಿ ಪರಿಷ್ಕರಣೆ
ಬೆಂಗಳೂರು: ನಗರದ ಬೈಯಪ್ಪನಹಳ್ಳಿ ಯಾರ್ಡ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳು ತುರ್ತು ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 30ರಿಂದ ಡಿಸೆಂಬರ್ ವರೆಗೆ ವಿವಿಧ ರೈಲುಗಳ ಸಂಚಾರ ಸಮಯ/ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಇನ್ನೂ ಕೆಲವು ರೈಲುಗಳನ್ನು ಮಾರ್ಗ ಮಧ್ಯ ನಿಯಂತ್ರಿಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
ವೇಳಾಪಟ್ಟಿ ಬದಲಾದ ರೈಲುಗಳ ವಿವರ
* ಮೈಸೂರು-ರೇಣಿಗುಂಟಾ ಸಾಪ್ತಾಹಿಕ ಎಕ್ಸ್ರೈಲು (22135) 30.10.2026 ಮತ್ತು 20.11.2026 ರಂದು ಹೊರಡುವ ಬದಲಾಗಿ ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಚಲಿಸುವ ಸಮಯದಲ್ಲಿ 60 ನಿಮಿಷ ಬದಲಾವಣೆ ಆಗಿದೆ. 2026 ನವೆಂಬರ್ 06, 13, 27 ಮತ್ತು ಡಿಸೆಂಬರ್ 04ರಂದು ಹೊರಡುವ ಈ ರೈಲುಗಳ ಸಮಯದಲ್ಲಿ 75 ನಿಮಿಷಗಳ ತಡವಾಗಿ ಸಂಚಾರ ಮಾಡಲಿದೆ.

* ಮೈಸೂರು-ಶಾಲಿಮಾರ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22818) ನವೆಂಬರ್ 08 ರಂದು ಹೊರಡಲಿದ್ದು, ಅಂದು 60 ನಿಮಿಷಗಳಷ್ಟು ತಡವಾಗಿ ಸಂಚರಿಸಲಿದೆ.
* ಟಾಟಾನಗರ-ಎಸ್‌ಎಂವಿಟಿ (SMVT) ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12889) ಅಕ್ಟೋಬರ್ 30 ರಂದು ಹೊರಡುವ ವೇಳಾಪಟ್ಟಿಯನ್ನು 75 ನಿಮಿಷಗಳಷ್ಟು ಮತ್ತು ನವೆಂಬರ್ 27 ರಂದು ಹೊರಡುವ ರೈಲಿನ ವೇಳಾಪಟ್ಟಿ 90 ನಿಮಿಷ ತಡವಾಗಿ ಸಂಚಾರ ಮಾಡಲಿದೆ.
* ಹತಿಯಾ-ಎಸ್‌ಎಂವಿಟಿ (SMVT) ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (18637) ನವೆಂಬರ್ 07, 21 ಮತ್ತು 28 ರಂದು ಹೊರಡಲಿದ್ದು, ಅಂದು ಹೊಸ ವೇಳಾಪಟ್ಟಿ ಪ್ರಕಾರ 75 ನಿಮಿಷ ತಡವಾಗಿ ಸಂಚಾರ ಮಾಡಲಿದೆ.
* ಬೀದರ್-ಎಸ್‌ಎಂವಿಟಿ (SMVT) ಬೆಂಗಳೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16560) ಅಕ್ಟೋಬರ್ 31, ನವೆಂಬರ್ 23, 28 ಮತ್ತು 30 ರಂದು ಹೊರಡುವ ರಲಿನ ಸಮಯದಲ್ಲಿ 75 ನಿಮಿಷಗಳಷ್ಟು ಬದಲಾವಣೆ ಮಾಡಲಾಗಿದೆ.
* ಹತಿಯಾ-ಎಸ್‌ಎಂವಿಟಿ (SMVT) ಬೆಂಗಳೂರು ದ್ವಿ-ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12835) ನವೆಂಬರ್ 10, 17, 24, 29 ಮತ್ತು ಡಿಸೆಂಬರ್ 01 ರಂದು ಹೊರಡುವ ಸಮಯದಲ್ಲಿ 75 ನಿಮಿಷ ತಡವಾಗಲಿದೆ. 27.10.2026 ಮತ್ತು 22.11.2026 ರಂದು ಹೊರಡುವ ರೈಲಿನ ವೇಳಾಪಟ್ಟಿಯನ್ನು 90 ನಿಮಿಷಗಳಷ್ಟು ಬದಲಾಯಿಸಲಾಗುವುದು.
* ಅಲಿಪುರ್ ದ್ವಾರ್-ಎಸ್‌ಎಂವಿಟಿ (SMVT) ಬೆಂಗಳೂರು ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16598) ನವೆಂಬರ್ 09, 16, 23 ಮತ್ತು 30 ರಂದು ಹೊರಡಲಿದ್ದು, ಹೊಸ ವೇಳಾಪಟ್ಟಿ ಪ್ರಕಾರ 90 ನಿಮಿಷಗಳಷ್ಟು ಹಾಗೂ ಅಕ್ಟೋಬರ್ 26 ರಂದು ಹೊರಡುವ ರೈಲಿನ ವೇಳಾಪಟ್ಟಿಯನ್ನು 120 ನಿಮಿಷಗಳಷ್ಟು ಬದಲಾಯಿಸಲಾಗಿದೆ.
ಮಾರ್ಗ ಮಧ್ಯ ನಿಯಂತ್ರಣಗೊಳ್ಳುವ ರೈಲು
* ಅಕ್ಟೋಬರ್ 29, 31, ನವೆಂಬರ್ 06, 08, 11, 13, 23, 27 ಮತ್ತು 30 ರಂದು ಪ್ರಯಾಣ ಪ್ರಾರಂಭಿಸುವ ಪುರಚ್ಚಿ ತಲೈವರ್ ಡಾ. ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ - ಅಶೋಕಪುರಂ ಕಾವೇರಿ ಡೈಲಿ ಎಕ್ಸ್‌ಪ್ರೆಸ್ ರೈಲು (16021) ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣಕ್ಕೆ (ತಡೆಗೆ) ಒಳಪಡಲಿದೆ.
* 15.11.2026, 22.11.2026 ಮತ್ತು 29.11.2026 ರಂದು ಪ್ರಯಾಣಿಸುವ ಮೈಸೂರು - ಶಾಲಿಮಾರ್ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22818) ಮಾರ್ಗ ಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣಕ್ಕೆ (ತಡೆಗೆ/ವಿಳಂಬ) ಒಳಪಡಲಿದೆ.
* ನವೆಂಬರ್ 14 ರಂದು ಸಂಚರಿಸುವ ಹತಿಯಾ - ಎಸ್.ಎಂ.ವಿ.ಟಿ. (SMVT) ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ರೈಲು (18637) ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣಗೊಳ್ಳಲಿದೆ.
* ನವೆಂಬರ್ 01, 03, 08 ಮತ್ತು 15 ರಂದು ಹೊರಡುವ ಹತಿಯಾ - ಎಸ್.ಎಂ.ವಿ.ಟಿ. (SMVT) ಬೆಂಗಳೂರು ಬೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12835) ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣಕ್ಕೆ (ತಡೆಗೆ) ಒಳಪಡಲಿದೆ.
* ನವೆಂಬರ್ 06, 13 ಮತ್ತು 20 ರಂದು ಪ್ರಯಾಣ ಆರಂಭಿಸುವ ಟಾಟಾನಗರ-ಎಸ್‌ಎಮ್‌ವಿಟಿ (SMVT) ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12889) ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
* 14.11.2026 ರಂದು ಪ್ರಯಾಣ ಆರಂಭಿಸುವ ಬಾಲೂರ್‌ಘಾಟ್-ಎಸ್‌ಎಮ್‌ವಿಟಿ (SMVT) ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16524) ಮಾರ್ಗ ಮಧ್ಯೆ 45 ನಿಮಿಷಗಳ ನಿಯಂತ್ರಣಗೊಳ್ಳಲಿದೆ.
* ತಿರುಪತಿ-ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (17423) ಅಕ್ಟೋಬರ್ 29 ರಂದು ಪ್ರಯಾಣಿಸುವ ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣಕ್ಕೊಳಪಡಲಿದೆ.
* ಅಲಿಪುರ್ ದುವಾರ್-ಎಸ್‌ಎಮ್‌ವಿಟಿ (SMVT) ಬೆಂಗಳೂರು ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16598) ನವೆಂಬರ್ 02 ರಂದು ಪ್ರಯಾಣ ಪ್ರಾರಂಭಿಸುವ 45 ನಿಮಿಷ ನಿಯಂತ್ರಣಗೊಳ್ಳಲಿದೆ.
* ನವೆಂಬರ್ 01 ಮತ್ತು 08 ರಂದು ಪ್ರಯಾಣ ಪ್ರಾರಂಭಿಸುವ ಮಾಲ್ಡಾ ಟೌನ್-ಎಸ್‌ಎಮ್‌ವಿಟಿ (SMVT) ಬೆಂಗಳೂರು ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (13434) ಮಾರ್ಗಮಧ್ಯೆ 45 ನಿಮಿಷ ನಿಯಂತ್ರಿಸಲಾಗುತ್ತಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.


Click it and Unblock the Notifications
