Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ: ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ!
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪ್ಡೇಟ್ಸ್ ಬಂದಿದೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿರುವ ಪ್ರಮುಖ ಪ್ರದೇಶಗಳಲ್ಲಿ ಒಂದು ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಚಿಗುರೊಡೆದಿದೆ. ನಗರದಲ್ಲಿ ವಿವಿಧ ಕಾರಣಕ್ಕೆ ಈಗಾಗಲೇ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಬೆಲೆ ಬಂದಿದೆ. ಆದರೆ ಇದೀಗ ಬೆಂಗಳೂರಿನ ಹೊರ ವಲಯದಲ್ಲೂ ಭೂಮಿಗೆ ಒಳ್ಳೆಯ ಬೆಲೆ ಬಂದಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಸ್ಥಳಗಳನ್ನು ಶಾರ್ಟ್ ಲಿಸ್ಟ್ ಮಾಡಿಕೊಳ್ಳಲಾಗಿದೆ. ಆದರೆ, ಅದರಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಭೂಮಿಯ ಬೆಲೆ ಭರ್ಜರಿ ಹೆಚ್ಚಳವಾಗಿದೆ.
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಪ್ರದೇಶಗಳನ್ನು ಶಾರ್ಟ್ ಲಿಸ್ಟ್ ಮಾಡಿಕೊಳ್ಳಲಾಗಿದೆ. ಆದರೆ ಅದರಲ್ಲಿ ಪ್ರಮುಖವಾಗಿ ಕನಕಪುರ ರಸ್ತೆ ಹಾಗೂ ನೆಲಮಂಗಲದ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಭರ್ಜರಿ ಬೆಲೆ ಬಂದಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಈಗಾಗಲೇ ಈ ಪ್ರದೇಶಗಳಲ್ಲಿ ಪರಿಶೀಲನೆ ಮಾಡಿದೆ. ಪ್ರಮುಖ ಆಯ್ಕೆಗಳಲ್ಲಿ ಈ ಎರಡು ಪ್ರದೇಶವೂ ಸೇರಿದೆ. ಆದರೆ ಜನ ನೆಲಮಂಗಲಕ್ಕಿಂತಲೂ ಕನಕಪುರ ಭಾಗದಲ್ಲಿ ಭೂಮಿ ಖರೀದಿ ಮಾಡುವುದಕ್ಕೆ ಹೆಚ್ಚು ಆಸಕ್ತರಾಗಿದ್ದಾರೆ. ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎನ್ನುವುದು ಜನರ ನಂಬಿಕೆಯಾಗಿದೆ. ಕನಕಪುರ ಭಾಗದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಯಾವುದಾದರೂ ಪ್ರಬಲ ಅಥವಾ ಪ್ರಮುಖ ಯೋಜನೆಯನ್ನು ತರಲಿದ್ದಾರೆ ಎನ್ನುವುದು ಕೆಲವರ ನಂಬಿಕೆಯಾಗಿದೆ.

ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ 5 ಪ್ರಮುಖ ಪ್ರದೇಶಗಳನ್ನು ಗುರುತಿಸಲಾಗಿತ್ತು. ಆದರೆ, ಐದರಲ್ಲಿ ಯಾವುದಾದರೂ ಒಂದು ಪ್ರದೇಶ ಮಾತ್ರ ಆಯ್ಕೆಯಾಗಲಿದೆ. ಈ ನಡುವೆ ವಿಮಾನ ನಿಲ್ದಾಣ ನಿರ್ಮಾಣದ ವಿಚಾರ ಹಾಗೂ ಪ್ರಕ್ರಿಯೆಗಳು ನೀರಸವಾಗಿದೆ. ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಈ ಹಿಂದಿನಂತೆ ಉತ್ಸಾಹವನ್ನು ತೋರಿಸುತ್ತಿಲ್ಲ. ಅಲ್ಲದೇ ಕೇಂದ್ರ ಸರ್ಕಾರ ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದಲೂ ಈ ಬಗ್ಗೆ ಇನ್ನೂ ಅಪ್ಡೇಟ್ಸ್ ಬಂದಿಲ್ಲ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಕರ್ನಾಟಕ ಸರ್ಕಾರಕ್ಕೆ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವ ಜಾಗ ಸೂಕ್ತವಾಗಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ಇನ್ನೂ ವರದಿ ನೀಡಿಲ್ಲ.
ಈ ನಡುವೆ ಕನಕಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಈ ಯೋಜನೆಯಲ್ಲಿ ಕನಕಪುರ ಹೆಸರು ಕೇಳಿ ಬಂದು ಒಂದು ವರ್ಷವಾಗಿದೆ. ಇದೀಗ ಈ ಭಾಗದಲ್ಲಿ ಭೂಮಿ ಬೆಲೆಯು ಒಂದು ವರ್ಷದಲ್ಲಿ ಭಾರೀ ಹೆಚ್ಚಳವಾಗಿದೆ.
ಬೆಂಗಳೂರಿನ ಕನಕಪುರದಲ್ಲಿ ಆಸ್ತಿ ಮೌಲ್ಯಗಳು ಬದಲಾಗುತ್ತಿವೆ. ಭೂಮಿ ಬೆಲೆಯು ಪ್ರತಿ ಚದರ ಅಡಿಗೆ 600 ರಿಂದ 4,500 ರೂಪಾಯಿ ವರೆಗೆ ಇದೆ. ಅಪಾರ್ಟ್ಮೆಂಟ್ ಬೆಲೆಗಳು ಪ್ರತಿ ಚದರ ಅಡಿಗೆ 7,000 ರಿಂದ 9,950 ರೂಪಾಯಿ ವರೆಗೆ ಇದೆ. ಕನಕಪುರದಲ್ಲಿ ಫ್ಲಾಟ್‌ಗಳ ಸರಾಸರಿ ಆಸ್ತಿ ದರ ಪ್ರತಿ ಚದರ ಅಡಿಗೆ 7,950 ಇದೆ ಎಂದು 99acres.com ವರದಿ ಮಾಡಿದೆ.
ಕನಕಪುರ ರಸ್ತೆಯಂತಹ ಕೆಲವು ಪ್ರದೇಶಗಳಲ್ಲಿ ಆಸ್ತಿ ಮೌಲ್ಯದಲ್ಲಿ ಹೆಚ್ಚಳ ಕಂಡುಬಂದಿದೆ. 2023ನೇ ಸಾಲಿಗೆ ಹೋಲಿಕೆ ಮಾಡಿದರೆ ಈಗ ಭೂಮಿಯ ಬೆಲೆಯು ಶೇ 3% ರಿಂದ 5% ರಷ್ಟು ಹೆಚ್ಚಳವಾಗಿದೆ.
ಭೂಮಿ: ಪ್ರತಿ ಚದರ ಅಡಿಗೆ 600 - 4,500 ರೂಪಾಯಿ
ಅಪಾರ್ಟ್‌ಮೆಂಟ್: ಪ್ರತಿ ಚದರ ಅಡಿಗೆ 7,000 - 9,950 ರೂಪಾಯಿ
ಫ್ಲಾಟ್ ದರ (ಕನಕಪುರ ರಸ್ತೆ): ಪ್ರತಿ ಚದರ ಅಡಿಗೆ 9,300 ರೂಪಾಯಿ
3 BHK ಅಪಾರ್ಟ್‌ಮೆಂಟ್‌ಗಳು: ಬೆಲೆ 2.28 - 2.53 ಕೋಟಿ ರೂಪಾಯಿ. 12,000/ಚದರ ಅಡಿಗೆ ಅಂದಾಜು.












Click it and Unblock the Notifications