SWR: ಗರೀಬ್ ರಥ ಎಕ್ಸ್‌ಪ್ರೆಸ್ ಪ್ರಯಾಣಿಕರ ಗಮನಕ್ಕೆ! ಬೋಗಿಗಳ ಸಂಖ್ಯೆ ಏರಿಕೆ: ಮೆಮು ರೈಲುಗಳ ರದ್ದತಿ ಪರಿಷ್ಕರಣೆ
ಬೆಂಗಳೂರು: ಪ್ರಯಾಣಿಕರ ಅನುಕೂಲ್ಕಾಗಿ ಯಶವಂತಪುರದಿಂದ ಹೊರುಡುವ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನ ಎಸಿ (AC) ಬೋಗಿಗಳ ಶಾಶ್ವತ ಹೆಚ್ಚಳಕ್ಕೆ ನೈಋತ್ಯ ರೈಲ್ವೆ ನಿರ್ಧರಿಸಿದೆ. ಇದರೊಂದಿಗೆ ಈ ಹಿಂದೆ 2027ರ ಫೆಬ್ರವರಿವರೆಗೆ ರದ್ದುಗೊಳಿಸಿದ್ದ ವಿವಿಧ ಮೆಮು ರೈಲುಗಳ ರದ್ದತಿಯನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ.
ಪ್ರಯಾಣಿಕರ ದಟ್ಟಣೆ, ಅಗತ್ಯತೆ ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಯಶವಂತಪುರ-ತಿರುವನಂತಪುರಂ ನಾರ್ತ್-ಯಶವಂತಪುರ ನಡುವೆ ವಾರಕ್ಕೆ ಮೂರು ಬಾರಿ ಸಂಚರಿಸುವ ಗರೀಬ್ ರಥ ಎಕ್ಸ್‌ಪ್ರೆಸ್ ರೈಲುಗಳಿಗೆ (12257/12258), ಹೆಚ್ಚುವರಿಯಾಗಿ ಮೂರು 'ಎಸಿ 3-ಟೈಯರ್ ಎಕಾನಮಿ' ಬೋಗಿಗಳನ್ನು ಶಾಶ್ವತವಾಗಿ ಸೇರಿಸಲಾಗುತ್ತಿದೆ ಎಂದರು.

ಅಕ್ಟೋಬರ್ 18, 19ರಿಂದ ಹೊಸ ಬೋಗಿ ಸಹಿತ ಸಂಚಾರ
* ಯಶವಂತಪುರ-ತಿರುವನಂತಪುರಂ ನಾರ್ತ್ ಗರೀಬ್ ರಥ ಎಕ್ಸ್‌ಪ್ರೆಸ್ ರೈಲು (12257) ಇದೇ ಅಕ್ಟೋಬರ್ 18 ರಿಂದ ಯಶವಂತಪುರದಿಂದ ಮೂರು ಹೆಚ್ಚುವರಿ 'ಎಸಿ 3-ಟೈಯರ್ ಎಕಾನಮಿ' ಬೋಗಿಗಳ ಸಹಿತ ಕಾರ್ಯಾಚರಣೆ ನಡೆಸಲಿದೆ.
* ಅದೇ ರಿತಿ ತಿರುವನಂತಪುರಂ ನಾರ್ತ್-ಯಶವಂತಪುರ ಗರೀಬ್ ರಥ ಎಕ್ಸ್‌ಪ್ರೆಸ್ ರೈಲು (12258) ಅಕ್ಟೋರ್ 19 ರಿಂದ ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡುವಾಗ ಮೂರು ಹೆಚ್ಚುವರಿ 'ಎಸಿ 3-ಟೈಯರ್ ಎಕಾನಮಿ' ಬೋಗಿಗಳೊಂದಿಗೆ ಸಂಚಾರ ಮಾಡಲಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ಬದಲಾವಣೆಯೊಂದಿಗೆ ರೈಲುಗಳಲ್ಲಿ ಒಟ್ಟು ಎಲ್‌ಎಚ್‌ಬಿ (LHB) ಬೋಗಿಗಳ ಸಂಖ್ಯೆಯು 18 ರಿಂದ 21 ಕ್ಕೆ ಏರಿಕೆಯಾಗಲಿದೆ. ಇದರಲ್ಲಿ 19 'ಎಸಿ 3-ಟೈಯರ್ ಎಕಾನಮಿ' ಬೋಗಿಗಳು ಹಾಗೂ ಎರಡು ಲಗೇಜ್-ಕಮ್-ಬ್ರೇಕ್ ಮತ್ತು ಜನರೇಟರ್ ಕಾರ್‌ಗಳು ಒಳಗೊಂಡಿರುತ್ತವೆ ಎಂದರು.
ಮೆಮು ರೈಲುಗಳ ರದ್ದತಿ ಪರಿಷ್ಕರಣೆ
ರಾಮನಗರ-ಎಲಿಯೂರು 'ಡೌನ್' ಲೈನ್ ವಿಭಾಗದಲ್ಲಿ ಸುರಕ್ಷತೆ ಮತ್ತು ಹಳಿ ನಿರ್ವಹಣಾ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಕಾರಣದಿಂದಾಗಿ ಕೆಎಸ್‌ಆರ್ ಬೆಂಗಳೂರು-ಅಶೋಕಪುರಂ ಮೆಮು ರೈಲು (66539) ಮತ್ತು ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಮೆಮು ರೈಲು (66540) ವಾರಕ್ಕೆ ಮೂರು ಬಾರಿ ಸಂಚರಿಸಲಿದ್ದು, ಈ ರೈಲುಗಳನ್ನು ಇಂದು ಅ.16 ರಿಂದ 2027 ಜನವರಿ 01ರ ಅವಧಿಯಲ್ಲಿ ನಿರ್ದಿಷ್ಟ ದಿನಾಂಕಗಳಂದು ರದ್ದುಗೊಳಿಸಲಾಗಿತ್ತು.
ಈಗ ಈ ರದ್ದತಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. 16.10.2026, 17.10.2026 ಮತ್ತು 18.10.2026 ರಂದು (ಒಟ್ಟು 3 ದಿನಗಳು ಮಾತ್ರ) ಈ ಎರಡೂ ರೈಲು ಸೇವೆಗಳನ್ನು ಪುನಃಸ್ಥಾಪಿಸಲಾಗುವುದು. ಈ ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.
ಆದಾಗ್ಯೂ 66539 ಮತ್ತು 66540 ಸಂಖ್ಯೆಯ ರೈಲುಗಳ ರದ್ದತಿಗೆ ಸಂಬಂಧಿಸಿದಂತೆ ಪರಿಷ್ಕರಣೆ ಮಾಡಲಾಗಿದೆ. ಈ ರೈಲುಗಳು ಈ ಕೆಳಗಿನ ದಿನಾಂಕಗಳಂದು ರದ್ದುಗೊಳ್ಳಲಿವೆ: 23.10.2026 ರಿಂದ 25.10.2026, 30.10.2026 ರಿಂದ 01.11.2026, 06.11.2026 ರಿಂದ 08.11.2026, 13.11.2026 ರಿಂದ 15.11.2026, 20.11.2026 ರಿಂದ 22.11.2026, 27.11.2026 ರಿಂದ 29.11.2026, 04.12.2026 ರಿಂದ 06.12.2026, 11.12.2026 ರಿಂದ 13.12.2026, 18.12.2026 ರಿಂದ 20.12.2026, 25.12.2026 ರಿಂದ 27.12.2026, 01.01.2027 ರಿಂದ 03.01.2027 ಮತ್ತು 08.01.2027.
II. ಮೆಮು (MEMU) ರೈಲುಗಳ ಭಾಗಶಃ ರದ್ದತಿಯಲ್ಲಿ ಪರಿಷ್ಕರಣೆ
ಕೆಂಗೇರಿ-ಹೆಜ್ಜಾಲ-ಬಿಡದಿ ಮತ್ತು ಬಿಡದಿ-ರಾಮನಗರ ವಿಭಾಗಗಳಲ್ಲಿ ಹಳಿ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ, 66580 ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಮೆಮು (MEMU) ಮತ್ತು 66579 ಕೆಎಸ್‌ಆರ್ ಬೆಂಗಳೂರು-ಅಶೋಕಪುರಂ ಮೆಮು (MEMU) ರೈಲುಗಳನ್ನು ಆಗಸ್ಟ್ 2026 ರಿಂದ ಫೆಬ್ರವರಿ 2027 ರವರೆಗಿನ ನಿರ್ದಿಷ್ಟ ದಿನಾಂಕಗಳಂದು ಭಾಗಶಃ ರದ್ದುಗೊಳಿಸುವುದಾಗಿ ಈ ಹಿಂದೆ ತಿಳಿಸಲಾಗಿತ್ತು.
ಈ ಭಾಗಶಃ ರದ್ದತಿ ವ್ಯವಸ್ಥೆಯನ್ನು ಇದೀಗ ಪರಿಷ್ಕರಿಸಲಾಗಿದೆ. ಇದರನ್ವಯ, ರೈಲು ಸಂಖ್ಯೆ 66580 ಚನ್ನಪಟ್ಟಣದಲ್ಲಿ ತನ್ನ ಪ್ರಯಾಣವನ್ನು ಮೊಟಕುಗೊಳಿಸುವ ಬದಲು, 17.10.2026 ಮತ್ತು 20.10.2026 ರಂದು ಕೆಎಸ್‌ಆರ್ (KSR) ಬೆಂಗಳೂರಿನವರೆಗೆ ಸಂಚರಿಸಲಿದೆ. ಹಾಗೆಯೇ, ರೈಲು ಸಂಖ್ಯೆ 66579 ಚನ್ನಪಟ್ಟಣದ ಬದಲಾಗಿ 18.10.2026 ಮತ್ತು 21.10.2026 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಲಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಈ ಹಿಂದೆ ಘೋಷಿಸಲಾಗಿದ್ದ ಭಾಗಶಃ ರದ್ದತಿಯ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರದ್ದಾದ ಮೆಮು ರೈಲುಗಳ ವಿವರ ಮುಂದಿದೆ.
* ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಮೆಮು (MEMU) ರೈಲು (66580) ಇದೇ ಅಕ್ಟೋಬರ್ 22, 24, 27, 29, 31, ನವೆಂಬರ್ 3, 5, 7, 10, 12, 14, 17, 19, 21, 24, 26, 28, ಡಿಸೆಂಬರ್ 1, 3, 5, 8, 10, 12, 15, 17, 19, 22, 24, 26, 29, 31 ಮತ್ತು 2027 ಜನವರಿ 2, 5, 7, 9, 12, 14, 16, 19, 21, 23, 26, 28, 30, ಫೆಬ್ರವರಿ 2, 4, 6, 9, 11, 13, 16, 18 ರಂದು ಚನ್ನಪಟ್ಟಣ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ಅಲಲದೇ ಚನ್ನಪಟ್ಟಣದಲ್ಲಿಯೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.
* ಕೆಎಸ್‌ಆರ್ ಬೆಂಗಳೂರು-ಅಶೋಕಪುರಂ ಮೆಮು (MEMU) ರೈಲು (66579) ಇದೇ ಅಕ್ಟೋಬರ್ 16, 23, 25, 28, 30, ನವೆಂಬರ್ 1, 4, 6, 8, 11, 13, 15, 18, 20, 22, 25, 27, 29, ಡಿಸೆಂಬರ್ 2, 4, 6, 9, 11, 13, 16, 18, 20, 23, 25, 27, 30 ಮತ್ತು 2027ರ ಜನವರಿ 1, 3, 6, 8, 10, 13, 15, 17, 20, 22, 24, 27, 29, 31; ಫೆಬ್ರವರಿ 3, 5, 7, 10, 12, 14, 17, 19 ರಂದು ಕೆಎಸ್‌ಆರ್ ಬೆಂಗಳೂರು ಮತ್ತು ಚನ್ನಪಟ್ಟಣ ನಡುವೆ ಭಾಗಶಃ ರದ್ದುಗೊಳ್ಳಲಿದೆ.ನಿಗದಿತ ನಿರ್ಗಮನ ಸಮಯದಲ್ಲಿ ಕೆಎಸ್‌ಆರ್ ಬೆಂಗಳೂರಿನ ಬದಲಾಗಿ ಚನ್ನಪಟ್ಟಣದಿಂದ ಪ್ರಯಾಣ ಆರಂಭಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications
