Bengaluru Property: ಬೆಂಗಳೂರಲ್ಲಿ ಭೂಮಿ, ಪ್ರಾಪರ್ಟಿ ಮಾರಾಟ ಮಾಡಬೇಡಿ ತಜ್ಞರ ಟ್ವೀಟ್ ವೈರಲ್
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಭೂಮಿ ಹಾಗೂ ಪ್ರಾಪರ್ಟಿಗೆ ಬಂಗಾರದ ಬೆಲೆ ಇದೆ. ಈ ರೀತಿ ಇರುವಾಗಲೇ ಬೆಂಗಳೂರಿಗೆ ಸಾಗರೋಪಾದಿಯಲ್ಲಿ ವಲಸಿಗರು ಬರುವ ಸಾಧ್ಯತೆ ಎನ್ನುವ ವಿಚಾರವು ಹೆಚ್ಚು ಚರ್ಚೆ ಆಗುತ್ತಿದೆ. ತಜ್ಞರೊಬ್ಬರು ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಹಾಗೂ ಪ್ರಾಪರ್ಟಿ ಮಾರಾಟ ಮಾಡಬೇಡಿ ಎಂದಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್ಗೆ ಒಳ್ಳೆಯ ಬೆಲೆ ಇದೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಭೂಮಿಯ ಬೆಲೆಯು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಭೂಮಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ನಡುವೆ ತಜ್ಞರೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಲ್ಲಿ ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಐಟಿ ಬೇಡಿಕೆ, ಮೂಲಸೌಕರ್ಯ ಬೆಳವಣಿಗೆ (ಮೆಟ್ರೋ, ವಿಮಾನ ನಿಲ್ದಾಣ ವಿಸ್ತರಣೆ) ಮತ್ತು ನಗರ ಮಿತಿಗಳ ವಿಸ್ತರಣೆ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ವಿಶೇಷವಾಗಿ ದೇವನಹಳ್ಳಿ, ಸರ್ಜಾಪುರ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದೆ.
ಇದರೊಂದಿಗೆ ಬೆಂಗಳೂರು ಉತ್ತರ, ಪೂರ್ವ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾರ್ಷಿಕವಾಗಿ ಶೇ 5ರಿಂದ 12 ಏರಿಕೆ ಕಂಡಿದೆ. ಹೊಸ ಮೆಟ್ರೋ ಮಾರ್ಗಗಳು, ಸುಧಾರಿತ ರಸ್ತೆ ಅಭಿವೃದ್ಧಿ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ (ಟರ್ಮಿನಲ್ 3) ಸಂಪರ್ಕ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಭೂಮಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಭೂಮಿ ಮಾರಾಟ ಮಾಡಬೇಡಿ
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲ ಬಂದಿದೆ. ಆದರೆ ಈಗ ಯಾವುದೇ ಕಾರಣಕ್ಕೂ ಭೂಮಿ / ಪ್ರಾಪರ್ಟಿ ಮಾರಾಟ ಮಾಡದೆ ಇದನ್ನು ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಮಾರಾಟ ಮಾಡುವಂತೆ ಅಥವಾ ಪ್ರಾಪರ್ಟಿ ವ್ಯಾಲ್ಯೂ ಉಳಿಸಿಕೊಳ್ಳುವಂತೆ ಐಟಿ ವಾಸ್ತುಶಿಲ್ಪಿ ಅಮರನಾಥ್ ಶಿವಶಂಕರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
ಕನ್ನಡಿಗರೇ - ಬೆಂಗಳೂರು ಮತ್ತು ಬೆಂಗಳೂರಿಗೆ ಹತ್ತಿರದಲ್ಲಿ, ಕರ್ನಾಟಕದ ಯಾವ ಮೂಲೆಯಲ್ಲಾದರೂ ಸರಿ ನಿಮ್ಮ ಭೂಮಿ ಇದ್ದರೆ ದಯವಿಟ್ಟು ಕಾಪಾಡಿಕೊಳ್ಳಿ. ಉಳಿಸಿಕೊಳ್ಳಿ, ಸದ್ಬಳಕೆ ಮಾಡಿಕೊಳ್ಳಿ. ಉತ್ತರ ಭಾರತದಲ್ಲಿನ ಗಾಳಿ, ನೀರು, ಉದ್ಯೋಗ ಹಾಗೂ ಕಾನೂನು ಸುವ್ಯವಸ್ಥೆ ಮುಂತಾದ ಮೂಲಭೂತ ಸಮಸ್ಯೆಯಿಂದ ಸಾಗರೋಪಾದಿಯಾಗಿ ವಲಸೆ ಬರುತ್ತಾರೆ.
ಕನ್ನಡಿಗರೇ - ಬೆಂಗಳೂರು ಮತ್ತು ಬೆಂಗಳೂರಿಗೆ ಹತ್ತಿರದಲ್ಲಿ, ಕರ್ನಾಟಕದ ಯಾವ ಮೂಲೆಯಲ್ಲಾದರೂ ಸರಿ ನಿಮ್ಮ ಭೂಮಿ ಇದ್ದರೆ ದಯವಿಟ್ಟು ಕಾಪಾಡಿಕೊಳ್ಳಿ, ಉಳಿಸಿಕೊಳ್ಳಿ, ಸದ್ಬಳಕೆ ಮಾಡಿಕೊಳ್ಳಿ.
— Amarnath Shivashankar (@Amara_Bengaluru) December 28, 2025
ಉತ್ತರ ಭಾರತದಲ್ಲಿನ ಗಾಳಿ ನೀರು ಉದ್ಯೋಗ ಕಾನೂನು ಸುವ್ಯವಸ್ಥೆ ಮುಂತಾದ ಮೂಲಭೂತ ಸಮಸ್ಯೆಯಿಂದ ಸಾಗರೋಪಾದಿಯಾಗಿ ವಲಸೆ ಬರುತ್ತಾರೆ. ವಲಸೆ ತಡಿಯುವುದಕ್ಕೆ…
ವಲಸೆ ತಡಿಯುವುದಕ್ಕೆ ಆಗದಿದ್ದರೂ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಒಳ್ಳೆ ದುಡ್ಡು ಆದರೂ ಮಾಡಬಹುದು. ಭಾವನಾತ್ಮಕವಾಗಿ ಕೊರಗಿ ಪ್ರಯೋಜನವಿಲ್ಲ. ಪರಿಸ್ಥಿತಿಯನ್ನು ಲಾಭವಾಗಿ ತಿರುಗಿಸಿಕೊಳ್ಳಬೇಕು ಅಷ್ಟೇ ಎಂದು ಅವರು ಹೇಳಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿಗೆ ವಲಸೆ ಪ್ರಮಾಣ ಹೆಚ್ಚಳ ಸಾಧ್ಯತೆ
ಇನ್ನು ಬೆಂಗಳೂರಿಗೆ ದೆಹಲಿ ಸೇರಿದಂತೆ ವಿವಿಧ ನಗರಗಳಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಶೇ 40ರಷ್ಟು ದೆಹಲಿ ನಿವಾಸಿಗಳು ದೆಹಲಿ ಬಿಡುವ ಮನಸ್ಸು ಮಾಡಿದ್ದಾರೆ. ಈ ರೀತಿ ನಗರ ಬಿಡುವವರ ಮೊದಲ ಆಯ್ಕೆ ಬೆಂಗಳೂರೇ ಆಗಿದೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ











Click it and Unblock the Notifications