Bengaluru Property: ಬೆಂಗಳೂರು ಆಸ್ತಿದಾರರಿಗೆ ಜಿಬಿಎ ಶಾಕ್: 23,000 ಆಸ್ತಿ ಮಾಲೀಕರಿಗೆ ನೋಟಿಸ್, ₹688 ಕೋಟಿ ನಷ್ಟ ಬಹಿರಂಗ
Bengaluru Property: ಬೆಂಗಳೂರಿನಲ್ಲಿನ ಸಾವಿರಾರು ಜನ ಆಸ್ತಿದಾರರಿಗೆ ಶಾಕ್ ಮುಟ್ಟಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತೊಮ್ಮೆ ಮುಂದಾಗಿದೆ. ಬೆಂಗಳೂರಿನಲ್ಲಿ ಆಸ್ತಿದಾರರ ಆಸ್ತಿ ತೆರಿಗೆಯ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹದ್ದಿನ ಕಣ್ಣಿರಿಸಿದೆ. ಇದೀಗ ಬೆಂಗಳೂರಿನಲ್ಲಿ ಸುದೀರ್ಘ ಅವಧಿಯಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿದಾರರಿಗೆ ಬಿಸಿ ಮುಟ್ಟಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ನೋಟಿಸ್ ಸಹ ಜಾರಿ ಮಾಡಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 23,000 ಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನಲ್ಲಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ 23,000 ಕ್ಕೂ ಹೆಚ್ಚು ಆಸ್ತಿ ಮಾಲೀಕರಿಂದ ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಬರೋಬ್ಬರಿ 688 ಕೋಟಿ ರೂ. ತೆರಿಗೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು, ತಪ್ಪಾದ ಕಟ್ಟಡ ನಿರ್ಮಾಣ ಪ್ರದೇಶಗಳನ್ನು ಘೋಷಿಸಿದ ಅಥವಾ ಸ್ವಯಂ ಆಸ್ತಿ ಘೋಷಣೆಯ ಸಂದರ್ಭದಲ್ಲಿ ತಪ್ಪಾದ ಮಾಹಿತಿಯನ್ನು ನೀಡಿರುವ ಆರೋಪದ ಮೇಲೆ 23,000 ಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಶೋ-ಕಾಸ್ ನೋಟಿಸ್ ನೀಡಲಾಗಿದೆ.

ಬೆಂಗಳೂರಿನಲ್ಲಿ ಈ ಹಿಂದೆ ಆಸ್ತಿದಾರರಿಗೆ ಸ್ವಯಂ ಆಸ್ತಿ ಘೋಷಣೆ ನಿಯದಮ ಅಡಿಯಲ್ಲಿ ಅವರವರ ಆಸ್ತಿಯ ವಿವರವನ್ನು ಅವರೇ ನಮೂದಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರ ಅವಧಿಯಲ್ಲಿ ಈ ಅವಕಾಶವನ್ನು ನೀಡಲಾಗಿತ್ತು. ಆದರೆ ಹಲವು ಆಸ್ತಿದಾರರು ಸ್ವಯಂ ಆಸ್ತಿ ಘೋಷಣೆಯಲ್ಲಿ ಮೋಸ ಮಾಡಿರುವುದು ಇತ್ತೀಚಿನ ವರ್ಷಗಳಲ್ಲಿ ಬಹಿರಂಗವಾಗಿತ್ತು. ಈ ರೀತಿ ಆಸ್ತಿದಾರರು ತಪ್ಪಾಗಿ ಆಸ್ತಿ ಘೋಷಣೆ ಮಾಡಿಕೊಂಡಿರುವುದರಿಂದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳಿಗೆ ಸಂಸ್ಥೆಗಳಿಗೆ ₹688 ಕೋಟಿ ನಷ್ಟವಾಗಿದೆ ಎಂದು ಕಂದಾಯ ಮತ್ತು ಐಟಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮಾಹಿತಿ ನೀಡಿದ್ದಾರೆ.
Bengaluru Property: ಡ್ರೋನ್ ಸಮೀಕ್ಷೆಯಲ್ಲಿ ಆಸ್ತಿದಾರರ ಮೋಸ ಬಹಿರಂಗ
ಬೆಂಗಳೂರಿನಲ್ಲಿ ಈಚೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆಸ್ತಿಗಳ ವಿವರವನ್ನು ಕಲೆಹಾಕುವ ಉದ್ದೇಶದಿಂದ ಡ್ರೋನ್ ಸಮೀಕ್ಷೆಯನ್ನು ನಡೆಸಿತ್ತು. ಈ ಡ್ರೋನ್ ಸಮೀಕ್ಷೆಯಲ್ಲಿ ಆಸ್ತಿದಾರರು ಮಾಡಿರುವ ಮೋಸ ಬಹಿರಂಗವಾಗಿತ್ತು. ಜಿಬಿಎ ಕಂದಾಯ ಇಲಾಖೆಯಿಂದ ಪಡೆದ ಡ್ರೋನ್ ಸಮೀಕ್ಷೆಯ ಡೇಟಾವನ್ನು ಬಳಸಿಕೊಂಡು ಈ ಆಸ್ತಿಗಳನ್ನು ಗುರುತಿಸಲಾಗಿದೆ. ನಂತರ ಯಾವುದೇ ತಪ್ಪಾದ ಫ್ಲ್ಯಾಗ್‌ಗಿಂಗ್‌ಗಳನ್ನು ಫಿಲ್ಟರ್ ಮಾಡಲು ಕ್ಷೇತ್ರ ಪರಿಶೀಲನೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‌ಗಳಲ್ಲಿ ಸುಮಾರು 170 ವಾರ್ಡ್‌ಗಳಲ್ಲಿ ಕಂದಾಯ ಇಲಾಖೆ ನಡೆಸಿದ ಡ್ರೋನ್ ಸಮೀಕ್ಷೆ ನಡೆಸಿತ್ತು.
Bengaluru Property: 15,000 ಆಸ್ತಿಗಳ ಪರಿಶೀಲನೆ
ಇನ್ನು ಬೆಂಗಳೂರಿನಲ್ಲಿ 15,000 ಆಸ್ತಿಗಳ ಪರಿಶೀಲನೆ ಮಾಡಲಾಗಿದೆ ಎಂದು ಮುನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ. ನಾವು ಡ್ರೋನ್ ಸಮೀಕ್ಷೆ ವರದಿಗಳನ್ನು ಮಾತ್ರ ಅವಲಂಬಿಸಿದ್ದೇವೆ ಎನ್ನುವುದು ತಪ್ಪು ಕಲ್ಪನೆ . ನಮ್ಮ ಅಧಿಕಾರಿಗಳು ಮನೆ - ಮನೆ ಸಮೀಕ್ಷೆ ಮಾಡಿದ್ದಾರೆ. ಆಸ್ತಿಗಳ ವಿವರ ಮತ್ತು ಎಷ್ಟು ಅಂತಸ್ತಿನ ಮಹಡಿಗಳಿವೆ ಎಂದು ಪರಿಶೀಲನೆ ಮಾಡಿದ್ದಾರೆ. ಅಲ್ಲದೆ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ತಪ್ಪು ವಿವರಗಳನ್ನು ಘೋಷಿಸಿದವರಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ಈ ಹಿಂದೆ ಒಂದು ವರ್ಷದಲ್ಲಿ 15,000 ಆಸ್ತಿಗಳನ್ನು ಪರಿಷ್ಕರಿಸಲಾಗಿತ್ತು ಎಂದೂ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications